ಮರಣಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡ ಯುವತಿ

ಮೈಸೂರು, ಶುಕ್ರವಾರ, 8 ಡಿಸೆಂಬರ್ 2017 (14:35 IST)

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಮರಣಪತ್ರ ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 

ಕೊಳ್ಳೆಗಾಲ ತಾಲ್ಲೂಕಿನ ಶಂಕರಾಪುರದ ಲಿಂಗರಾಜು ಅವರ ಪುತ್ರಿ ಸುನಂದ(25) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿಯಾಗಿದ್ದು, ಹೆಬ್ಬಾಳದಲ್ಲಿರುವ ಸ್ಪೈ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು ಎಂದು ತಿಳಿದುಬಂದಿದೆ.

ಮಹದೇಶ್ವರ ಬಡಾವಣೆಯಲ್ಲಿರುವ ಪಿಜಿಯಲ್ಲಿ ವಾಸವಿದ್ದ ಯುವತಿ, ಬೆಳಗ್ಗೆ ಬಹಳ ಹೊತ್ತಾದರೂ ರಾತ್ರಿ ಮಲಗಿದ ಯುವತಿ ಎದ್ದಿರಲಿಲ್ಲ. ಇತರೆ ಯುವತಿಯರು ರೂಮಿಗೆ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದ ಗೊತ್ತಾಗಿದೆ.

ವಿಜಯನಗರ ಠಾಣೆ ಪೊಲೀಸರು ಪರಿಶೀಲಿಸಿದಾಗ ಡೆತ್‍ನೋಟ್ ಸಿಕ್ಕಿದೆ. ಪ್ರೇಮ ವೈಫಲ್ಯದಿಂದ ಸುನಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿ ನಾಯಕರು ಹರಾಮ್‌ಕೋರರು: ಉಮೇಶ್ ಕತ್ತಿ

ಬೆಂಗಳೂರು: ಬಿಜೆಪಿ ನಾಯಕರು ಹರಾಮ್‌ಕೋರರು ಎಂದು ಬಿಜೆಪಿ ಮುಖಂಡ ಉಮೇಶ್ ಕತ್ತಿ ವಾಗ್ದಾಳಿ ನಡೆಸಿದ್ದಾರೆ.

news

ಮತ್ತೆ ಆನೆ ದಾಳಿ; ಭಯದಿಂದ ತತ್ತರಿಸಿದ ಗ್ರಾಮಸ್ಥರು!

ದಾವಣಗೆರೆ: ಚನ್ನಗಿರಿ ತಾಲೂಕಿನ ತ್ಯಾವಣಿಗೆಯಲ್ಲಿ ಗಣೇಶ್ (42) ಎಂಬುವವರು ಆನೆ ದಾಳಿಯಿಂದ ಗಂಭೀರವಾಗಿ ...

news

ಬಿಜೆಪಿ ತೊರೆಯಲ್ಲ, ಸಿಎಂ ಭೇಟಿ ಮಾಡಿಲ್ಲ- ಉಮೇಶಕತ್ತಿ

ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ತೊರೆಯುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ...

news

ಸರಣಿ ಕಳ್ಳತನಕ್ಕೆ ಬೆಚ್ಚಿ ಬಿದ್ದ ಜನರು

ಕೊಡಗು: ರಾತ್ರೋರಾತ್ರಿ ಎಂಟಕ್ಕೂ ಅಧಿಕ ಅಂಗಡಿಗಳಲ್ಲಿ ಕಳ್ಳತನ ಮಾಡಿರುವ ಘಟನೆಯೊಂದು ಕೊಡಗು ಜಿಲ್ಲೆಯ ...

Widgets Magazine
Widgets Magazine