ಪರಿವರ್ತನೆ ಯಾತ್ರೆ ವೈಫಲ್ಯ: ವರದಿ ಸಲ್ಲಿಕೆಗೆ ಜಾವ್ಡೇಕರ್‌ಗೆ ಹೊಣೆ

ಬೆಂಗಳೂರು, ಮಂಗಳವಾರ, 7 ನವೆಂಬರ್ 2017 (14:35 IST)

ಬಿಜೆಪಿ ಪರಿವರ್ತನೆ ಯಾತ್ರೆಯ ವೈಫಲ್ಯದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವ ಪ್ರಕಾಶ್ ಜಾವ್ಜೇಕರ್‌ಗೆ ಹೊಣೆ ನೀಡಿದ್ದಾರೆ.
ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ನಾಳೆ ಬೆಂಗಳೂರಿಗೆ ಆಗಮಿಸುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಸೇರಿದಂತೆ ಅನೇಕ ಮುಖಂಡರ ವಿವರಣೆ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಬಿಜೆಪಿ ಯಾತ್ರೆಯ ವೈಫಲ್ಯಕ್ಕೆ ಕಾರಣಗಳೇನು? ಪಕ್ಷದ ನಾಯಕರ ನಿರ್ಲಕ್ಷ್ಯವೇ? ನಾಯಕರಲ್ಲಿನ ಭಿನ್ನಮತವೇ? ಪ್ರತಿಯೊಂದು ವಿವರಣೆ ನೀಡುವಂತೆ ಶಾ, ಜಾವ್ಡೇಕರ್‌ಗೆ ಆದೇಶ ನೀಡಿದ್ದಾರೆ ಎನ್ನಲಾಗಿದೆ. 
 
ಬೆಂಗಳೂರಿನ ಅಂತಾರಾಷ್ಟ್ರಿಯ ವಸ್ತು ಪ್ರದರ್ಶನ ಮೈದಾನದಲ್ಲಿ ಬಿಜೆಪಿ ಪಕ್ಷ ಪರಿವರ್ತನಾ ಯಾತ್ರೆ ಹಮ್ಮಿಕೊಂಡಿತ್ತು. ಆದರೆ, ಯಾತ್ರೆ ಉದ್ಘಾಟನೆ ಸಂದರ್ಭದಲ್ಲಿ ಅವ್ಯವಸ್ಥೆಯಿಂದಾಗಿ ಕಾರ್ಯಕರ್ತರು ಬಾರದೆ ಹಲವು ಗೊಂದಲಗಳಿಗೆ ಕಾರಣವಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಬಿಜೆಪಿ ಪ್ರಕಾಶ್ ಜಾವ್ಡೇಕರ್ ಅಮಿತ್ ಶಾ ಯಡಿಯೂರಪ್ಪ Bjp Yeddyurappa Amit Sha Prakash Javdekar

ಸುದ್ದಿಗಳು

news

ರೈಲಿನ ಶೌಚಾಲಯದಲ್ಲಿ ಸೆಕ್ಸ್ ನಡೆಸುತ್ತಿದ್ದ ನರ್ಸಿಂಗ್ ವಿದ್ಯಾರ್ಥಿಗಳ ಬಂಧನ

ಹೈದ್ರಾಬಾದ್: ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ರೈಲಿನ ಶೌಚಾಲಯದಲ್ಲಿ ಸೆಕ್ಸ್ ...

news

ಕೋಟೆಕಾರು ವ್ಯವಸಾಯ ಸಂಘದಲ್ಲಿ ಮೂವರು ನಿಗೂಢ ಸಾವು

ಮಂಗಳೂರು: ಕೋಟೆಕಾರು ವ್ಯವಸಾಯ ಸಂಘದ ಶಾಖೆಯಲ್ಲಿ ಮೂವರು ನಿಗೂಢವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

news

ಟಿಪ್ಪು ಜಯಂತಿ ಆಚರಣೆಗೆ ತಡೆನೀಡಲು ಹೈಕೋರ್ಟ್ ನಕಾರ

ಬೆಂಗಳೂರು: ಟಿಪ್ಪು ಜಯಂತಿ ಆಚರಣೆಗೆ ತಡೆನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ...

news

ನನ್ನ ಟೆಲಿಫೋನ್ ಕದ್ದಾಲಿಕೆ ಮಾಡ್ತಿಲ್ಲ, ಮಾಡಿದರೂ ಪ್ರಯೋಜನವಿಲ್ಲ: ರಾಮಲಿಂಗಾರೆಡ್ಡಿ

ಬೆಂಗಳೂರು: ಕಾಂಗ್ರೆಸ್ ಪ್ರಮುಖ ಸಚಿವರ ಟೆಲಿಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಮೊದಲೇ ಹೇಳಿದ್ದೆ. ...

Widgets Magazine