ಜೆಡಿಎಸ್ ಪಕ್ಷದಿಂದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಸ್ಪರ್ಧೆ: ಕುಮಾರಸ್ವಾಮಿ

ಬೆಂಗಳೂರು, ಬುಧವಾರ, 25 ಅಕ್ಟೋಬರ್ 2017 (15:53 IST)

ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವಂತೆ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿಯವರಿಗೆ ಸೂಚಿಸಿದ್ದೇ. ಆದರೆ,ಅಷ್ಟರೊಳಗೆ ಕಾಂಗ್ರೆಸ್ ಪಕ್ಷವೇ ನಡಹಳ್ಳಿಯವರನ್ನು ಉಚ್ಚಾಟಿಸಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ,ಕುಮಾರಸ್ವಾಮಿ ಹೇಳಿದ್ದಾರೆ.
ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ನಡಹಳ್ಳಿಯವರು ಆತ್ಮಿಯ ಮಿತ್ರರು.ಹಿಂದೆಯೇ ನಡಹಳ್ಳಿ ಜೆಡಿಎಸ್‌ನಿಂದ ಸ್ಪರ್ಧಿಸಬೇಕಾಗಿತ್ತು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಎ.ಎಸ್.ಪಾಟೀಲ್ ನಡಹಳ್ಳಿ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.
 
ಕಾಂಗ್ರೆಸ್ ಪಕ್ಷದ ಉಚ್ಚಾಟನೆಯಿಂದ ನಡಹಳ್ಳಿಯವರಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಕಾನೂನು ಅಡ್ಡಿಯಾಗಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.
 
ರಾಷ್ಟ್ರಪತಿಯವರಿಗೆ ಗೌರವ ನೀಡಿ ಕಾರ್ಯಕ್ರಮದಲ್ಲಿ ಹಾಜರಾಗಿದ್ದೆ. ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ರಾಜ್ಯದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
 
ಇಂದಿನ ಕಾರ್ಯಕ್ರಮದಲ್ಲಿ ಸಾಕಷ್ಟು ಲೋಪದೋಷಗಳಿದ್ದವು. ಆದರೆ, ನಾನು ಲೋಪದೋಷಗಳ ಬಗ್ಗೆ ಮಾತನಾಡಲ್ಲ.  ಫೋಟೋಸೆಷೆನ್‌‌ನಲ್ಲಿ ಯಾರಿಗೆ ಎಷ್ಟು ಗೌರವ ಕೊಡಬೇಕು ಎನ್ನುವುದನ್ನು ರಾಜ್ಯ ಸರಕಾರ ಕಲಿಯಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು. 
 
ನನಗೆ ಇದು ಪ್ರತಿಷ್ಠೆಯ ವಿಷಯವಲ್ಲ. ಪೂರ್ವ ಸಿದ್ದತೆಯಿಲ್ಲದಿರುವುದರಿಂದ ನನಗೆ ಸ್ಥಾನ ನಿಗದಿ ಮಾಡಿಲ್ಲ. ಇದಕ್ಕೆ ಯಾವುದೋ ಅಧಿಕಾರಿಯನ್ನು ಬಲಿಪಶು ಮಾಡುವುದು ನನಗೆ ಇಷ್ಟವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

ಬ್ಯಾಂಕ್ ಮರು ಬಂಡವಾಳೀಕರಣ ಪ್ರಶಂಸಿಸಿದ ಅಮಿತ್ ಷಾ

ನವದೆಹಲಿ: ಬ್ಯಾಂಕ್ ಮರು ಬಂಡವಾಳೀಕರಣಕ್ಕೆ 2.11 ಲಕ್ಷ ಕೋಟಿ ರೂ.ಗಳನ್ನು ಒದಗಿಸುವ ಕೇಂದ್ರ ಸರ್ಕಾರದ ...

news

ಗಬ್ಬರ್ ಸಿಂಗ್ ಟ್ಯಾಕ್ಸ್ ರಾಹುಲ್ ಹೇಳಿಕೆಗೆ ಸಚಿವ ಜೇಟ್ಲಿ ಗರಂ

ನವದೆಹಲಿ: ಜಿಎಸ್‌ಟಿ ಎಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್ ಎನ್ನುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ...

news

ರಾಷ್ಟ್ರಪತಿ ಹುದ್ದೆ ದುರುಪಯೋಗಪಡಿಸಿಕೊಂಡ ಸರ್ಕಾರ: ಕೆ.ಎಸ್.ಈಶ್ವರಪ್ಪ

ಬೆಂಗಳೂರು: ರಾಜ್ಯ ಸರಕಾರ ರಾಷ್ಟ್ರಪತಿ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದೆ ಎಂದು ವಿಧಾನಪರಿಷತ್ ವಿಪಕ್ಷ ...

news

ಮದ್ಯ ಕುಡಿಸಿ 2 ವರ್ಷಗಳಿಂದ ತಾಯಿ, ಮೂವರು ಪುತ್ರಿಯರ ಮೇಲೆ ಅತ್ಯಾಚಾರ

ಪಲಕ್ಕಾಡ್(ಕೇರಳ): ಆಘಾತಕಾರಿ ಘಟನೆಯೊಂದರಲ್ಲಿ ದಲಿತ ಮಹಿಳೆ ಮತ್ತು ಆಕೆಯ ಮೂವರು ಪುತ್ರಿಯರಿಗೆ ಒತ್ತಾಯದಿಂದ ...

Widgets Magazine
Widgets Magazine