ಕಾದಿದೆ ನಿಮಗೆ ಗ್ರಹಚಾರ! ಬಿಜೆಪಿ ನಾಯಕರಿಗೆ ಬೆಂಡೆತ್ತಿದ ಅಮಿತ್ ಶಾ!

ಬೆಂಗಳೂರು, ಶುಕ್ರವಾರ, 3 ನವೆಂಬರ್ 2017 (09:04 IST)

ಬೆಂಗಳೂರು: ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಜನರೇ ಇಲ್ಲದಿರುವುದನ್ನು ನೋಡಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೆಂಡಾಮಂಡಲರಾಗಿದ್ದಾರೆ.


 
ನಿನ್ನೆ ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಆವರಣದಲ್ಲಿ ಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಜನರು ಆಸೀನರಾಗಿರುವುದಕ್ಕಿಂತ ಖಾಲಿ ಕುರ್ಚಿಗಳೇ ಎದ್ದು ಕಾಣುತ್ತಿತ್ತು.
 
ಕೆಲವು ಬಿಜೆಪಿ ನಾಯಕರು ಅಲ್ಲಲ್ಲಿ ಚದುರಿದ್ದ ಜನರನ್ನು ಕುರ್ಚಿಯಲ್ಲಿ ಕುಳ್ಳಿರಿಸಲು ಪ್ರಯತ್ನ ನಡೆಸಿದ್ದೂ ಆಯ್ತು. ಬಿಎಸ್ ಯಡಿಯೂರಪ್ಪ ತಮ್ಮ ಭಾಷಣದಲ್ಲಿ ದಯಮಾಡಿ ಅರ್ಧಗಂಟೆ ಕುಳಿತುಕೊಳ್ಳಿ ಎಂದು ಮನವಿ ಮಾಡಬೇಕಾಗಿ ಬಂತು.
 
ಇದೆಲ್ಲದರ ನಡುವೆ ಕೆಲವು ಬಿಜೆಪಿ ನಾಯಕರು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲದವರಂತೆ ಕುಳಿತಿದ್ದರು. ಇದು ಅಮಿತ್ ಶಾ ಕೆಂಗಣ್ಣಿಗೆ ಗುರಿಯಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಯಾರ ಜತೆಗೂ ಮಾತನಾಡದೇ ಸೀದಾ ದೆಹಲಿಗೆ ತೆರಳಿದ ಶಾ, ನಂತರ ದೂರವಾಣಿ ಮುಖಾಂತರ ರಾಜ್ಯ ನಾಯಕರನ್ನು ಸಂಪರ್ಕಿಸಿ  ಭಿನ್ನಮತ ಮರೆತು ಒಗ್ಗಟ್ಟಾಗಿ ಕೆಲಸ ಮಾಡದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಪರಿಣಾಮ ಎದುರಿಸಬೇಕಾದೀತು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ರಾಹುಲ್ ಗಾಂಧಿಗೆ ನಮ್ಮ ಯೋಧರಿಗಿಂತ ಚೀನಾ ಮೇಲೆಯೇ ಹೆಚ್ಚು ವಿಶ್ವಾಸ’

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ನಮ್ಮ ಯೋಧರ ಮೇಲೆ ವಿಶ್ವಾಸವಿಲ್ಲ. ಅದಕ್ಕೇ ಡೋಕ್ಲಾಂ ...

news

ಸಿಎಂ ಸಿದ್ರಾಮಯ್ಯನವರೇ ನಾಲಿಗೆ ಬಿಗಿಹಿಡಿದು ಮಾತನಾಡಿ: ಬಿಎಸ್‌ವೈ

ಕುಣಿಗಲ್: ಸಿಎಂ ಸಿದ್ದರಾಮಯ್ಯನವರೇ ನಾಲಿಗೆ ಬಿಗಿ ಹಿಡಿದು ಮಾತನಾಡಿ. ನಿಮ್ಮ ಸೊಕ್ಕಿಗೂ ಇತಿ ಮಿತಿ ಇರಲಿ ...

news

ಅತ್ಯಾಚಾರಕ್ಕೆ ಪ್ರತಿಭಟಿಸಿದ ಮಹಿಳೆಯ ಸಜೀವ ದಹನ

ಬದೌನ್: ಅತ್ಯಾಚಾರಕ್ಕೊಳಗಾಗುವುದನ್ನು ಪ್ರತಿಭಟಿಸಿದ 27 ವರ್ಷದ ಮಹಿಳೆಯನ್ನು ಆಕೆಯ ಸೋದರಳಿಯನೇ ಜೀವಂತವಾಗಿ ...

news

ಅಮಿತ್‌ ಶಾ ರಂತಹವರಿಂದ ಪಾಠ ಕಲಿಯಬೇಕಾಗಿಲ್ಲ: ಸಿಎಂ ತಿರುಗೇಟು

ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಂತಹವರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯ ನಮಗಿಲ್ಲ ಎಂದು ...

Widgets Magazine
Widgets Magazine