ಕಾನೂನು ಪ್ರಕ್ರಿಯೆ ಮುಗಿದರೆ ಇಂದೇ ತೆಲಗಿ ಮರಣೋತ್ತರ ಪರೀಕ್ಷೆ

ಬೆಂಗಳೂರು, ಶುಕ್ರವಾರ, 27 ಅಕ್ಟೋಬರ್ 2017 (08:19 IST)

ಬೆಂಗಳೂರು: ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲ್‌ ತೆಲಗಿ(56) ನಿನ್ನೆ ಸಂಜೆ(ಅ.26) ಮೃತಪಟ್ಟಿದ್ದಾನೆ.


ಅಧಿಕ ರಕ್ತದೊತ್ತಡ, ಮೆದುಳು ಜ್ವರ, ಬಹು ಅಂಗಾಂಗ ವೈಫ‌ಲ್ಯದಿಂದ ಬಳಲುತ್ತಿದ್ದ ತೆಲಗಿ, 13 ದಿನದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಕಳೆದ ಮೂರುದಿನದಿಂದ ಐಸಿಯು ನಲ್ಲಿ ವೆಂಟಿಲೇಟರ್‌ ಮೂಲಕ ನೀಡುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಧ್ಯಾಹ್ನ 3:55ರ ಸುಮಾರಿಗೆ ಮೃತಪಟ್ಟಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.

ಚಿಕಿತ್ಸೆ ಫ‌ಲಿಸದೆ ತೆಲಗಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ಆಸ್ಪತ್ರೆಗೆ ತೆರಳಿ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಇಂದು ಮರಣೋತ್ತರ ಪರೀಕ್ಷೆ ನಡೆಯುವ ಸಾಧ್ಯತೆ ಇದೆ. ಬಳಿಕ ಇಂದೇ ಆತನ ಪತ್ನಿ, ಮಗಳು ಸನಾ ಸೇರಿದಂತೆ ಸಂಬಂಧಿಕರ ವಶಕ್ಕೆ ಮೃತದೇಹವನ್ನು ವೈದ್ಯರು ಹಸ್ತಾಂತರಿಸಲಿದ್ದಾರೆ. ಬೆಳಗಾವಿಯ ಖಾನಾಪುರದಲ್ಲಿ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತೆಲಗಿ ಕುಟುಂಬ ಮೂಲಗಳು ತಿಳಿಸಿವೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮದುವೆ ಯಾವಾಗ ಎಂದು ಪ್ರಶ್ನಿಸಿದ್ದಕ್ಕೆ ನಾಚಿ ನೀರಾದ ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ಯುವರಾಜ್ ರಾಹುಲ್ ಗಾಂಧಿ ಮದುವೆ ಸುದ್ದಿ ಮತ್ತೆ ಎದ್ದಿದೆ. ಎಲ್ಲೇ ಹೋದರೂ ಅವರ ಬಳಿ ...

news

ಸಿಬಿಐನಿಂದ ಜಾರ್ಜ್ ವಿರುದ್ಧ ಎಫ್‌ಐಆರ್: ಮೂವರು ಸಚಿವರೊಂದಿಗೆ ಸಿಎಂ ಚರ್ಚೆ

ಬೆಂಗಳೂರು: ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ. ಜಾರ್ಜ್ ...

news

ದಾವೂದ್ ಭಾರತಕ್ಕೆ ಮರಳುವುದು ಮರೆತುಬಿಡಿ: ಮಾಜಿ ಪೊಲೀಸ್ ಆಯುಕ್ತ

ಮುಂಬೈ: ಭೂಗತ ದೊರೆ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ವಶದಲ್ಲಿರುವುದರಿಂದ ಭಾರತಕ್ಕೆ ...

news

ಬ್ರಾಹ್ಮಣ ಪ್ರಾಧಿಕಾರ ರಚನೆಗೆ ಸಿಎಂ ಸಿದ್ದರಾಮಯ್ಯ ಚಿಂತನೆ

ಬೆಂಗಳೂರು: ಬ್ರಾಹ್ಮಣ ಪ್ರಾಧಿಕಾರ ರಚನೆಗೆ ಸಿಎಂ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ ಎಂದು ಸರಕಾರಿ ...

Widgets Magazine
Widgets Magazine