ದೇವರ ಜಾತ್ರೆಯಲ್ಲಿ ಚರಂಡಿಗೆ ಬಿದ್ದ ಎತ್ತಿನ ಬಂಡಿ; ಮುಂದೇನಾಯ್ತು?

ಶಿವಮೊಗ್ಗ, ಬುಧವಾರ, 13 ಫೆಬ್ರವರಿ 2019 (13:07 IST)

ದೇವರ ರಥೋತ್ಸವದ ಸಂದರ್ಭದಲ್ಲಿ ಪಾನಕದ ಎತ್ತಿನಗಾಡಿಯೊಂದು ಚರಂಡಿಗೆ ಬಿದ್ದ ಘಟನೆ ನಡೆದಿದೆ.

ಬೀರೂರಿನ ಗ್ರಾಮ ದೇವತೆ  ಅಂತರಘಟ್ಟಮ್ಮ ದೇವರ ರಥೋತ್ಸವದ ವೇಳೆ ಪಾನಕದ ಎತ್ತಿನ ಗಾಡಿಯೊಂದು ಚರಂಡಿಗೆ ಉರುಳಿ ಬಿದ್ದ ಪರಿಣಾಮ ಓರ್ವನ ಪರಿಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬೀರೂರು ಪಟ್ಟಣದ ಶಿವಾಜಿನಗರದ ಆಲದಮರದ ತಿರುವಿನಲ್ಲಿ ಘಟನೆ ನಡೆದಿದ್ದು, ಹಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಥೋತ್ಸವದ ವೇಳೆ ಸುಮಾರು 50ಕ್ಕೂ ಹೆಚ್ಚು ಪಾನಕದ ಗಾಡಿಗಳನ್ನು ಓಡಿಸಲಾಯಿತು.

ಈ ವೇಳೆ ಒಂದು ಎತ್ತಿನಗಾಡಿ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ. ಈ ವೇಳೆ  ಚಂದ್ರೋಜಿರಾವ್, ತಿಮ್ಮಣ್ಣ ಎಂಬುವರ ತಲೆಗೆ ತೀವ್ರ ಪ್ರಮಾಣದಲ್ಲಿ ಪೆಟ್ಟಾದ ಪರಿಣಾಮ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪೊಲೀಸ್ ಠಾಣೆಯಲ್ಲೇ ಮದ್ವೆ ಆದ ಲವರ್ಸ್!

ಪ್ರೇಮಿಗಳಿಬ್ಬರು ಪೊಲೀಸ್ ಠಾಣೆಯಲ್ಲೇ ಹಾರ ಬದಲಾಯಿಸಿಕೊಂಡ ಮದುವೆಯಾದ ಘಟನೆ ನಡೆದಿದೆ.

news

ಬಿಜೆಪಿ ಶಾಸಕರ ಬೆಂಬಲಿಗರಿಂದ ಮನೆ ಧ್ವಂಸ?

ಬಿಜೆಪಿ ಶಾಸಕರ ಬೆಂಬಲಿಗರೊಬ್ಬರು ಮನೆಯೊಂದನ್ನು ಧ್ವಂಸಗೊಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಶಾಸಕರ ...

news

ಭೂಮಿಯಲ್ಲಿ ಜೀವಂತ ಅನುಷ್ಠಾನ ಕುಳಿತ ಸ್ವಾಮೀಜಿ ಯಾರು?

ಲೋಕ ಕಲ್ಯಾಣಕ್ಕಾಗಿ ಸ್ವಾಮೀಜಿಯೊಬ್ಬರು ಭೂಮಿಯಲ್ಲಿ ಜೀವಂತ ಅನುಷ್ಠಾನ ಕುಳಿತಿದ್ದಾರೆ.

news

ಬಂಡಾಯಗಾರರೊಂದಿಗೆ ನಾನಿಲ್ಲ ಎಂದ ಉಮೇಶ್ ಜಾಧವ

ಕಾಂಗ್ರೆಸ್ ನ ಬಂಡಾಯಗಾರರೊಂದಿಗೆ ನಾನು ಇಲ್ಲ. ಅಲ್ಲದೇ ನಾನು ಮುಂಬೈಗೂ ಹೋಗಿಲ್ಲ. ಹೀಗಂತ ಕೈ ಪಾಳೆಯದ ಶಾಸಕ ...

Widgets Magazine