ಮೈತ್ರಿ ಸರ್ಕಾರ 5 ವರ್ಷ ಸುಗಮವಾಗಿ ನಡೆಯಲಿದೆ: ಸಂಸದ ಧೃವನಾರಾಯಣ್

ಬೆಂಗಳೂರು, ಸೋಮವಾರ, 21 ಮೇ 2018 (15:49 IST)

ಕಾಂಗ್ರೆಸ್-ಜೆಡಿಎಸ್ ಪಕ್ಷದ ಮೈತ್ರಿ ಸರ್ಕಾರ 5 ವರ್ಷ ಸುಗಮವಾಗಿ ನಡೆಯಲಿದೆ ಎಂದು ಸಂಸದ ಆರ್. ಧೃವನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ನಿರ್ದೇಶನದಂತೆ ನೂತನ ಸಮಿಶ್ರ ರಚನೆಯಾಗುತ್ತಿದೆ. ಬೇಷರತ್ ಬೆಂಬಲದ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ. ಮೈಸೂರು ಭಾಗದಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗಿರೋದನ್ನ ನಾನು ಒಪ್ಪುತ್ತೇನೆ ಎಂದರು.
 
ನಂಜನಗೂಡು, ತಿ. ನರಸೀಪುರ ,ಗುಂಡ್ಲುಪೇಟೆ, ಚಾಮುಂಡೇಶ್ಚರಿಯಲ್ಲಿ ನಾವು ಸೋಲು ಕಂಡಿದ್ದೇವೆ. ನಾವು ಸೋತಿರೋ ಕ್ಚೇತ್ರಗಳ ಬಗ್ಗೆ ಆತ್ಮಾವಲೋಕನ ಸಭೆ ನಡೆಸಿ ಈಗಾಗಿರೋ ತಪ್ಪು ಸರಿಪಡಿಸಿಕೊಳ್ಳುತ್ತೇವೆ.
 
ನಮ್ಮವು ಎರಡು ಜ್ಯಾತ್ಯಾತೀತ ಪಕ್ಷಗಳು. ಸಮಾನ ಮನಸ್ಕರು ಇರೋದ್ರಿಂದ ಐದು ವರ್ಷ ಆಡಳಿತ ನಡೆಸುತ್ತೇವೆ ಎಂದು ಸಂಸದ ಧೃವನಾರಾಯಣ್ ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜಾರಕಿಹೊಳಿ ಸಹೋದರರ ವಿರುದ್ಧ ಕಾಂಗ್ರೆಸ್ ಮುಖಂಡನ ವಾಗ್ದಾಳಿ

ಬೆಳಗಾವಿ: ಜಿಲ್ಲೆಯಲ್ಲಿ 12 ಸ್ಥಾನ ಗೆಲ್ಲಿಸುವುದಾಗಿ ಹೇಳಿಕೊಂಡಿದ್ದ ಜಾರಕಿಹೊಳಿ ಸಹೋದರರಿಗೆ ಒಬ್ಬನೇ ಒಬ್ಬ ...

news

ಮದುವೆಯ ಸಂಭ್ರಮದಲ್ಲಿ ಹ್ಯಾರಿ-ಮೆಘನ್

ವಿಂಡ್ಸರ್‌: ಬ್ರಿಟನ್‌ ರಾಜಕುಮಾರ ಹ್ಯಾರಿ- ಅಮೆರಿಕದ ನಟಿ ಮೆಘನ್‌ ಮರ್ಕೆಲ್‌ ಅವರ ವಿವಾಹವು ಸೇಂಟ್‌ ...

news

ಉಪ ಮುಖ್ಯಮಂತ್ರಿ ಆಗುವ ಬಯಕೆ ಇರುವುದು ಸಹಜ-ಪರಮೇಶ್ವರ್

ಬೆಂಗಳೂರು: ಉಪ ಮುಖ್ಯಮಂತ್ರಿ ಹುದ್ದೆ ಕುರಿತು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ...

news

ರಷ್ಯಾಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ರೊಂದಿಗೆ ಮಾತುಕತೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ...

Widgets Magazine