ಬಿಎಸ್‌ವೈ 84 ದಿನಗಳ ಯಾತ್ರೆಗೆ ಚಾಲನೆ ನೀಡಲಿರುವ ಅಮಿತ್ ಶಾ

ಬೆಂಗಳೂರು, ಮಂಗಳವಾರ, 31 ಅಕ್ಟೋಬರ್ 2017 (19:24 IST)

Widgets Magazine

ಮುಂದಿನ ವರ್ಷದ ಆರಂಭದಲ್ಲಿ ಕರ್ನಾಟಕದಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ  ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿರುವ 84 ದಿನಗಳ ಯಾತ್ರೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಚಾಲನೆ ನೀಡಲಿದ್ದಾರೆ.
ಕೇಂದ್ರ ಸಚಿವರು, ರಾಜ್ಯದ ಬಿಜೆಪಿ ನಾಯಕರ ಉಪಸ್ಥಿತಿಯಲ್ಲಿ ನವೆಂಬರ್ 2 ರಂದು ಅಮಿತ್ ಶಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
 
ರಾಜ್ಯದಲ್ಲಿ 224 ಕ್ಷೇತ್ರಗಳಲ್ಲಿ ಹಾದುಹೋಗುವ 7,500 ಕಿ.ಮೀ. ಯಾತ್ರೆ ಜನವರಿ 28 ರಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿಯವರ ಸಾರ್ವಜನಿಕ ಸಭೆಯಲ್ಲಿ ಕೊನೆಗೊಳ್ಳಲಿದೆ ಎಂದು ತಿಳಿಸಿದ್ದಾರೆ.
 
ಬಿಜೆಪಿ ರಾಜ್ಯಾಧ್ಯಕ್ಷ ಬಿಜೆಪಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅಮಿತ್ ಶಾ ಈಗಾಗಲೇ ಘೋಷಿಸಿದ್ದಾರೆ.
 
ಲಿಂಗಾಯುತ ಪ್ರಭಾವಿ ನಾಯಕರಾದ ಯಡಿಯೂರಪ್ಪ 2008ರಲ್ಲಿ ಸ್ವಂತಬಲದ ಮೇಲೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ಆದರೆ, ಆರೋಪಗಳ ಹಿನ್ನೆಲೆಯಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪತ್ತೆಯಾಗದ ಎಲ್ಲಾ ಪ್ರಕರಣಗಳು ಇಂಪಾರ್ಟೆಂಟ್: ಡಿಜಿಪಿ ನೀಲಮಣಿ ರಾಜು

ಬೆಂಗಳೂರು: ರಾಜ್ಯದ ನೂತನ ಹಾಗೂ ಮೊದಲ ಮಹಿಳಾ ಪೊಲೀಸ್ ಮಹಾ ನಿರ್ದೇಶಕಿಯಾಗಿ ನೀಲಮಣಿ ಎನ್.ರಾಜು ಅಧಿಕಾರ ...

news

ಅಮೆರಿಕದ ರಸ್ತೆಗಳಿಗಿಂತ ಮಧ್ಯಪ್ರದೇಶ ರಸ್ತೆಗಳು ಉತ್ತಮ: ಉಮಾ ಭಾರತಿ

ನವದೆಹಲಿ: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಹೇಳಿದಂತೆ ಮಧ್ಯಪ್ರದೇಶದ ರಸ್ತೆಗಳು ...

news

ಫೇಸ್ ಬುಕ್ ಗ್ರೂಪ್ ಅಡ್ಮಿನ್ ಗಳಿಗೆ ಸಿಗಲಿದೆ ಹೆಚ್ಚು ಅಧಿಕಾರ

ನವದೆಹಲಿ: ಫೇಸ್ ಬುಕ್ ಗ್ರೂಪ್ ಕ್ರಿಯೇಟ್ ಮಾಡುವ ಅಡ್ಮಿನ್ ಗಳಿಗೆ ಹೆಚ್ಚು ಅಧಿಕಾರ ನೀಡುವ ಫೀಚರ್ ಬಿಡುಗಡೆ ...

news

ಐಪಿಎಸ್ ಅಧಿಕಾರಿ ಪತ್ನಿ ಬಂಧನ: ಕಾರಣ ಕೇಳಿದ್ರೆ ಶಾಕ್ ಆಗ್ತೀರಿ…!

ಹೈದರಾಬಾದ್: ಯುಪಿಎಸ್ಸಿ ಮುಖ್ಯ ಪರೀಕ್ಷೆಯಲ್ಲಿ ಕಾಪಿ ಹೊಡೆಯಲು ಸಹಕರಿಸಿದ ಆರೋಪದ ಮೇಲೆ ಐಪಿಎಸ್ ಅಧಿಕಾರಿ ...

Widgets Magazine