Widgets Magazine
Widgets Magazine

ಮಹದಾಯಿ ವಿವಾದದ ಬಗ್ಗೆ ಎಡವಟ್ಟು ಹೇಳಿಕೆ ನೀಡಿ ಮಂಗಳಾರತಿ ಮಾಡಿಸಿಕೊಂಡ ನಟ ಚೇತನ್

ಬೆಂಗಳೂರು, ಬುಧವಾರ, 27 ಡಿಸೆಂಬರ್ 2017 (11:07 IST)

Widgets Magazine

ಬೆಂಗಳೂರು: ಮಹದಾಯಿ ನೀರಿಗಾಗಿ ರೈತರು ಮೂರು ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಕಲಾವಿದರು ಕಾಣಿಸುತ್ತಿಲ್ಲ ಎಂದು ಚಿತ್ರರಂಗದ ಇತರ ನಟರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ನಟ ಚೇತನ್ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
 

ನಟ ಚೇತನ್ ರೈತರ ಹೋರಾಟದಲ್ಲಿ ಪಾಲ್ಗೊಂಡ ಬಳಿಕ ಚೇತನ್ ಇಂತಹದ್ದೊಂದು ಹೇಳಿಕೆ ನೀಡಿದ್ದರು. ಇದಕ್ಕೆ ನಟ ಜಗ್ಗೇಶ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
 
ಜಗ್ಗೇಶ್ ಈ ಬಗ್ಗೆ ಟ್ವೀಟ್ ಮಾಡಿದ್ದು ‘ಯಾಕೆ ಪಾಪ ಈತ ಹೀಗೆ..! ಪ್ರತಿ ನಡೆಯ ಉದ್ದೇಶ ಜಾಣ ಪ್ರೇಕ್ಷಕನಿಗೆ ಅರಿವಾಗಿದೆ. ತಮ್ಮತನ ವೃದ್ಧಿಸಿಕೊಳ್ಳುವ ಜಾತ್ರೆಗಿಂತ ಹೃದಯ ದೇವರು ಜನ ಮೆಚ್ಚುವಂತೆ ಮಾಡುವ ಕಾರ್ಯ ಶ್ರೇಷ್ಠ! ಬಣ್ಣ ಹಚ್ಚಿ ಹುಲಿಯಾದ ನರಿ ಕಥೆ ಆಗಬಾರದು ಬದುಕು..! ಎಂದು ತಪರಾಕಿ ನೀಡಿದ್ದಾರೆ.
 
ಇನ್ನು ಒಳ್ಳೆ ಹುಡುಗ ಪ್ರಥಮ್ ಕೂಡಾ ಖ್ಯಾತೆ ನಟ ಚೇತನ್ ಎಂದು ಕರೆದಿದ್ದು, ನಿಮಗ್ಯಾಕೆ ಯಡಿಯೂರಪ್ಪನವರನ್ನು ಕಂಡರೆ ಕೊತ ಕೊತ? ಮೈಕ್ ಸಿಕ್ಕಿದ ಕೂಡಲೇ ಆಕ್ಷನ್ ಹೀರೋ ರೇಂಜ್ ಗೆ ಹಾರಾಡಬೇಡಿ ಎಂದು ಕಿಡಿ ಕಾರಿದ್ದಾರೆ. ಇದಲ್ಲದೆ, ಅನೇಕ ಅಭಿಮಾನಿಗಳಿಗೂ ಚೇತನ್ ಗೆ ಸಾಮಾಜಿಕ ಜಾಲತಾಣದಲ್ಲಿ ಮಂಗಳಾರತಿ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ವಿಧವೆಯ ಮೇಲೆ ಅತ್ಯಾಚಾರ ಎಸಗಿದ ಯುವನನ್ನು ಓಡಿಸಿದ ಮೂವರಿಂದ ಮತ್ತೆ ಅತ್ಯಾಚಾರ

ವಿಧವೆಯ ಮೇಲೆ ಅತ್ಯಾಚಾರ ನಡೆಸಿದ ಯುವಕನನ್ನು ಬೆದರಿಸಿ ಕಳುಹಿಸಿದ ಮೂವರು ಯುವಕರು ವಿಧವೆ ಮೇಲೆ ಮತ್ತೆ ...

news

ಮಹದಾಯಿ ಹೋರಾಟಕ್ಕಿಳಿದ ಒಳ್ಳೆ ಹುಡುಗ ಪ್ರಥಮ್ ಹೇಳಿದ್ದು ಹೀಗೆ..!

ಬೆಂಗಳೂರು: ಮಹದಾಯಿ ಹೋರಾಟಗಾರರಿಗೆ ಬಿಗ್ ಬಾಸ್ ವಿಜೇತ ಒಳ್ಳೆ ಹುಡುಗ ಪ್ರಥಮ್ ಸಾಥ್ ನೀಡಿದ್ದಾರೆ. ...

news

ಜೈರಾಮ್ ಠಾಕೂರ್ ಇಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ

ಶಿಮ್ಲಾ: ಹಿಮಾಚಲಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಜೈರಾಮ್ ಠಾಕೂರ್ ಅವರು ...

news

ಸಿಎಂ ಸಿದ್ದರಾಮಯ್ಯಗೆ ತುರ್ತು ಕರೆ ಮಾಡಿದ ಪರಮೇಶ್ವರ್

ಬೆಂಗಳೂರು: ಮಹದಾಯಿ ಹೋರಾಟಗಾರರ ಹೋರಾಟ ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ...

Widgets Magazine
Widgets Magazine Widgets Magazine