Widgets Magazine
Widgets Magazine

ಸಿಎಂ ವೋಟ್‌ಬ್ಯಾಂಕ್‌ಗಾಗಿ ಯಾರ್ ಬೂಟ್ ಬೇಕಾದ್ರೂ ನೆಕ್ತಾರೆ: ಅನಂತ್ ಕುಮಾರ್ ಹೆಗಡೆ

ಬೆಳಗಾವಿ, ಶನಿವಾರ, 18 ನವೆಂಬರ್ 2017 (11:42 IST)

Widgets Magazine

ವೋಟ್‌ಬ್ಯಾಂಕ್‌ಗಾಗಿ ಯಾರ ಬೂಟ್ ಬೇಕಾದ್ರೂ ನೆಕ್ತಾರೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮತ್ತೊಬ್ಬ ಬಿಜೆಪಿ ಶಾಸಕನಂತೆ ನಾಲಿಗೆ ಹರಿಬಿಟ್ಟಿದ್ದಾರೆ.
 
ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮುಂಬರುವ ಚುನಾವಣೆಯಲ್ಲಿ ಜಯಗಳಿಸಲು ಮುಸ್ಲಿಮರ ಓಲೈಕೆಯಲ್ಲಿ ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
 
ರಾಜ್ಯ ಸರಕಾರದ ಪರವಾಗಿ ಟಿಪ್ಪು ಜಯಂತಿ ಆಚರಿಸುವ ಸರಕಾರಕ್ಕೆ ರಾಣಿ ಕಿತ್ತೂರ್ ಚೆನ್ನಮ್ಮ, ರನ್ನ ಪಂಪ ಅವರ ಜಯಂತಿ ಆಚರಿಸಲು ನೆನಪು ಬರುತ್ತಿಲ್ಲ. ಅನೇಕ ಸಾಧಕರ ಜಯಂತಿ ಆಚರಿಸದೇ ಕೇವಲ ವೋಟ್‌ಬ್ಯಾಂಕ್‌ಗಾಗಿ ಟಿಪ್ಪು ಜಯಂತಿ ಆಚರಿಸುತ್ತಿದ್ದಾರೆ ಎಂದು ಕಿಡಿಕಾರಿದರು.
 
ಭಯೋತ್ಪಾದಕರಿಗೆ ಕರ್ನಾಟಕ ಸೇಫ್ ಜೋನ್. ನಾಲ್ಕುವರೆ ಲಕ್ಷ ಬಾಂಗ್ಲಾದೇಶ ವಲಸಿಗರು ಬೆಂಗಳೂರಿನಲ್ಲಿ ಇದ್ದಾರೆ. ಇವರು ಬೆಳಗಾವಿ, ವಿಜಯಪುರ ಹೀಗೆ ಎಲ್ಲ ಕಡೆ ಜೋಳಿಗೆ ಹಾಕಿಕೊಂಡು ಓಡಾಡುತ್ತಾರೆ ಎಂದು ಅನಂತ್ ಕುಮಾರ್ ಹೇಳಿದ್ದಾರೆ.  

ಮುಂಬರುವ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ಪಕ್ಷ ಶೀಘ್ರವೇ ನಿರ್ನಾಮವಾಗಲಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಭವಿಷ್ಯ ನುಡಿದಿದ್ದಾರೆ.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಐಟಿ ದಾಳಿಗೆ ಶಶಿಕಲಾ ಬಣದ ಕುಮ್ಮಕ್ಕು: ಜಯಾ ಸೊಸೆ ಆರೋಪ

ಚೆನ್ನೈ: ಅಮ್ಮಾ ಜಯಲಲಿತಾ ನಿವಾಸದ ಮೇಲೆ ರಾತ್ರೋ ರಾತ್ರಿ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದರ ಹಿಂದೆ ...

news

ಜಯಲಲಿತಾ ಮನೆಯಲ್ಲಿ ಐಟಿ ಅಧಿಕಾರಿಗಳ ಕಣ್ಣು ಆ ಎರಡು ಬೆಡ್ ರೂಂ ಮೇಲಿತ್ತು!

ಚೆನ್ನೈ: ಮಾಜಿ ಸಿಎಂ, ದಿವಂಗತ ಜಯಲಲಿತಾ ನಿವಾಸಕ್ಕೆ ರಾತ್ರೋ ರಾತ್ರಿ ದಾಳಿ ನಡೆಸಿದ ಐಟಿ ಅಧಿಕಾರಿಗಳು ...

news

ಜಯಲಲಿತಾ ಕೊಠಡಿಗೆ ಐಟಿ ಅಧಿಕಾರಿಗಳು ಕಾಲಿಡಲಿಲ್ಲ! ಯಾಕೆ ಗೊತ್ತಾ?

ಚೆನ್ನೈ: ಜಯಲಲಿತಾ ನಿವಾಸಕ್ಕೆ ರಾತ್ರೋ ರಾತ್ರಿ ದಾಳಿ ನಡೆಸಿದ ಐಟಿ ಅಧಿಕಾರಿಗಳು ಮಾಜಿ ಸಿಎಂರ ಕೊಠಡಿಗೆ ...

news

ಜಯಲಲಿತಾ ನಿವಾಸದ ಮೇಲೆ ಐಟಿ ದಾಳಿ: ತಮಿಳುನಾಡಿನಲ್ಲಿ ಪ್ರತಿಭಟನೆ

ಚೆನ್ನೈ: ಮಾಜಿ ಸಿಎಂ, ದಿವಂಗತ ಜಯಲಲಿತಾ ಅವರಿಗೆ ಸೇರಿದ ಪೊಯೆಸ್ ಗಾರ್ಡನ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ...

Widgets Magazine Widgets Magazine Widgets Magazine