ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆ: ಹೈ.ಕ.ಮಂಡಳಿ ಕಾರ್ಯದರ್ಶಿ ಮಾಡಿದ್ದೇನು ಗೊತ್ತಾ?

ಕಲಬುರಗಿ, ಶುಕ್ರವಾರ, 11 ಜನವರಿ 2019 (11:08 IST)

ಎಸ್ ಎಸ್ ಎಲ್ ಸಿ ಸುಧಾರಣೆಗೆ ಹಮ್ಮಿಕೊಂಡಿರುವ ತೀವ್ರ ನಿಗಾ ಕಲಿಕಾ ತರಗತಿಗಳಿಗೆ  ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ದಿಢೀರ್ ಭೇಟಿ ನೀಡಿದರು.

ಕಲಬುರಗಿ ವಿಭಾಗದಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗೆ ಯತ್ನವಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾವಾರು ಕಡಿಮೆ ಫಲಿತಾಂಶ ಹೊಂದಿರುವ ಹೈ.ಕ. ಭಾಗದ 542 ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಫಲಿತಾಂಶ ಸುಧಾರಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ತೀವ್ರ ನಿಗಾ ಕಲಿಕಾ ತರಗತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಹೀಗಂತ  ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ  ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಸುಬೋಧ ಯಾದವ್ ಹೇಳಿದರು.

ಕಲಬುರಗಿ ತಾಲೂಕಿನ ಪಾಳಾ ಮತ್ತು ಶ್ರೀನಿವಾಸ ಸರಡಗಿಗೆ ಭೇಟಿ ನೀಡಿ ಅಲ್ಲಿನ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ನಡೆಯುತ್ತಿದ್ದ ತೀವ್ರ ನಿಗಾ ಕಲಿಕಾ ತರಗತಿಯನ್ನು ಪರಿಶೀಲಿಸಿ ಮಾತನಾಡಿದರು. ಕಳೆದ 5 ವರ್ಷಗಳಲ್ಲಿ ಸತತವಾಗಿ 75 ಪ್ರತಿಶತಕ್ಕಿಂತ ಎಸ್.ಎಸ್.ಎಲ್.ಸಿ.ಯಲ್ಲಿ ಕಡಿಮೆ ಫಲಿತಾಂಶ ಹೊಂದಿರುವ ಕಲಬುರಗಿ ವಿಭಾಗದ ಪ್ರೌಢ ಶಾಲೆಗಳನ್ನು ಈ ಕಲಿತಾ ತರಬೇತಿ ಯೋಜನೆಗೆ ಆಯ್ಕೆ ಮಾಡಲಾಗಿದೆ.  ಹೆಚ್ಚುವರಿ ತರಗತಿಗಳಲ್ಲಿ ಉತ್ತಮವಾದ ಶಿಕ್ಷಣ ನೀಡುವ ಮೂಲಕ ಫಲಿತಾಂಶ ಹೆಚ್ಚಳ ಆಗುವಂತೆ ನೋಡಿಕೊಳ್ಳಬೇಕು ಎಂದು ಶಿಕ್ಷಕರಿಗೆ ನಿರ್ದೇಶನ ನೀಡಿದರು.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಬಿಐ ಮುಖ್ಯಸ್ಥ ಹುದ್ದೆಯಿಂದ ಅಲೋಕ್‌ ವರ್ಮಾ ವಜಾ

ನವದೆಹಲಿ: ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್ ವರ್ಮಾ ಅವರನ್ನು ಉಚ್ಛಾಟಿಸಲಾಗಿದೆ. ಮೋದಿ ನೇತೃತ್ವದ ಆಯ್ಕೆ ...

news

ಪತ್ನಿಯ ಸೆಕ್ಸ್ ದಾಹ ತೀರಿಸಲಾಗದೇ ಪತಿ ಮಾಡಿದ್ದೇನು ಗೊತ್ತಾ?

ಮುಂಬೈ : ಪತ್ನಿಯ ಸೆಕ್ಸ್ ದಾಹ ತೀರಿಸಲಾಗದೇ ಬೇಸತ್ತ ಪತಿ ಆಕೆಯನ್ನು ಕೊಲೆ ಮಾಡಿದ ಪ್ರಕರಣವೊಂದು ಇತ್ತೀಚೆಗೆ ...

news

ಪಾಕಿಸ್ತಾನದ ಟಿವಿ ಚಾನೆಲ್ ಗಳಿಗೆ ಹೊಸ ರೂಲ್ಸ್ ನ್ನು ವಿಧಿಸಿದ ಪಿಇಎಂಆರ್‌ಎ. ಏನದು ಗೊತ್ತಾ?

ಇಸ್ಲಾಮಾಬಾದ್ : ಪಾಕಿಸ್ತಾನದ ಟಿವಿ ಚಾನೆಲ್ ಗಳು ಇನ್ನುಮುಂದೆ ವೀಕ್ಷಕರ ಮನಸ್ಸಿನ ಮೇಲೆ ಪರಿಣಾಮ ಬೀರುವಂತಹ ...

news

ಪತಿ ಪರಸ್ತ್ರೀ ಜೊತೆ ಸಂಬಂಧ ಬೆಳೆಸಿದ್ದಾನೆ ಎಂಬ ಸಂಶಯದಿಂದ ಪತ್ನಿ ಮಾಡಿದ್ದೇನು ಗೊತ್ತಾ?

ಥೈಲ್ಯಾಂಡ್ : ಪತಿ ಪರಸ್ತ್ರೀ ಜೊತೆ ಸಂಬಂಧ ಬೆಳೆಸಿದ್ದಾನೆ ಎಂದು ಅನುಮಾನಗೊಂಡ ಪತ್ನಿ ಆತನ ಖಾಸಗಿ ...