ಮುಸ್ಲಿಮರ ಓಟಿನಿಂದ ಗೆದ್ದೆ ಎಂದ ರಮಾನಾಥ್ ರೈಗೆ ಜಗ್ಗೇಶ್ ಕೊಟ್ಟ ತಿರುಗೇಟಿಗೆ ಅಭಿಮಾನಿಗಳ ಶಿಳ್ಳೆ!

ಬೆಂಗಳೂರು, ಶುಕ್ರವಾರ, 29 ಡಿಸೆಂಬರ್ 2017 (09:45 IST)

ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ಮುಸ್ಲಿಂ ಮತದಾರರ ಓಲೈಕೆಗೆ ಮುಂದಾಗಿರುವ ಸಚಿವ ರಮಾನಾಥ ರೈ ಮುಸ್ಲಿಮರ ಮತದಿಂದಲೇ 6 ಬಾರಿ ಬಂಟ್ವಾಳದಲ್ಲಿ ಶಾಸಕನಾದೆ ಎಂದಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
 

ಅವರಲ್ಲಿ ನಟ ಜಗ್ಗೇಶ್ ಕೂಡಾ ಒಬ್ಬರು. ನವರಸನಾಯಕ ಕೊಟ್ಟ ತಿರುಗೇಟು ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಮೆಚ್ಚುಗೆಗೆ ಕಾರಣವಾಗಿದೆ.
 
‘ದಯಮಾಡಿ ಈಗಲೇ ಮುಲ್ಲಾ ಕರೆಸಿ ಕತ್ನ ಮಾಡಿಸಿಕೊಂಡು, ಮುಸಲ್ಮಾನರಿಗಾದರೂ ವಿಧೇಯರಾಗಿ, 5 ಬಾರಿ ನಮಾಜು ಶುರು ಮಾಡಿ! ಯಾವುದೇ ಕಾರಣಕ್ಕೂ ಹಿಂದೂಗಳ ಮತ ಕೇಳಬೇಡಿ. ನಿಮ್ಮ ಹೆಸರನ್ನು ರಸತ್ತುಲ್ಲಾ ಅಂತ ಬದಲಿಸಿಕೊಂಡು ಚೆನ್ನಾಗಿ ಬಾಳಿ..!’ ಎಂದು ಜಗ್ಗೇಶ್ ಟ್ವಿಟರ್ ನಲ್ಲಿ ತಿರುಗೇಟು ಕೊಟ್ಟಿದ್ದರು.
 
ಇದಕ್ಕೆ ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಸ್ಲಿಮರ ಓಲೈಸಿದ ರಮಾನಾಥ ರೈಗೆ ಮುಟ್ಟಿಕೊಳ್ಳುವಂತೆ ಕೊಟ್ಟಿದ್ದಾರೆ ಜಗ್ಗೇಶ್ ಎಂದು ಕೆಲವರು ಹೇಳಿದ್ದರೆ ಇನ್ನು ಕೆಲವರು ಸಖತ್ತಾಗಿ ಹೇಳಿದ್ರಿ ಸರ್ ಎಂದು ಚಪ್ಪಾಳೆ ತಟ್ಟಿದ್ದಾರೆ. ನಿನ್ನೆ ರಮಾನಾಥ ರೈ ಕಾರ್ಯಕ್ರಮವೊಂದರಲ್ಲಿ ಇಂತಹದ್ದೊಂದು ಹೇಳಿಕೆ ನೀಡಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ಹೊಸ ವರ್ಷಾಚರಣೆ ನೆಪದಲ್ಲಿ ಡ್ರಗ್ಸ್, ಸೆಕ್ಸ್ ದಂಧೆ’

ಮಂಗಳೂರು: ಹೊಸ ವರ್ಷಾಚರಣೆ ನೆಪದಲ್ಲಿ ನಡೆಸುವ ಮಧ್ಯರಾತ್ರಿ ಪಾರ್ಟಿಗಳಲ್ಲಿ ಸೆಕ್ಸ್ ಮತ್ತು ಡ್ರಗ್ಸ್ ...

news

ಮುಂಬೈನಲ್ಲಿ ಅಗ್ನಿ ಅವಘಡ: ಮೃತರ ಸಂಖ್ಯೆ 15 ಕ್ಕೆ ಏರಿಕೆ

ಮುಂಬೈ: ವಾಣಿಜ್ಯ ನಗರಿ ಮುಂಬೈನ ಕಮಲಾ ಮಿಲ್ಸ್ ಕಂಪೌಂಡ್ ನಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಅಗ್ನಿ ...

news

ಅಪ್ರಾಪ್ತರ ಜತೆ ಕಾಮದಾಟವಾಡಿ 5 ರೂ. ಕೊಟ್ಟು ಬಾಯಿ ಮುಚ್ಚಿಸಿದ ವೃದ್ಧ!

ನವದೆಹಲಿ: ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ನಂತರ ಅವರಿಗೆ 5 ರೂ. ಕೊಟ್ಟು ಬಾಯಿ ...

news

ಅನಂತ್ ಕುಮಾರ್ ಹೆಗ್ಡೆ ‘ಸಾರಿ’ ಎಂದ್ರು, ಪ್ರಕಾಶ್ ರಾಜ್ ಏನಂದ್ರು?!

ಬೆಂಗಳೂರು: ಸಂವಿಧಾನ ಬದಲಾಯಿಸಲು ಬಂದಿದ್ದೇವೆಂದು ವಿವಾದ ಸೃಷ್ಟಿಸಿದ್ದ ಕೇಂದ್ರ ಸಚಿವ ಅನಂತ ಕುಮಾರ್ ...

Widgets Magazine
Widgets Magazine