ಅಮಿತ್ ಶಾ ಅವರ ಯಾವ ತಂತ್ರವೂ, ರಣ ತಂತ್ರವೂ ಇಲ್ಲಿ ನಡೆಯೋದಿಲ್ಲ-ಸಿಎಂ ಸಿದ್ದರಾಮಯ್ಯ

ಉಡುಪಿ, ಮಂಗಳವಾರ, 9 ಜನವರಿ 2018 (12:41 IST)

ಉಡುಪಿ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಚುನಾವಣೆ ಸೋಲಿನ ಭಯ ಶುರುವಾಗಿದೆ ಎಂದು ಉಡುಪಿಯ ಉಪ್ಪೂರಿನಲ್ಲಿ ಸಿಎಂ ಹೇಳಿದ್ದಾರೆ.

 
‘ಉಪಚುನಾವಣೆ ಫಲಿತಾಂಶದ ಬಳಿಕ ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ. ಅಮಿತ್ ಶಾ ಅವರ ಯಾವ ತಂತ್ರವೂ, ರಣ ತಂತ್ರವೂ ಇಲ್ಲಿ ನಡೆಯೋದಿಲ್ಲ. ಕರ್ನಾಟಕದ ಪ್ರಬುದ್ಧ ಮತದಾರರು ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ. ಕಾಂಗ್ರೆಸ್ ಮುಖಂಡರ ಮೇಲಿನ ಐಟಿ ದಾಳಿ ರಾಜಕೀಯ ಪ್ರೇರಿತ. ನಮ್ಮ ಆಪ್ತರನ್ನು ಹುಡುಕಿ, ಹುಡುಕಿ ಐಟಿ ದಾಳಿ ಮಾಡಿಸುತ್ತಿದ್ದಾರೆ. ಶಿವಣ್ಣ ಮನೆ ಮೇಲೂ ರಾಜಕೀಯ ದುರುದ್ದೇಶದಿಂದ ದಾಳಿ ನಡೆಸಲಾಗಿದೆ’ ಎಂದು ಸಿಎಂ ಸಿದ್ದರಾಮಯ್ಯ ಅವರು  ಉಡುಪಿಯ ಉಪ್ಪೂರಿನಲ್ಲಿ ಹೇಳಿಕೆ ನೀಡಿದ್ದಾರೆ.

 
‘ಪ್ರಧಾನಿ ನರೇಂದ್ರ ಮೋದಿ ಯಾರ ದುಡ್ಡಲ್ಲಿ ವಿದೇಶ ಸುತ್ತುತ್ತಿದ್ದಾರೆ. ನಾವೂ ಸಹ ಸರ್ಕಾರಿ ಕಾರ್ಯಕ್ರಮಕ್ಕೆ ರಾಜ್ಯದಲ್ಲಿ ಓಡಾಡುತ್ತಿದ್ದೇವೆ’ ಎಂದು ಸರ್ಕಾರಿ ಹಣದಲ್ಲಿ ಸಮಾವೇಶ ಮಾಡುತ್ತಾರೆಂಬ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಹರೈನ್ ನಲ್ಲಿ ಸಿಎಂ ಸಿದ್ದರಾಮಯ್ಯ ಹೊಗಳಿದ ರಾಹುಲ್ ಗಾಂಧಿ

ಬೆಂಗಳೂರು: ಬಹರೈನ್ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕ ಸಿಎಂ ...

news

ಕೊಲ್ಲೂರು ದೇವಾಲಯದ ಊಟ ಕಾಂಗ್ರೆಸ್ ಸಮಾವೇಶಕ್ಕೆ!

ಮಂಗಳೂರು: ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಬಿಸಿಯೂಟವನ್ನು ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದ ...

news

ವಿದ್ಯಾರ್ಥಿನಿಯನ್ನು ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ

ನಾಲ್ಕನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಲು ಬಾಲಕಿಯನ್ನು ಎಳೆದೊಯ್ಯಲು ಕಾಮುಕನೋರ್ವ ...

news

ಪ್ರಧಾನಮಂತ್ರಿ ನರೇಂದ್ರಮೋದಿ ಸಹೋದರ ರಾಮೇಶ್ವರದಲ್ಲಿ ಹೇಳಿದ್ದೇನು ಗೊತ್ತಾ?

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಅವರು ರಾಮೇಶ್ವರಕ್ಕೆ ಭೇಟಿ ನೀಡಿದ್ದು, ಇದೇ ...

Widgets Magazine