ರಾಷ್ಟ್ರೀಯ ಪಕ್ಷಗಳಿಂದ ಅನ್ಯಾಯ, ಅಭಿವೃದ್ಧಿಗಾಗಿ ಒಮ್ಮೆ ಅವಕಾಶ ನೀಡಿ– ಕುಮಾರಸ್ವಾಮಿ

ಬೆಂಗಳೂರು, ಶನಿವಾರ, 17 ಫೆಬ್ರವರಿ 2018 (20:53 IST)

ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ರಾಜ್ಯದ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
 
ಜೆಡಿಎಸ್ ವಿಕಾಸ ಪರ್ವ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ 10 ವರ್ಷಗಳಿಂದ ಬಿಜೆಪಿ ಹಾಗೂ ಕಾಂಗ್ರೆಸ್ ಅಧಿಕಾರ ನಡೆಸುತ್ತಿವೆ. ಆದರೆ, ರಾಜ್ಯದ ಜನತೆಯ ಕಷ್ಟ ದೂರವಾಗಿಲ್ಲ. ನನಗೆ ಮುಖ್ಯಮಂತ್ರಿ ಆಗಬೇಕು ಎಂಬುದು ಮುಖ್ಯವಲ್ಲ. ರಾಜ್ಯದ ಜನರ ಕಷ್ಟ ತೀರಿಸುವುದು ಮುಖ್ಯವಾಗಿದೆ ಎಂದಿದ್ದಾರೆ.
 
ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೇಂದ್ರದ ಮುಂದೆ ಕೈಯೊಡ್ಡುವುದಿಲ್ಲ. ರಾಜ್ಯದ ಎಲ್ಲ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು. ರೈತರ ಕಲ್ಯಾಣ ಮಾಡುವುದು ಮಾತ್ರವಲ್ಲ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ. ನನಗೆ ಒಂದು ಅವಕಾಶ ಕೊಟ್ಟು ನೋಡಿರಿ ಎಂದು ತಿಳಿಸಿದ್ದಾರೆ.
 
ಇದೇ ವೇಳೆ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜೆಡಿಎಸ್ ಪಕ್ಷವನ್ನು ಉಳಿಸುವ ಸಲುವಾಗಿ ನಾನು ಮುಖ್ಯಮಂತ್ರಿ ಆಗಿದ್ದೆ. ಆಗಿನ ಸಂದರ್ಭದಲ್ಲಿ ಜೆಡಿಎಸ್ ಪಕ್ಷವನ್ನು ಮುಗಿಸಲು ಪ್ರಯತ್ನ ನಡೆದಿತ್ತು. ಅನ್ಯಭಾಗ್ಯ ಯೋಜನೆಯಿಂದ ಹಸಿವು ಮುಕ್ತ ರಾಜ್ಯವಾಗಿದೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ನನ್ನ ಜೊತೆಗೆ ಬಂದರೆ ರಾಜ್ಯದಲ್ಲಿ ಊಟವಿಲ್ಲದೆ ಹಸಿವಿನಿಂದ ಜೀವಿಸುವವರನ್ನು ತೋರಿಸುತ್ತೇನೆ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿದ್ದರಾಮಯ್ಯ ಬೊಗಳೆ ದಾಸಯ್ಯ– ಯಡಿಯೂರಪ್ಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇವಲ ಬೊಗಳೆ ದಾಸಯ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ...

news

ಸಿಂಡಿಕೇಟ್ ಸದಸ್ಯರಾಗಲು ಪದವಿ ಅಗತ್ಯ– ರಾಯರೆಡ್ಡಿ

ವಿಶ್ವ ವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರಾಗಲು ಇನ್ನುಮುಂದೆ ಪದವಿ ಪಡೆದವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ...

news

ಹಿಂದುತ್ವ ಗುತ್ತಿಗೆ ಹಿಡಿದವರಂತೆ ಬಿಜೆಪಿಯವರ ನಡತೆ– ರಾಮಲಿಂಗಾರೆಡ್ಡಿ

ಹಿಂದುತ್ಚವನ್ನು ಗುತ್ತಿಗೆ ಹಿಡಿದವರಂತೆ ಬಿಜೆಪಿ‌ಯವರು ನಡೆದುಕೊಳ್ಳುತ್ತಿದ್ದಾರೆ ಎಂದು ಗೃಹ ಸಚಿವ ...

news

ನರೇಂದ್ರಮೋದಿ ಸಲಹೆಯಂತೆ ಎಐಡಿಎಂಕೆ ಬಣಗಳ ವಿಲೀನ– ಪನ್ನೀರ್ ಸೆಲ್ವಂ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಲಹೆಯಂತೆ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಬಣದೊಂದಿಗೆ ತಮ್ಮ ...

Widgets Magazine
Widgets Magazine