ತುಮಕೂರು ವಿಶ್ವವಿದ್ಯಾಲಯ: ಜನವರಿ 24ರಂದು 8ನೇ ಘಟಿಕೋತ್ಸವ

ತುಮಕೂರು, ಶನಿವಾರ, 24 ಜನವರಿ 2015 (16:52 IST)

ರಾಷ್ಟ್ರದ ಮೂವರು ಗಣ್ಯರಿಗೆ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲು ವಿಶ್ವವಿದ್ಯಾಲಯ ನಿರ್ಧರಿಸಿದ್ದು, ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್, ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದ ಮಾಜಿ ಹಿರಿಯ ವಿಜ್ಞಾನಿ ಟಿ.ಆರ್.ಅನಂತರಾಂ ಹಾಗೂ ಕನ್ನಡ ಸಾಹಿತಿ ಬರಗೂರು ಅವರಿಗೆ ನಗರದಲ್ಲಿ ಜನವರಿ 24ರಂದು ನಡೆಯಲಿರುವ 8ನೇ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುವುದು ಎಂದು ತುಮುಕೂರು ವಿಶ್ವವಿದ್ಯಾಲಯದ ಕುಲಪತಿ ಎ.ಹೆಚ್.ರಾಜಾಸಾಬ್ ತಿಳಿಸಿದ್ದಾರೆ. 
 
ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಘಟಿಕೋತ್ಸವದ ಮುಖ್ಯಸ್ಥರಾಗಿದ್ದು, ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ವಿಶ್ವವಿದ್ಯಾಲಯದ ಧನ ಆಯೋಗದ ಉಪಾಧ್ಯಕ್ಷ ಪ್ರೊ.ಹೆಚ್.ದೇವರಾಜ್ ಅವರು ಮುಖ್ಯ ಅತಿಥಿಗಳಾಗಿದ್ದು, ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಿದ್ದಾರೆ. ಇನ್ನು ಸಮಾರಂಭದಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಸೇರಿದಂತೆ ಇತರೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು. 
 
ಈ ಘಟಿಕೋತ್ಸವದಲ್ಲಿ ಒಂದು ಡಿ.ಲಿಟ್, ಒಂದು ಪಿಹೆಚ್‌ಡಿ, 1208 ಸ್ನಾತಕೋತ್ತರ ಹಾಗೂ 7297 ಮಾಡಲಿದ್ದು, ಈ ಎಲ್ಲಾ ವಿದ್ಯಾರ್ಥಿಗಳೂ ಕೂಡ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯವು ಒಟ್ಟು 73 ಬಂಗಾರದ ಪದಕಗಳನ್ನು ಪ್ರದಾನ ಮಾಡುತ್ತಿದ್ದು,  56 ಪದಕಗಳನ್ನು ದಾನಿಗಳು ದಾನ ನೀಡಿದ್ದಾರೆ. ಇದರ ಜೊತೆಗೆ ನಾಲ್ಕು ನಗದು ಬಹುಮಾನಗಳನ್ನೂ ವಿತರಿಸಲಾಗುವುದು ಎಂದರು. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

15 ವರ್ಷದ ಬಾಲಕಿಯ ವಿವಾಹ ನಿಲ್ಲಿಸಿದ ಸಹಪಾಠಿ ವಿದ್ಯಾರ್ಥಿಗಳು

ಚೆನ್ನೈ: 10ನೇ ತರಗತಿಯ ವಿದ್ಯಾರ್ಥಿಗಳು ಚಾಣಾಕ್ಷತನ ಮೆರೆದು ಪೊಲೀಸರಿಗೆ ಸಕಾಲದಲ್ಲಿ ಮಾಹಿತಿ ನೀಡಿ 15 ...

news

ಬೆಂಗಳೂರಿನಲ್ಲಿ ಗೌಡರಿಗೆ ಹೇರಳ ಆಸ್ತಿಯಿದೆ, ಎಲ್ಲಿ ಬೇಕಾದ್ರೂ ಶೆಡ್ ಹಾಕ್ಕೊಳ್ಳಲಿ: ಡಿಕೆಶಿ ವ್ಯಂಗ್ಯ

ಹಾಸನ: ಜೆಡಿಎಸ್ ಕಚೇರಿ ವಿಚಾರವನ್ನು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ನಗರದಲ್ಲಿ ಇಂದು ಅಣಕಿಸಿದ್ದು, ...

news

ದೆಹಲಿಯಲ್ಲಿ ಸ್ವಚ್ಛ, ಪರಿಣಾಮಕಾರಿ ಆಡಳಿತ ನೀಡುತ್ತೇವೆ: ಕಿರಣ್ ಬೇಡಿ

ಪ್ರಬಲ, ಪರಿಣಾಮಕಾರಿ ಆಡಳಿತ ದೆಹಲಿಯ ತುರ್ತು ಅಗತ್ಯವಾಗಿದ್ದು, ನನ್ನ 40 ವರ್ಷಗಳ ಸೇವಾನುಭವವನ್ನು ದೆಹಲಿಯ ...

news

23 ವರ್ಷ ವಯಸ್ಸಿನ ಶಾಲಾ ಶಿಕ್ಷಕಿಯನ್ನು ಅಪಹರಿಸಿ ಅತ್ಯಾಚಾರ

ಬರೇಲಿ: ಶಾಲೆಯಿಂದ ಮನೆಗೆ ಮರಳುತ್ತಿರುವ ಶಿಕ್ಷಕಿಯ ಮೇಲೆ ಯುವಕನೊಬ್ಬಅತ್ಯಾಚಾರವೆಸಗಿದ ಘಟನೆ ಫಿಲಿಬಿಟ್ ...