ಫೇಸ್ ಬುಕ್ ನಲ್ಲಿ ಮತ್ತೆ ಕಟೀಲು ದುರ್ಗಾ ದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್

ಮಂಗಳೂರು, ಗುರುವಾರ, 2 ನವೆಂಬರ್ 2017 (12:39 IST)

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ವಿರುದ್ಧ ಫೇಸ್‌ ಬುಕ್‌ ನಲ್ಲಿ ಮತ್ತೆ ಅವಹೇಳನಕಾರಿ ಪೋಸ್ಟ್‌ ಹಾಕಲಾಗಿದೆ.


ಮಂಗಳೂರು ವ್ಯಕ್ತಿಯೋರ್ವನ ಹೆಸರಿನಿಂದ ನಿರ್ವಹಿಸುತ್ತಿರುವ ಫೇಸ್‌ ಬುಕ್‌ ಪೇಜ್‌ ನಲ್ಲಿ ರಾಮ, ಸೀತೆ, ಕಟೀಲು ದುರ್ಗಾಪರಮೇಶ್ವರಿ, ಸ್ವಾಮಿ ಕೊರಗಜ್ಜ ಹೀಗೆ ಎಲ್ಲಾ ದೇವರುಗಳ ವಿರುದ್ಧ ಅಸಹ್ಯಕರ ಹಾಗೂ ವಿಕೃತ ಪೋಸ್ಟ್‌ಗಳನ್ನು ಹಾಕಲಾಗಿದೆ.

ಈ ಹಿಂದೆಯೂ ಇಂತಹದ್ದೇ ವಿವಾದಾತ್ಮಕ ಹಾಕಿದ್ದವರ ವಿರುದ್ಧ ಹಿಂದೂ ಸಮಾಜ ಬಾಂಧವರು ಪ್ರತಿಭಟನೆ ನಡೆಸಿದ್ದರು. ಆಗ ಡವರ್ಜ್ ಮೊಹಿದೀನ್ ಹಾಗೂ ಶಫಿ ಬಿ.ಎಂ. ಎಂಬುವರನ್ನು ಬಂಧಿಸಲಾಗಿತ್ತು. ಈ ಘಟನೆ ಮರೆಯುವ ಮುನ್ನವೇ ಮತ್ತೋರ್ವ ವ್ಯಕ್ತಿ ಫೇಸ್‌ ಬುಕ್‌ ನಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ, ಸ್ವಾಮಿ ಕೊರಗಜ್ಜ, ಶ್ರೀರಾಮ ಹಾಗೂ ಸೀತಾ ದೇವಿಯನ್ನು ಅವಹೇಳನಕಾರಿಯಾಗಿ ಬಿಂಬಿಸಿದ್ದಾನೆ.

ಈ ವ್ಯಕ್ತಿ ಸದ್ಯ ತನ್ನ ಖಾತೆಯನ್ನು ಡಿಲೀಟ್ ಮಾಡಿದ್ದರೂ, ಈತನ ಕಾಮೆಂಟ್‌ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವ್ಯಾಪಂ ಹಗರಣದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾನ್‌ಗೆ ಕ್ಲೀನ್ ಚಿಟ್: ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವ್ಯಾಪಂ ಹಗರಣದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್‌ಗೆ ಸಿಬಿಐ ಕ್ಲೀನ್‌ಚಿಟ್ ನೀಡಿರುವುದನ್ನು ...

news

`ಪರಿವರ್ತನಾ ಯಾತ್ರೆ ಅಲ್ಲ, ಇದು ಪಶ್ಚಾತ್ತಾಪ ಯಾತ್ರೆ’

ಬೆಂಗಳೂರು: ಇದು ಪರಿವರ್ತನಾ ಯಾತ್ರೆ ಅಲ್ಲ, ಇದು ಪಶ್ಚಾತ್ತಾಪ ಯಾತ್ರೆ ಎಂದು ಬದಲಾಯಿಸಿಕೊಳ್ಳಿ ಎಂದು ಗೃಹ ...

news

ಬಿಜೆಪಿಯ ಪರಿವರ್ತನಾ ಯಾತ್ರೆಗೆ ಅಮಿತ್ ಶಾ ಚಾಲನೆ

ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಹುಮತಗಳಿಸಿ ಅಧಿಕಾರಕ್ಕೆ ಮರಳುವ ಗುರಿಯಿಂದಾಗಿ 79 ದಿನಗಳ ...

news

ಫೇಸ್‌ಬುಕ್‌ ಚಾಟ್‌ನಲ್ಲಿ ಪ್ರಧಾನಿ ಮೋದಿ ವಿರುದ್ಧ ಅಶ್ಲೀಲ ಪದ ಬಳಕೆ: ಯುವಕ ಅರೆಸ್ಟ್

ಚೆನ್ನೈ: ಫೇಸ್‌ಬುಕ್‌ನಲ್ಲಿ ಪ್ರಧಾನಿ ಮೋದಿಯವರನ್ನು ಅಸಭ್ಯ ಪದಗಳಿಂದ ನಿಂದಿಸಿದ ಆರೋಪದ ಮೇಲೆ ವಿರುಧನಗರ್ ...

Widgets Magazine
Widgets Magazine