Widgets Magazine
Widgets Magazine

ವಿಶಿಷ್ಟ ಜಾತ್ರೆ: ದೇವರಿಗೆ ಸಿಗರೇಟ್ ಆರತಿ, ಮದ್ಯದಭಿಷೇಕ

ಕಾರವಾರ, ಸೋಮವಾರ, 6 ಮಾರ್ಚ್ 2017 (08:44 IST)

Widgets Magazine

ದೇವರಿಗೆ ಹೂವು, ಹಣ್ಣು, ತೆಂಗಿನಕಾಯಿ ಅರ್ಪಿಸಿ ಪೂಜೆ ಸಲ್ಲಿಸುವುದು ಸಾಮಾನ್ಯ. ಆದರೆ ದೇವರಿಗೆ ಮದ್ಯ, ಸಿಗರೇಟ್ ಅರ್ಪಿಸುವುದನ್ನು ನೋಡಿರುತ್ತೀರಾ? ಹೌದು ಇದು ಸತ್ಯ. ಇಂತಹ ವಿಶಿಷ್ಟ ಜಾತ್ರೆಯೊಂದು ಉತ್ತರ ಕನ್ನಡದ ಕಾರವಾರದ ಕೋಡಿಬಾಗ್‌ನಲ್ಲಿ ನಡೆಯುತ್ತದೆ. ಅಲ್ಲಿನ ಆರಾಧ್ಯ ದೈವ 'ಖಾಪ್ರಿ'ಗೆ ಸಿಗರೇಟ್ ಆರತಿ ಬೆಳಗಿ, ಮಾಡಿ ಕೋಳಿ ಮಾಂಸವನ್ನು ಅರ್ಪಿಸುತ್ತಾರೆ.
ಪ್ರತಿವರ್ಷ ಮಾರ್ಚ್ ತಿಂಗಳಲ್ಲಿ ನಡೆಯುವ ಈ ಜಾತ್ರೆ ಈ ಬಾರಿ ಮಾರ್ಚ್ 5 ರಂದು ವೈಭವೋಪೇತವಾಗಿ ನಡೆಯಿತು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಕ್ತಿದೇವತೆ ಎಂದು ಪ್ರಸಿದ್ಧನಾಗಿರುವ ಖಾಪ್ರಿ ದೇವರಿಗೆ ಹರಕೆ ಒಪ್ಪಿಸಿದರೆ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ. ಹೀಗಾಗಿ ಸ್ಥಳೀಯರು, ಪಕ್ಕದ ಗೋವಾ, ಮಹಾರಾಷ್ಟ್ರದ ಜನರು ಬಂದು ನಿನ್ನೆ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಕೇವಲ ಹಿಂದೂಗಳಷ್ಟೇ ಅಲ್ಲ ಅನ್ಯ ಧರ್ಮೀಯರು ಸಹ ಖಾಪ್ರಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಕ್ರಿಶ್ಚಿಯನ್ನರು ಮೇಣದಬತ್ತಿ ಹತ್ತಿ ಖಾಪ್ರಿ ದೇವರನ್ನು ಆರಾಧಿಸುತ್ತಾರೆ.
 
ಪೌರಾಣಿಕ ಹಿನ್ನೆಲೆ: ಮೂಲತಃ ದಕ್ಷಿಣ ಆಫ್ರಿಕಾದ ವ್ಯಕ್ತಿಯೋರ್ವ ಖಾಪ್ರಿ ದೇವರನ್ನು ಕೋಡಿಬಾಗದಲ್ಲಿ ತಂದು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದ. ಕೆಲ ಕಾಲದ ನಂತರ ಆತ ಇದಕ್ಕಿದ್ದಂತೆ ಕಾಣೆಯಾದ. ಆತ ಎಲ್ಲಿಗೆ ಹೋದ, ಏಕೆ ಹೋದ ಎಂದು ಯಾರಿಗೂ ತಿಳಿಯಲಿಲ್ಲ.
 
