ಉಪೇಂದ್ರ ರಾಜಕೀಯ ಸೇರ್ಪಡೆ ಬಗ್ಗೆ ತಂದೆ ತಾಯಿ ಹೇಳಿದ್ದು

ಬೆಂಗಳೂರು, ಶನಿವಾರ, 12 ಆಗಸ್ಟ್ 2017 (11:28 IST)

Widgets Magazine

ರಿಯಲ್ ಸ್ಟಾರ್ ರಾಜಕೀಯ ಪ್ರವೇಶಕ್ಕೆ ಕ್ಷಣಗಣನೆ ಶುರುವಾಗಿದೆ. ಹಣದ ಹಂಗಿಲ್ಲದೆ ಪ್ರಜಾಕೀಯ ಮಾಡಲು ಹೊರಟಿರುವ ಉಪೇಂದ್ರ ಪ್ರಾಮಾಣಿಕ ಪ್ರಯತ್ನಕ್ಕೆ ಪೋಷಕರು ಶುಭ ಕೋರಿದ್ದಾರೆ.


ಮಾಧ್ಯಮಗಳ ಜೊತೆ ಮಾತನಾಡಿದ ಉಪೇಂದ್ರ ತಂದೆ ಮಂಜುನಾಥ್, ರಾಜಕೀಯ ಪ್ರವೇಶದ ಬಗ್ಗೆ ನಮಗೆ ತಿಳಿದೇ ಇರಲಿಲ್ಲ. ಇದ್ದಕ್ಕಿದ್ದಂತೆ ರಾಜಕೀಯ ಸೇರುತ್ತಿದ್ದಾನೆ. ಅವನು ನಂಬಿರುವ ವಿನಾಯಕ ಒಳ್ಳೆಯದು ಮಾಡುತ್ತಾನೆ ಎಂದಿದ್ದಾರೆ.
ಅವರ ತಾಯಿ ಸಹ ಮಗನಿಗೆ ಶುಭ ಕೋರಿದ್ದಾರೆ. ಚಿಕ್ಕಂದಿನಿಂದಲೂ ರಾಜಕೀಯಕ್ಕೆ ಸೇರಬೇಕೆಂದು ಅವನಿಗೆ ಆಸಕ್ತಿ ಇತ್ತು. ಅದರ ಸಹವಾಸ ಬೇಡವೆಂದು ಹಲವು ಬಾರಿ ಹೇಳಿದ್ದೇವೆ. ಅದಕ್ಕೆ ಯಾವುದೇ ಪ್ರತಿಕ್ರಿಯೆ ಕೊಡದೇ ನಗುತ್ತಿದ್ದ ಎಂದಿದ್ದಾರೆ.

ಉಪ್ಪಿ ರಾಜಕೀಯ ಸೇರ್ಪಡೆ ಬಗ್ಗೆ ನಮಗೆ ತಿಳಿದಿರಲೇ ಇಲ್ಲ. ಕಂಗ್ರಾಟ್ಸ್ ಹೇಳಲು ಫೋನ್ ಮಾಡಿದ್ದರು. ಯಾಕೆ ಎಂದು ಕೇಳಿದಾಗ ನಿಮ್ಮ ಮಗ ರಾಜಕೀಯಕ್ಕೆ ಬರುತ್ತಿದ್ದಾನೆ ಅಂತಾ ಹೇಳಿದರು. ಟಿವಿ ಹಾಕಿದಾಗ ವಿಷಯ ಗೊತ್ತಾಯಿತು ಎಂದು ತಾಯಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಜ್ವರದ ನಡುವೆಯೂ ರಾಜ್ಯದಲ್ಲಿ ರಾಹುಲ್

ಬೆಂಗಳೂರು: ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಳ್ಳಲು ರಾಯಚೂರಿಗೆ ಆಗಮಿಸುತ್ತಿರುವ ರಾಹುಲ್ ಗಾಂಧಿಗೆ ...

news

ಅಮಿತ್ ಷಾ ಸ್ವಾಗತಕ್ಕೆ ಓಡೋಡಿ ಬಂದ ಬಿಜೆಪಿ ನಾಯಕರು

ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಬೆಂಗಳೂರಿಗೆ ಬಂದಿರುವ ಹಿನ್ನಲೆಯಲ್ಲಿ ಅವರ ಸ್ವಾಗತಕ್ಕೆ ...

news

ನಿತೀಶ್ ಹಾದಿ ಹಿಡಿತಾರಾ ಶರದ್ ಪವಾರ್?

ನವದೆಹಲಿ: ಬಿಜೆಪಿ ಸೋಲಿಸಲೆಂದು ಮಹಾಘಟಬಂದನ್ ಮಾಡಿಕೊಂಡಿದ್ದ ಕಾಂಗ್ರೆಸ್ ಗೇ ಕೈ ಕೊಟ್ಟು ಎನ್ ಡಿಎ ಪಾಳಯ ...

news

ರಾಜಕೀಯದ ಬಗ್ಗೆ ಉಪೇಂದ್ರ ಮಾತು.. ಇಲ್ಲಿದೆ ಕೇಳಿ.

ಸೂಪರ್ ಸ್ಟಾರ್ ಉಪೇಂದ್ರ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಜ್ಜಾಗಿದೆ. 11 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿ ...

Widgets Magazine