ಐವರು ಪತ್ರಕರ್ತರ ಹತ್ಯೆಗೆ ಸಂಚು: ಎನ್‌ಐಎ ತನಿಖೆಯಿಂದ ಬಹಿರಂಗ

ಬೆಂಗಳೂರು, ಮಂಗಳವಾರ, 11 ಏಪ್ರಿಲ್ 2017 (14:50 IST)

Widgets Magazine

ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದ ಆರೋಪಿಗಳು ಐವರು ಪತ್ರಕರ್ತರ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನುವುದು ಎನ್‌ಐಎ ತನಿಖೆಯಿಂದ ಬಹಿರಂಗವಾಗಿದೆ.
 
ಆರೋಪಿಗಳಾದ ಇರ್ಫಾನ್, ವಸೀಂ, ನಜರ್, ಷರೀಫ್, ಆಸೀಫ್ ಐವರು ಪತ್ರಕರ್ತರನ್ನು ಹತ್ಯೆಗೈಯುವ ಸಂಚು ರೂಪಿಸಿದ್ದರು ಎಂದು ಎನ್ಐಎ ಮೂಲಗಳು ತಿಳಿಸಿವೆ.
 
ಬಿಜೆಪಿ ಸಂಸದ ಪ್ರತಾಪ್ ಸಿಂಹ, ವಿಶ್ವೇಶ್ವರ್ ಭಟ್, ವಿಜಯ್ ಸಂಕೇಶ್ವರ್ ಮತ್ತಿಬ್ಬರು ಮಾಧ್ಯಮ ಮುಖ್ಯಸ್ಥರ ಹತ್ಯೆಗೆ ಸಂಚು ರೂಪಿಸಿದ್ದರ ಬಗ್ಗೆ ಪೊಲೀಸ್ ತನಿಖೆ ವೇಳೆಯಲ್ಲಿ ಆರೋಪಿಗಳು ಬಾಯಿಬಿಟ್ಟಿದ್ದಾರೆ.
 
ರುದ್ರೇಶ್ ಹತ್ಯೆ ಪ್ರಕರಣದ ಆರೋಪಿಗಳು ಉಗ್ರಗಾಮಿ ಸಂಘಟನೆಗಳೊಂದಿಗೆ ನಂಟು ಹೊಂದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಹಾವಿನ ಜೊತೆ ಸರಸವಾಡಲು ಹೋಗಿ ಪ್ರಾಣವನ್ನೇ ಬಿಟ್ಟ..!

ವಿಡಿಯೋ ಮಾಡಲು ಹಾವನ್ನ ಕುತ್ತಿಗೆಗೆ ಏರಿಸಿಕೊಂಡ ವ್ಯಕ್ತಿ ಹಾವು ಕಚ್ಚಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ...

news

ಜೀತದಾಳುಗಳಾಗುವುದು ನಾಚಿಕೆಗೇಡಿತನದ ಸಂಗತಿ: ಕಾಗೋಡು ತಿಮ್ಮಪ್ಪ

ಕೊಡಗು: ಕೊಡಗಿನಲ್ಲಿ ಇನ್ನೂ ಜೀತದಾಳಿ ಪದ್ದತಿಯಿದೆ. ಜೀತದಾಳುಗಳಾಗುವುದು ನಾಚಿಕೆಗೇಡಿತನದ ಸಂಗತಿಯಾಗಿದೆ ...

news

ಪುತ್ರಿಗೆ ವಿವಾಹದ ಉಡುಗೊರೆಯಾಗಿ ಗೋವು ನೀಡಿದ ಮುಸ್ಲಿಂ ತಂದೆ

ರೋಹ್ಟಕ್: ಗೋವು ರಕ್ಷಕರು ಕೆಲವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ಸಂದರ್ಭದಲ್ಲಿಯೇ ಮುಸ್ಲಿಂ ...

news

ಮಂಗಳೂರು-ಬೆಂಗಳೂರು ಬಸ್ ಅಪಘಾತ: 30 ಕ್ಕೂ ಹೆಚ್ಚು ಜನರಿಗೆ ಗಾಯ

ಬೆಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಮಂಡ್ಯ ಜಿಲ್ಲೆಯ ನಾಗಮಂಗಲ ಬಳಿ ಲಾರಿಗೆ ...

Widgets Magazine