ಡ್ಯಾನ್ಸ್ ಮಾಸ್ಟರ್ ಕಿರುಕುಳಕ್ಕೆ ಬಲಿಯಾದಳಾ ಯುವತಿ..?

ಬೆಂಗಳೂರು, ಮಂಗಳವಾರ, 31 ಅಕ್ಟೋಬರ್ 2017 (11:47 IST)

Widgets Magazine

ಬೆಂಗಳೂರು: ಡ್ಯಾನ್ಸ್ ಕ್ಲಾಸ್ ನಲ್ಲೇ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಅಟ್ಟೂರು ಲೇಔಟ್‌ನಲ್ಲಿ ನಡೆದಿದೆ.


ಚಂದನಾ(17) ಆತ್ಮಹತ್ಯೆಗೆ ಶರಣಾದ ಯುವತಿ. ಡ್ಯಾನ್ಸ್ ಮಾಸ್ಟರ್ ಸತೀಸ್ ಕಿರುಕುಳದಿಂದ ಈ ಘಟನೆ ನಡೆದಿದೆ ಎಂದು ಚಂದನಾ ಪೋಷಕರು ಆರೋಪಿಸಿದ್ದಾರೆ. ಘಟನೆ ನಂತರ ಆಕ್ರೋಶಗೊಂಡ ಬಾಲಕಿಯ ಸಂಬಂಧಿಕರು ಡ್ಯಾನ್ಸ್ ಮಾಸ್ಟರ್ ಸತೀಸ್ ಗೆ ಮನಬಂದಂತೆ ಥಳಿಸಿದ್ದಾರೆ.

ಡ್ಯಾನ್ಸ್ ಕ್ಲಾಸ್‌ಗೆ ಹೋಗುತ್ತಿದ್ದಾಗ ಅಲ್ಲಿ ಚಂದನಾಗೆ ಸತೀಶ್‌ ಪರಿಚಿತನಾಗಿದ್ದಾನೆ. ಆದ್ರೆ ನಿನ್ನೆ ರಾತ್ರಿ ಚಂದನಾ ಅಲ್ಲಿಗೆ ಹೋಗಿದ್ಯಾಕೆ ಎಂಬ ಪ್ರಶ್ನೆ ಪೊಲೀಸರಿಗೆ ಕಾಡುತ್ತಿದೆ. ಹೀಗಾಗಿ ಸತೀಶ್ ಆಕೆಯನ್ನು ಅಲ್ಲಿಗೆ ಕರೆಸಿಕೊಂಡು ಕಿರುಕುಳ ನೀಡಿರಬಹುದು. ಇದರಿಂದ ಬೇಸತ್ತು ಆಕೆ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 

ಈ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತ್ಮಹತ್ಯೆಗೆ ಪ್ರಚೋದನೆ ಮತ್ತು ಕಿರುಕುಳ ನೀಡಿದ ಆರೋಪದ ಮೇಲೆ ಸತೀಶ್‌ ನನ್ನು ಬಂಧಿಸಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮಸೂದೆ ತಿದ್ದುಪಡಿ ವಿರೋಧಿಸಿ ಖಾಸಗಿ ವೈದ್ಯರ ಪ್ರತಿಭಟನೆ

ಬೆಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಮಸೂದೆ ತಿದ್ದುಪಡಿ ವಿರೋಧಿಸಿ ಖಾಸಗಿ ವೈದ್ಯರು ಪ್ರತಿಭಟನೆಗೆ ...

news

ಎಟಿಎಂನಲ್ಲಿ 2 ಸಾವಿರ ರೂ. ಮುಖಬೆಲೆ ನಕಲಿ ನೋಟು ಪತ್ತೆ

ಬೆಂಗಳೂರು: ಲಕ್ಕಸಂದ್ರದ ಸಮೀಪದಲ್ಲಿರುವ ಎಕ್ಸಿಸ್ ಬ್ಯಾಂಕ್ ಶಾಖೆಯ ಎಟಿಎಂನಲ್ಲಿ 2 ಸಾವಿರ ರೂ. ಮುಖಬೆಲೆಯ ...

news

ಸೆಕ್ಸ್ ಮಾಡಲೊಪ್ಪದ ಪತ್ನಿಗೆ ಈತ ನೀಡಿದ ಶಿಕ್ಷೆಯೇನು ಗೊತ್ತಾ?

ನವದೆಹಲಿ: ಸೆಕ್ಸ್ ಮಾಡಲು ಸಮ್ಮತಿಸದ ಪತ್ನಿಗೆ ಪತಿ ಮಹಾಶಯ ಆಸಿಡ್ ಎರಚಿದ ಪ್ರಕರಣ ಉತ್ತರ ಪ್ರದೇಶದಲ್ಲಿ ...

news

‘ಜನ ಈಗ ಏನಿದ್ದರೂ ರಾಹುಲ್ ಗಾಂಧಿ ಮಾತೇ ಕೇಳೋದು’

ಮುಂಬೈ: ಮತ್ತೊಮ್ಮೆ ಶಿವಸೇನೆ ಬಿಜೆಪಿ ವಿರುದ್ಧ ಗುಟುರು ಹಾಕಿದೆ. ಬಿಜೆಪಿ ತನ್ನ ಪ್ರಥಮ ಶತ್ರು ಎಂದಿರುವ ...

Widgets Magazine