ದೇವರ ಅಭಿಷೇಕಕ್ಕೆ ನೀರು ತರಲು ಹೋದ ಬಾಲಕ ನೀರುಪಾಲು

ಕಲಬುರ್ಗಿ, ಶುಕ್ರವಾರ, 13 ಅಕ್ಟೋಬರ್ 2017 (21:01 IST)

ಕಲಬುರ್ಗಿ: ದೇವರಿಗೆ ನೀರು ತರಲು ನದಿಗೆ ಹೋಗಿದ್ದ ಬಾಲಕ ನೀರುಪಾಲಾಗಿರುವ ಘಟನೆ ಅಫ್ಜಲ್ ಪುರ ತಾಲೂಕಿನ ತೆಲ್ಲೂರು ಗ್ರಾಮದ ಬಳಿ ಅಮರ್ಜಾ ನದಿಯಲ್ಲಿ ನಡೆದಿದೆ.


ತೆಲ್ಲೂರು ನಿವಾಸಿ ಶಾಂತಪ್ಪ ಧರಿಗೊಂಡ ಪುತ್ರ 9ನೇ ತರಗತಿ ಓದುತ್ತಿದ್ದ ಸಾಗರ(16) ಮೃತ ಬಾಲಕ. ಇಂದು ಗ್ರಾಮದ ದೇವತೆ ಜಾತ್ರೆಯಿದ್ದ ಹಿನ್ನೆಲೆ ಮೀಸಲು ನೀರು ತಂದು ದೇವರಿಗೆ ಅಭಿಷೇಕ ಮಾಡಲು ನದಿಗೆ ಹೋಗಿದ್ದ. ಅಮರ್ಜಾ ಡ್ಯಾಂನಿಂದ ಬಿಟ್ಟ ನೀರು ಒಮ್ಮಿಂದೊಮ್ಮಲೆ ಹರಿದು ಬಂದಿರೋದ್ರಿಂದ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ ಎನ್ನಲಾಗಿದೆ.

ಮಳೆ ಹಿನ್ನೆಲೆ ಡ್ಯಾಂನಿಂದ ಹೆಚ್ವಿನ ನೀರು ನದಿಗೆ ಹರಿಯಬಿಡಲಾಗುತ್ತಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ ನದಿಗೆ ಹೋಗಿದ್ರಿಂದ ಈ ಅವಘಡ ಸಂಭವಿಸಿದೆ. ಬಾಲಕನ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದು, ದೇವಲಗಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಆಧಾರ್ ನಿಂದ ಭಾರತಕ್ಕೆ 900 ಕೋಟಿ ಡಾಲರ್ ಉಳಿತಾಯ: ನಂದನ್ ನಿಲೇಕಣಿ

ಅಮೆರಿಕಾ: ಆಧಾರ್ ಕಾರ್ಡ್ ಯೋಜನೆಯಿಂದ ಭಾರತ ಸರ್ಕಾರಕ್ಕೆ 900 ಕೋಟಿ ಡಾಲರ್ ಉಳಿತಾಯವಾಗಿದೆ ಎಂದು ಆಧಾರ್ ...

news

ಯುವಪಡೆಯೊಂದಿಗೆ ನಿಖಿಲ್, ಪ್ರಜ್ವಲ್ ಚುನಾವಣಾ ಪ್ರಚಾರಕ್ಕೆ

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಮತ್ತು ಎಚ್.ಡಿ.ರೇವಣ್ಣ ...

news

ಜೆಎನ್ ಯು ಕ್ಯಾಂಪಸ್ ನಲ್ಲಿ ಆತಂಕ ಸೃಷ್ಟಿಸಿದ ಹಾವು

ನವದೆಹಲಿ: ಜವಹರ್ ಲಾಲ್ ನೆಹರು ಯೂನಿವರ್ಸಿಟಿ ಕ್ಯಾಂಪಸ್ ನಲ್ಲಿ ವಿಷಪೂರಿತ ಹಾವೊಂದು ಕಾಣಿಸಿಕೊಂಡು ಕೆಲಕಾಲ ...

news

ಸಿ.ಪಿ.ಯೋಗೇಶ್ವರ್ ಜೆಡಿಎಸ್ ಸೇರ್ಪಡೆ ಮಾಹಿತಿಯಿಲ್ಲ: ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ಶಾಸಕ ಸಿ.ಪಿ.ಯೋಗೇಶ್ವರ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ನನಗೆ ಯಾವುದೇ ...

Widgets Magazine
Widgets Magazine