20 ಅಡಿ ಅಳದ ರಾಜಕಾಲುವೆಗೆ ಸ್ವಚ್ಚತಾ ಸಿಬ್ಬಂದಿ ಬಿದ್ದು ಬೆನ್ನುಮುಳೆ ಮುರಿದಿದೆ.ನಂದಿನಿ ಲೇಜೌಟ್ ನ ಶ್ರೀಕಂಠ ನಗರದಲ್ಲಿ ಘಟನೆ ನಡೆದಿದೆ.ಮೇ 27ರಂದು ಸ್ವಚ್ಚತಾ ಕೆಲಸ ಮಾಡ್ತಿದ್ದ ಸಿಬ್ಬಂದಿ ರತ್ನಮ್ಮ ರಾಜಕಾಲುವೆ ಮೋರಿ ಮೇಲೆ ಹಾಕಿದ್ದ ಕಸ ತೆಗೆಯುತ್ತಿದ್ದರು.ಕಸದ ಕೆಳಗೆ ದೊಡ್ಡ ಮ್ಯಾನ್ ಹೋಲ್ ಇರುವ ಅರಿವಿಲ್ಲದೆ ಸೀದಾ ಮೋರಿಗೆ ಬಿದ್ದಿದ್ದಾರೆ.ಬಳಿಕ ಜೊತೆಯಿದ್ದ ಇನ್ನೊಬ್ಬ ಸಿಬ್ಬಂದಿ ಸ್ಥಳೀಯರನ್ನ ಕರೆದಿದ್ದಾರೆ.