ತುಮಕೂರಿನಲ್ಲಿ ರೆಡ್ಮಿ ನೋಟ್ 4 ಮೊಬೈಲ್ ಸ್ಫೋಟ

ತುಮಕೂರು, ಗುರುವಾರ, 12 ಅಕ್ಟೋಬರ್ 2017 (20:44 IST)

ತುಮಕೂರು: ಮತ್ತೊಂದು ರೆಡ್ ಮಿ ಮೊಬೈಲ್ ಸ್ಫೋಟವಾಗಿದೆ. ನಗರದ ಟೌನ್ ಹಾಲ್ ಸರ್ಕಲ್‌ನಲ್ಲಿರುವ ಮೊಬೈಲ್‌ ಅಂಗಡಿಯಲ್ಲಿ ರೆಡ್ ಮಿ ನೋಟ್‌ 4 ಮೊಬೈಲ್‌ ಸ್ಫೋಟವಾಗಿದೆ.


ರೆಡ್ ಮಿ ಮೊಬೈಲ್ ಗೆ ಸ್ಕ್ರೀನ್‌ಗಾರ್ಡ್‌ ಹಾಕಿಸಿಕೊಳ್ಳಲು ಗ್ರಾಹಕರೊಬ್ಬರು ತಮ್ಮ ಹೊಸ ರೆಡ್ಮಿ ಮೊಬೈಲನ್ನು ಅಂಗಡಿಯಾತನಿಗೆ ನೀಡಿದ್ದಾರೆ. ಅಂಗಡಿಯಾತ ಮೊಬೈಲ್‌ ಬಿಚ್ಚಿ ಇಡುತ್ತಿದ್ದಂತೆ ಸ್ಫೋಟಗೊಂಡಿದ್ದು, ಭಾರೀ ಹೊಗೆ ಕಾಣಿಸಿಕೊಂಡಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಮೊಬೈಲ್ ಸಿಡಿದ ದೃಶ್ಯಗಳು ಅಂಗಡಿಯಲ್ಲಿರೋ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಬೆಂಗಳೂರಿನಲ್ಲಿಯೂ 2 ತಿಂಗಳ ಹಿಂದೆ ಇಂತಹದ್ದೇ ಘಟನೆ ನಡೆದಿತ್ತು. ರೆಡ್‌ಮಿ ನೋಟ್‌ 4 ಮೊಬೈಲ್ ಇತ್ತೀಚೆಗೆ ಹೆಚ್ಚು ಮಂದಿ ಬಳಸುತ್ತಿದ್ದಾರೆ. ಇದೀಗ ಮತ್ತೆ ಅದೇ ಕಂಪನಿಯ ಮೊಬೈಲ್ ಸಿಡಿದಿದ್ದು,  ರೆಡ್‌ಮಿ ನೋಟ್‌ 4 ಬಳಸುತ್ತಿರುವ ಗ್ರಾಹಕರು ಗಾಬರಿಗೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಜ್ಯೋತ್ಸವದಂದೇ ಹೊಸ ಪಕ್ಷ ಸ್ಥಾಪನೆ: ಅನುಪಮಾ ಶೆಣೈ

ಕಲಬುರ್ಗಿ: ನವೆಂಬರ್ 1 ರಂದು ತಮ್ಮ ನೂತನ ಪಕ್ಷ ಸ್ಥಾಪನೆ ಮಾಡುವುದಾಗಿ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ...

news

ಬಿಜೆಪಿಯವರು ಜೈಲಿಗೆ ಹೋಗಿ ಬಂದವರೆನ್ನುವುದು ಜನತೆಗೆ ಗೊತ್ತಿದೆ: ಎಚ್.ಎಂ.ರೇವಣ್ಣ

ಹಾವೇರಿ: ಬಿಜೆಪಿಯವರು ಜೈಲಿಗೆ ಹೋಗಿ ಬಂದವರೆನ್ನುವುದು ಜನತೆಗೆ ಗೊತ್ತಿದೆ ಎಂದು ಸಾರಿಗೆ ಖಾತೆ ಸಚಿವ ...

news

ಯುವತಿಯ ಮೇಲೆ ಅತ್ಯಾಚಾರ: ಲಾರಿ ಚಾಲಕ, ಕ್ಲೀನರ್ ಬಂಧನ

ಮಂಡ್ಯ: ಕುಡಿದ ಮತ್ತಿನಲ್ಲಿ ಲಾರಿ ಚಾಲಕ ಮತ್ತು ಕ್ಲೀನರ್‌ನನ್ನು ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ...

news

ಡಾ. ಯತೀಂದ್ರ ವಿರುದ್ಧ ಶಂಕರ ಬಿದರಿ ಸ್ಪರ್ಧೆ….?

ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರಕ್ಕೆ ವಾಪಸ್ ...

Widgets Magazine
Widgets Magazine