ಬಿಜೆಪಿಯವರು ಸುಮ್ಮನಿದ್ರೆ ಎಲ್ಲಾ ಗಲಾಟೆಗಳು ನಿಲ್ಲುತ್ತವೆ: ಸಿಎಂ ತಿರುಗೇಟು

ಬೆಂಗಳೂರು, ಮಂಗಳವಾರ, 11 ಜುಲೈ 2017 (13:40 IST)

ಮಂಗಳೂರಿನಲ್ಲಿ ಗಲಾಟೆ ಮಾಡುವವರು ಬೇರೆ ಕಡೆಯಿಂದ ಬಂದವರಲ್ಲ. ಗಲಾಟೆ ಮಾಡುವವರು ನಮ್ಮಲ್ಲಿಯೇ ಇದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆಗೆ ಟಾಂಗ್ ನೀಡಿದ್ದಾರೆ.
 
ಬಿಜೆಪಿಯವರು ಸುಮ್ಮನಿದ್ರೆ ಎಲ್ಲಾ ಗಲಾಟೆಗಳು ನಿಲ್ಲುತ್ತವೆ. ಬಿಜೆಪಿ ನಾಯಕರು ತಾವು ಮಾಡಿದ ತಪ್ಪುಗಳನ್ನು ಮುಚ್ಚಿಕೊಳ್ಳಲು ಸಚಿವರ ರಾಜೀನಾಮೆ ಬೇಡುವ ನಾಟಕವಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಮಂಗಳೂರು, ದಕ್ಷಿಣ ಕನ್ನಡದಲ್ಲಿ ನಡೆದ ಗಲಭೆಗಳಲ್ಲಿ ಮತೀಯ ಶಕ್ತಿಗಳ ಕೈವಾಡವಿರುವುದು ಕಂಡು ಬಂದಿದೆ. ಅಪರಾಧ ಕೃತ್ಯಗಳಲ್ಲಿ ಯಾವುದೇ ಸಮುದಾಯದವರಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಖಚಿತ ಎಂದರು.
 
ಬಿಜೆಪಿಯವರಿಗೆ ಸಮುದಾಯಗಳನ್ನು ಒಡೆದು ಕೋಮುಗಲಭೆಗಳನ್ನು ಸೃಷ್ಟಿಸುವುದೇ ಕಾಯಕವಾಗಿದೆ ಎಂದು ಅನಿಸುತ್ತದೆ. ಆದರೆ, ಇಂತಹ ಪ್ರಯತ್ನಗಳು ವಿಫಲವಾಗಲಿವೆ. ಪ್ರತಿಯೊಂದು ಸಮುದಾಯದಲ್ಲಿ ಶಾಂತಿ ನೆಲೆಸುವಂತೆ ಮಾಡಿ ಎಂದು ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಸಿಎಂ ಸಿದ್ದರಾಮಯ್ಯ ಬಿಜೆಪಿ ಕಾಂಗ್ರೆಸ್ ಯಡಿಯೂರಪ್ಪ Bjp Congress Yeddyurappa Cm Siddaramaiah

ಸುದ್ದಿಗಳು

news

ಅಮರ್‌ನಾಥ್ ಯಾತ್ರಿಕರ ದಾಳಿಯ ವೇಳೆ ರಕ್ಷಕನಾಗಿ ಬಂದ ಪುಣ್ಯಾತ್ಮ ಯಾರು ಗೊತ್ತಾ?

ಅಹ್ಮದಾಬಾದ್: ಅಮರ್‌ನಾಥ್ ಯಾತ್ರಿಗಳು ಪ್ರಯಾಣಿಸುತ್ತಿದ್ದ ಬಸ್ ಚಾಲಕ ಸಲೀಂ ಬುದ್ಧಿವಂತಿಕೆಯಿಂದ ವರ್ತಿಸದೆ ...

news

ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್, ಬಿಜೆಪಿ ಮ್ಯಾಚ್ ಫಿಕ್ಸಿಂಗ್: ಕುಮಾರಸ್ವಾಮಿ

ಬೆಂಗಳೂರು: ಮಂಗಳೂರಿನಲ್ಲಿ ನಡೆಯುತ್ತಿರುವ ಕೋಮು ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಒನ್ ಡೇ ಮ್ಯಾಚ್ ...

news

ಗೋವುಗಳ ಮಾರಾಟ, ಸರಬರಾಜು ನಿಷೇಧಕ್ಕೆ ಸುಪ್ರೀಂಕೋರ್ಟ್ ತಡೆ

ಕೇಂದ್ರ ಸರ್ಕಾರದ ಗೋಹತ್ಯೆ, ಗೋವುಗಳ ಸರಬರಾಜು ನಿಷೇಧ ಅಧಿಸೂಚನೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಕೇಂದ್ರದ ...

news

ಈಶ್ವರಪ್ಪ ಪಿಎ ವಿನಯ್‌ ಅಪಹರಣ ಪ್ರಕರಣ: ಬಿಎಸ್‌ವೈ ಆಪ್ತ ರಾಜೇಂದ್ರ ವಿಚಾರಣೆ

ಬೆಂಗಳೂರು: ಈಶ್ವರಪ್ಪ ಆಪ್ತ ಸಹಾಯಕ ವಿನಯ್‌ನನ್ನು ಅಪಹರಿಸಲು ವಿಫಲಯತ್ನ ನಡೆಸಿ ಹಲ್ಲೆಗೈದಿದ್ದ ಆರೋಪದ ಮೇಲೆ ...

Widgets Magazine