ಟಿವಿ ರಿಪೋರ್ಟರ್ ಎಂದು ಸುಳ್ಳು ಹೇಳಿದ ವ್ಯಕ್ತಿ ಪೊಲೀಸ್ ವಶಕ್ಕೆ

ಕಾರವಾರ, ಶುಕ್ರವಾರ, 14 ಸೆಪ್ಟಂಬರ್ 2018 (18:38 IST)

ಎಂದು ಹೇಳಿಕೊಂಡು ಓಡಾಡುತ್ತಿದ್ದ ಯುವಕನನ್ನುಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಜ್ಯದ ಖಾಸಗಿ ಚಾನೆಲ್ ವೊಂದರ  ವರದಿಗಾರನೆಂದು ಹೊನ್ನಾವರ ಪಟ್ಟಣದಲ್ಲಿ ಓಡಾಡಿಕೊಂಡಿದ್ದ ಅಂಕೋಲಾ ಮೂಲದ ಲೂಯಿಸ್ ಎನ್ನುವವನನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ.
ಪಿಎಸ್ಐ ಸಂತೋಷ್ ಕಾಯ್ಕಿಣಿ ಅವರಿಗೆ ಕರೆ ಮಾಡಿದ್ದ ಲೂಯಿಸ್, ತನಗೂ ಹಾಗೂ ಇನ್ಯಾರದ್ದೋ ನಡುವೆ ಗಲಾಟೆ ನಡೆಯಲಿದೆ. ಕೂಡಲೇ ಸ್ಥಳಕ್ಕಾಗಮಿಸುವಂತೆ ಗೇರುಸೊಪ್ಪಾ ವೃತ್ತಕ್ಕೆ ಕರೆಯಿಸಿ ಕೊಂಡಿದ್ದ. ಈ ವೇಳೆ ಯುವತಿ ಯೊಬ್ಬಳ ಜತೆ ಇದ್ದಲೂಯಿಸ್, ಪೊಲೀಸರು ಬರುತ್ತಿದ್ದಂತೆ ಯಾರಿಗೋ ಕರೆಮಾಡಿ ಅಸಭ್ಯವಾಗಿ ಬೈದಾಡುತ್ತಿದ್ದ. ಈ ವೇಳೆ ಪೊಲೀಸರು ಬೈಕ್ ನ ದಾಖಲೆಗಳನ್ನು ಪರಿಶೀಲಿಸಿದಾಗ, ತಾನೊಬ್ಬ ಚಾನೆಲ್ ವರದಿಗಾರ. ನಾನು ಹೇಳಿದಂತೆ ನೀವು ನಡೆದುಕೊಳ್ಳಬೇಕು ಎಂದಿದ್ದಾನೆ. ಪೊಲೀಸರು ಈ ವೇಳೆ ಚಾನೆಲ್ ನ ಎಂಡಿಯವರೊಂದಿಗೆ ದೂರವಾಣಿ  ಕರೆಮಾಡಿ ಮಾತನಾಡಿದಾಗ ಈತ ವರದಿಗಾರ ಅಲ್ಲವೆಂಬುದು ತಿಳಿದು ಬಂದಿದೆ.

ಲೂಯಿಸ್ ನನ್ನು ವಶಕ್ಕೆ ಪಡೆದ ಪೊಲೀಸರು, ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಕುರಿತಾಗಿ ದಾಖಲಿಸಿಕೊಂಡು ಬೈಕ್ ನ್ನು ಸೀಜ್ ಮಾಡಿದ್ದಾರೆ.

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶಾಲಾ ವಿದ್ಯಾರ್ಥಿ ಮೇಲೆ ಕಂಡಕ್ಟರ್ ನಿಂದ ಹಲ್ಲೆ  

ಬಸ್ ನಲ್ಲಿ ಶಾಲೆಗೆ ತೆರಳುತಿದ್ದ ವಿದ್ಯಾರ್ಥಿಗಳ ಮೇಲೆ ಕಂಡಕ್ಟರ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ...

news

ಕುಡಿಯುವ ನೀರಿನ ಸಮಸ್ಯೆ: ಪಂಚಾಯಿತಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ಕುಡಿಯುವ ನೀರಿಗಾಗಿ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಖಾಲಿ ಕೊಡ ಹಿಡಿದು ಗ್ರಾಮ ...

news

ನೂರಕ್ಕೆ ನೂರರಷ್ಟು ಸರಕಾರ ಭದ್ರ ಎಂದ ಮಾಜಿ ಸಿಎಂ

ಹೆಚ್.ಡಿ. ಕುಮಾರಸ್ವಾಮಿಯವರನ್ನ 5 ವರ್ಷ ಸಿಎಂ ಆಗಿರಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಐದು ವರ್ಷ ...

news

ಶಾಸಕ ಸತೀಶ್ ಜಾರಕಿಹೊಳಿ ಹೇಳ್ತಿರೋದೇನು ಗೊತ್ತಾ?

ಕಾಂಗ್ರೆಸ್ ಹೈಕಮಾಂಡ್ ನಿಂದ ಜಾರಕಿಹೊಳಿ ಸಹೋದರರಿಗೆ ವಾರ್ನಿಂಗ್ ವಿಚಾರ ಬೆಳಗಾವಿಯಲ್ಲಿ ಶಾಸಕ ಸತೀಶ್ ...

Widgets Magazine