ಬೆಂಗಳೂರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಅಹೋರಾತ್ರಿ ಪ್ರತಿಭಟನೆ

ಬೆಂಗಳೂರು, ಮಂಗಳವಾರ, 21 ಮಾರ್ಚ್ 2017 (07:22 IST)

Widgets Magazine

ಗೌರವ ಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಬೀದಿಗಿಳಿದಿದ್ದಾರೆ. ಬೆಂಗಳೂರಿನ ಫ್ರೀಂಡಂಪಾರ್ಕ್`ನಲ್ಲಿ 5 ಸಾವಿರಕ್ಕೂ ಅಧಿಕ ಕಾರ್ಯಕರ್ತೆಯರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. 


ನಿನ್ನೆ ಕಾರ್ಯಕರ್ತೆಯರ ಭೇಟಿಗೆ ಬಂದಿದ್ದ ಸಚಿವೆ ಉಮಾಶ್ರೀ ಕಣ್ಣೊರೆಸುವ ತಂತ್ರ ಮಾಡಿದ್ದಾರೆ ಎಂದು ಕಾರ್ಯಕರ್ತೆಯರು ಆರೋಪಿಸಿದ್ದಾರೆ. ದೂರದ ಊರುಗಳಿಂದ ಇಲ್ಲಿಗೆ ಬಂದಿರುವ ಕಾರ್ಯಕರ್ತೆಯರು ಕುಡಿಯುವ ನೀರು, ಶೌಚಾಲಯ ಸೌಲಭ್ಯವಿಲ್ಲದೆ ರಾತ್ರಿಯಿಡೀ ಪರಿತಪಿಸಿದ್ದಾರೆ.

ರಾತ್ರಿಯಿಡೀ ತಮ್ಮ ಪುಟ್ಟ ಮಕ್ಕಳ ಜೊತೆ ರಸ್ತೆಯಲ್ಲೇ ಮಲಗಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ.
 
ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಅಂಗನವಾಡಿ ಕಾರ್ಯಕರ್ತೆಯರ ನೋವನ್ನ ಾಲಿಸಿದ್ದಾರೆ. 2015ರಲ್ಲಿ ಕಾರ್ಯಕರ್ತೆಯರಿಗೆ ಕೊಟ್ಟ ಭರವಸೆಯನ್ನ ಸರ್ಕಾರ ಈಡೇರಿಸಿಲ್ಲ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕೆಂದು ಕುಮಾರಸ್ವಾಮಿ ಆಗ್ರಹಿಸಿದರು.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಬೆಂಗಳೂರು Bengaluru Protest Anganavadi Workers

Widgets Magazine

ಸುದ್ದಿಗಳು

news

ಲೈಂಗಿಕ ದೌರ್ಜನ್ಯಕ್ಕೆ ತುತ್ತಾದ ಕೇಂದ್ರ ಸರ್ಕಾರದ ಮಹಿಳಾ ನೌಕರರಿಗೆ 90 ದಿನ ರಜೆ

ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿ ಕೇಸ್ ದಾಖಲಿಸುವ ಕೇಂದ್ರ ಸರ್ಕಾರದ ಮಹಿಳಾ ನೌಕರರಿಗೆ ವಿಚಾರಣೆ ಸೇರಿದಂತೆ ...

news

ಡೈರಿಯಿಂದ ಬಿಜೆಪಿಯವರ ಬಂಡವಾಳ, ಸುಳ್ಳುಪ್ರಚಾರ ಬಹಿರಂಗವಾಗಿದೆ: ದಿನೇಶ್ ಗುಂಡೂರಾವ್

ಬೆಂಗಳೂರು: ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ನಿವಾಸದಲ್ಲಿ ದೊರೆತ ಡೈರಿ ...

news

ಉಪಚುನಾವಣೆ: ಕಳಲೆ ಕೃಷ್ಣಮೂರ್ತಿ, ಶ್ರೀನಿವಾಸ್ ಪ್ರಸಾದ್ ಆಸ್ತಿ ವಿವರ ಘೋಷಣೆ

ಮೈಸೂರು: ನಂಜನಗೂಡು ಉಪಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಕಳಲೆ ಕೃಷ್ಣಮೂರ್ತಿ ನಾಮಪತ್ರ ಸಲ್ಲಿಕೆಯ ...

news

ಜೆಡಿಎಸ್ ಪಾಳಯದತ್ತ ಎಚ್.ವಿಶ್ವನಾಥ್ ಚಿತ್ತ?

ಬೆಂಗಳೂರು: ಕಾಂಗ್ರೆಸ್ ಪಕ್ಷದ ಬೆಳವಣಿಗೆಗಳಿಂದ ಬೇಸತ್ತಿರುವ ಹಿರಿಯ ಕಾಂಗ್ರೆಸ್ ನಾಯಕ ಎಚ್.ವಿಶ್ವನಾಥ್ ...

Widgets Magazine