ಕೆಲ ದಿನದ ನಂತರ ಪರೆಸಪ್ಪ ಮನೆತನದವರಿಗೊಂದು (ದೇವಸ್ಥಾನದ ಅರ್ಚಕರು) . ಅದರಲ್ಲಿ ದೇವರ ಮೂರ್ತಿಯೊಂದು ಕಾಣಿಸಿಕೊಂಡು ನನಗೆ ಗುಡಿ ಕಟ್ಟಿ ಪೂಜೆ ಸಲ್ಲಿಸಿ. ಸಿಗರೇಟ್, ಮದ್ಯ, ಕೋಳಿ ಮಾಂಸ ಅರ್ಪಿಸಿ. ನಾನು ಭಕ್ತರ ಇಷ್ಟಾರ್ಥ ಪೂರೈಸುತ್ತೇನೆ ಎಂದು ಹೇಳಿದಂತಾಯಿತು.
 
ರಾತ್ರಿ ಕಂಡ ಕನಸಿನಂತೆ ಪರೆಸಪ್ಪ ಮನೆತನದ ಆ ವ್ಯಕ್ತಿಗೆ ಕಾಳಿ ನದಿ ತೀರದಲ್ಲಿ ಕಲ್ಲಿನ ಮೂರ್ತಿಯೊಂದು ದೊರಕಿತು. ಆ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ಇಂದಿನವರೆಗೆ ವರ್ಷಕ್ಕೊಮ್ಮೆ ಖಾಪ್ರಿ ದೇವರ ಜಾತ್ರೆ ನಡೆಯುತ್ತದೆ. ಖಾಪ್ರಿ ಅವರಿಗೆ ಸಿಗರೇಟ್, ಸಾರಾಯಿ ಹಾಗೂ ಕೋಳಿ ಮಾಂಸ ಇಷ್ಟವಾಗಿತ್ತು. ಆ ಕಾರಣದಿಂದ ಭಕ್ತರು ಈ ಎಲ್ಲ ವಸ್ತುಗಳಿಂದ ಹರಕೆ ತೀರಿಸುತ್ತಾರೆ. ಕೆಲವರು ದೇವಾಲಯದ ಹೊರಗೆ ಮೇಣದ ಬತ್ತಿಯನ್ನು ಬೆಳಗಿಸುತ್ತಾರೆ. ಪ್ರತಿ ಬುಧವಾರ ಹಾಗೂ ಭಾನುವಾರ ಖಾಪ್ರಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಜಲ್ಲಿಕಟ್ಟುಗೆ 2 ಬಲಿ: 60ಕ್ಕೂ ಹೆಚ್ಚು ಮಂದಿಗೆ ಗಾಯ

ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಆಯೋಜನೆ ವೇಳೆ ಸ್ಪರ್ಧಾಳು ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ...

news

ಪುಲ್ವಾಮಾ ಎನ್`ಕೌಂಟರ್: ಇಬ್ಬರು ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ

ದಕ್ಷಿಣ ಕಾಶ್ಮೀರದ ಪುಲ್ವಾಮಾದ ಟ್ರಾಲ್`ನಲ್ಲಿ ನಡೆಯುತ್ತಿದ್ದ ಭದ್ರತಾ ಸಿಬ್ಬಂದಿ ಮತ್ತು ಉಗ್ರರ ನಡುವಿನ ...

news

ಭಾರತೀಯರ ಮೇಲೆ ಗುಂಡಿನ ದಾಳಿ ನಾಚಿಕೆಗೇಡಿನ ವಿಷಯ: ಕನ್ಸಾಸ್ ಗವರ್ನರ್

ಕನ್ಸಾಸ್`ನಲ್ಲಿ ತೆಲಂಗಾಣ ಮೂಲದ ಶ್ರೀನಿವಾಸ್ ಹತ್ಯೆ ಕುರಿತಂತೆ ಕನ್ಸಾಸ್ ಗವರ್ನರ್ ವಿಷಾಧ ...

news

ಆರ್‌ಎಸ್ಎಸ್ ಕಾರ್ಯಕರ್ತರ ಮೇಲೆ ಮಾರಣಾಂತಿಕ ದಾಳಿ

ಕೇರಳದಲ್ಲಿ ಎಡ ಮತ್ತು ಬಲ ಪಂಥೀಯರ ನಡುವಿನ ವೈಷಮ್ಯ ತಾರಕಕ್ಕೇರಿದ್ದು, ಆರ್‌ಎಸ್ಎಸ್ ಕಚೇರಿಯ ಮುಂದೆ ಬಾಂಬ್ ...

Widgets Magazine Widgets Magazine Widgets Magazine