ಬೆಂಗಳೂರು ರೌಡಿಪಾಳಯದಲ್ಲಿ ಪಾರುಪತ್ಯ ಸಾಧಿಸಿರೋ ರೌಡಿಗಳು ಅಂದ್ರೆ ಅದು ಸೈಲೆಂಟ್ ಸುನೀಲ, ವಿಲ್ಸನ್ ಗಾರ್ಡನ್ ನಾಗ ಮತ್ತು ಡಬಲ್ ಮೀಟರ್ ಮೋಹನ. ಸಿಟಿಯಲ್ಲಿ ಸುನೀಲ ಮತ್ತು ನಾಗ ಬದ್ದ ವೈರಿಗಳು ಒಬ್ಬರನ್ನೊಬ್ಬರು ಮುಗಿಸಲು ಹಪಹಪಿಸುತ್ತಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಇದೇ ಅನುಮಾನದ ಮೇರೆಗೆ ಸೈಲೆಂಟ್ ಸುನೀಲ, ನಾಗ ಹಾಗೂ ಮೋಹನನ್ನು ಸಿಸಿಬಿ ವಿಚಾರಣೆ ಕೂಡ ನಡೆಸಿತ್ತು.