ಪ್ರಚೋದನೆ ಮಾಡಲು ಅಮಿತ್ ಶಾ ಕರ್ನಾಟಕಕ್ಕೆ : ದಿನೇಶ್ ಗುಂಡೂರಾವ್

ಬೆಂಗಳೂರು, ಭಾನುವಾರ, 13 ಆಗಸ್ಟ್ 2017 (13:12 IST)

ವಿಸ್ತಾರಕರಿಂದ ಮನೆ ಮನೆಗೆ ಸುಳ್ಳು ವದಂತಿಗಳನ್ನು ಮುಟ್ಟಿಸಿ, ಜನರಿಗೆ ಪ್ರಚೋದನೆ ಮಾಡಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.  
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅತ್ಯಂತ ಕೆಳಮಟ್ಟಕ್ಕೆ ಹೋಗಿರುವ ಬಿಜೆಪಿಯನ್ನು ಮೇಲೆತ್ತಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
 
ಸಾಲ ಮನ್ನಾ ಮಾಡಿ ಅಂತ ಬಿಜೆಪಿಯವರು ರಾಜ್ಯ ಸರಕಾರದ ವಿರುದ್ಧ ಬೊಬ್ಬೆ ಹಾಕಿದರು. ಅಮಿತ್ ಶಾ ನಿಜವಾಗಿ ಜನತೆಯ ಪರವಾಗಿದ್ದಲ್ಲಿ ಕೇಂದ್ರ ಸರಕಾರದಿಂದ ರೈತರ ಸಾಲ ಮನ್ನಾ ಮಾಡಿಸಲಿ ಎಂದು ಸವಾಲ್ ಹಾಕಿದರು.
 
ಉತ್ತರಪ್ರದೇಶದಲ್ಲಿ ಹಿಂದು- ಮುಸ್ಲಿ ಸಮದಾಯಗಳನ್ನು ವಿಭಜಿಸಿ, ಪಕ್ಷವನ್ನು ಅಧಿಕಾರಕ್ಕೆ ತಂದಂತೆ, ರಾಜ್ಯದಲ್ಲಿ ಇಂತಹ ಹುನ್ನಾರ ನಡೆಸಲು ಶಾ ರಣತಂತ್ರ ರೂಪಿಸಿದ್ದಾರೆ. ಆದರೆ. ಇಂತಹ ತಂತ್ರಗಳೆಲ್ಲಾ ಇಲ್ಲಿ ನಡೆಯೋಲ್ಲ ಎಂದು ಗುಡುಗಿದರು.
 
ಒಕ್ಕಲಿಗರು ನಮ್ಮ ಜತೆಯಲ್ಲಿ ಇಲ್ಲ ಅನ್ನೋ ಕಾರಣಕ್ಕೆ ಅಮಿತ್  ಶಾ, ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದಾರೆ.ಆದರೆ, ಒಕ್ಕಲಿಗರು ಈಗಾಗಲೇ ಯಾವ ಪಕ್ಷಕ್ಕೆ ಮತ ನೀಡಬೇಕು ಎನ್ನುವುದನ್ನು ತೀರ್ಮಾನಿಸಿದ್ದಾರೆ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಅಮಿತ್ ಶಾ ದಿನೇಶ್ ಗುಂಡೂರಾವ್ ಕಾಂಗ್ರೆಸ್ ಬಿಜೆಪಿ Congress Bjp Amit Sha Dinesh Gundurao

ಸುದ್ದಿಗಳು

news

ಅಮಿತ್ ಶಾ ರಾಜ್ಯದಲ್ಲಿಯೇ ಠಿಕಾಣಿ ಹೂಡಲಿ, ನಷ್ಟವಿಲ್ಲ: ಸಿಎಂ ವಾಗ್ದಾಳಿ

ಕಲಬುರಗಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬೇಕಿದ್ದಲ್ಲಿ ಕರ್ನಾಟಕದಲ್ಲಿಯೇ ಠಿಕಾಣಿ ಹೂಡಲಿ. ...

news

ಆದಿಚುಂಚನಗಿರಿಮಠಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ

ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ...

news

ಪಾರ್ಕ್ ಅವಘಡ: ಬಾಲಕಿ ತಲೆಯ ಮೇಲೆ ರಾಡ್ ಬಿದ್ದು ಸಾವು ......

ಬೆಂಗಳೂರು: ಪ್ರಿಯಾ ಎನ್ನುವ ಬಾಲಕಿಯೊಬ್ಬಳು ಪಾರ್ಕ್‌ನಲ್ಲಿ ಆಟವಾಡುತ್ತಿದ್ದಾಗ ಆಕೆಯ ತಲೆಯ ಮೇಲೆ ರಾಡ್ ...

news

ಭಾರತೀಯ ಸೇನೆಯಿಂದ ಮೂವರು ಕುಖ್ಯಾತ ಉಗ್ರರ ಹತ್ಯೆ

ಕಾಶ್ಮಿರ: ಜಮ್ಮು ಕಾಶ್ಮಿರದ ಶೋಪಿಯಾನ್‌‌ನಲ್ಲಿ ಭಾರತೀಯ ಸೇನೆ ಮೂವರು ಉಗ್ರರನ್ನು ಹೊಡೆದುರುಳಿಸುವಲ್ಲಿ ...

Widgets Magazine