ಅನ್ನಭಾಗ್ಯದ ಅಕ್ಕಿಯನ್ನೇ ಕನ್ನ ಹೊಡೆದ ಖದೀಮರು

ರಾಯಚೂರು, ಮಂಗಳವಾರ, 25 ಅಕ್ಟೋಬರ್ 2016 (19:00 IST)

Widgets Magazine

ರಾಯಚೂರು: ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಹೊರ ರಾಜ್ಯಗಳಿಗೆ ಸಾಗಿಸುತ್ತಿದ್ದ ಮೂರು ಲಾರಿಗಳನ್ನು ಮಾನ್ವಿ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಮಂಗಳವಾರ ಮಧ್ಯಾಹ್ನ ತಾಲೂಕಿನ ಹೊರವಲಯದಲ್ಲಿ ನಡೆದಿದೆ.
 


 

ಮೂರು ಲಾರಿಗಳಲ್ಲಿ ಭರ್ತಿಯಾಗಿ ಅಕ್ಕಿ ತುಂಬಿಸಿಕೊಂಡು ರಾಯಚೂರಿನಿಂದ ಹೊರಟಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಾನ್ವಿ ಪೊಲೀಸರು ಲಕ್ಷಾಂತರ ರು. ಮೌಲ್ಯದ ಅನ್ನ ಭಾಗ್ಯದ ಅಕ್ಕ ಚೀಲವನ್ನು ಲಾರಿ ಸಮೇತ ವಶಪಡಿಸಿಕೊಂಡಿದ್ದಾರೆ. ಸಂದರ್ಭದಲ್ಲಿ ಲಾರಿ ಚಾಲಕ ಹಾಗೂ ಕ್ಲೀನರ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಆ ಮೂರು ಲಾರಿಗಳು ಉದ್ಯಮಿಯೊಬ್ಬರಿಗೆ ಸೇರಿದ್ದು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ. ಆ ಮಾಹಿತಿ ಹಿಡಿದು ಹೊರಟಾಗ ಅದೇ ಉದ್ಯಮಿ ಅನ್ನಭಾಗ್ಯ ಯೋಜನೆಯ ಸಾಮಾಗ್ರಿಗಳನ್ನು ಶಾಲೆಗೆ ಸಾಗಿಸುವ ಗುತ್ತಿಗೆ ಪಡೆದಿದ್ದ ಎನ್ನುವ ಮಾಹಿತಿ ಹೊರಬಿದ್ದಿದೆ.

 

ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಸುದ್ದಿ ತಿಳಿಯುತ್ತಿದ್ದಂತೆ ಆಹಾರ ಇಲಾಖೆ ಅಧಿಕಾರಿಗಳು ಮಾನ್ವಿ ಪೊಲೀಸ್ ಠಾಣೆಗೆ ದೌಡಾಯಿಸಿ, ಮಾಹಿತಿ ಸಂಗ್ರಹಿಸಿದ್ದಾರೆ. ಆದರೆ, ಆಹಾರ ಇಲಾಖೆಯ ಅಧಿಕಾರಿಗಳ ಬೆಂಬಲವಿಲ್ಲದೆ ಮೂರು ಲಾರಿಗಳಷ್ಟು ಅನ್ನಭಾಗ್ಯ ಯೋಜನೆಯ ಅಕ್ಕಿಗಳನ್ನು ಸಾಗಾಟ ಮಾಡಲು ಸಾಧ್ಯವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅದರ ಸಂಪೂರ್ಣ ತನಿಖೆ ಆಹಾರ ಇಲಾಖೆಯದ್ದೇ ಆಗಿರುವುದರಿಂದ, ಸತ್ಯಾ ಸತ್ಯತೆಗಳು ಹೊರ ಬರುವುದು ದೂರದ ಮಾತು ಎನ್ನುವ ಅಪಸ್ವರ ಮಾನ್ವಿ ಜನತೆಯಿಂದ ಕೇಳಿ ಬರುತ್ತಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬೆಂಬಲಿಗರನ್ನು ಕಾಂಗ್ರೆಸ್‌ ಪಕ್ಷದಿಂದ ಉಚ್ಛಾಟಿಸಿರುವುದು ಸರಿಯಲ್ಲ: ಶ್ರೀನಿವಾಸ್ ಪ್ರಸಾದ್

ನನ್ನ ಬೆಂಬಲಿಗರನ್ನು ಕಾಂಗ್ರೆಸ್‌ ಪಕ್ಷದಿಂದ ಉಚ್ಛಾಟಿಸಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಶ್ರೀನಿವಾಸ್ ...

news

ಅಧಿಕಾರಕ್ಕೇರುವವರೆಗೆ ಗಡ್ಡ ಬೋಳಿಸಲಾರೆ: 'ಕೈ' ನಾಯಕನ ಪ್ರತಿಜ್ಞೆ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾದ ಗದ್ದುಗೆಗೆ ಏರುವವರೆಗೆ ಗಡ್ಡ ಬೋಳಿಸುವುದಿಲ್ಲವೆಂದು ತೆಲಂಗಾಣ ಪ್ರದೇಶ್ ...

news

ಅಮ್ಮ, ದೀಪಾವಳಿ ಪಾಕಿಸ್ತಾನದೊಂದಿಗೆ ಆಚರಿಸುತ್ತಿದ್ದೇನೆ: ಹುತಾತ್ಮನಾಗುವ ಮುನ್ನ ತಾಯಿಗೆ ಹೇಳಿದ ಸೈನಿಕ

ಜಮ್ಮು ಕಾಶ್ಮಿರದ ಆರ್‌.ಎಸ್.ಪುರಾ ಸೆಕ್ಟರ್‌ನಲ್ಲಿ ರವಿವಾರದಂದು ಪಾಕಿಸ್ತಾನ ಸೇನೆಯ ಗುಂಡಿನ ದಾಳಿಗೆ ...

news

ನಿಗಮ, ಮಂಡಳಿ ನೇಮಕಾತಿ ಲಾಬಿ: ರಾಹುಲ್ ಗಾಂಧಿ ಭೇಟಿಗೆ ದೇಶಪಾಂಡೆ ಸಿದ್ದತೆ

ನಿಗಮ ಮಂಡಳಿ ನೇಮಕಾತಿಯಲ್ಲಿ ತಮ್ಮ ಬೆಂಬಲಿಗರಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಸಚಿವ ...

Widgets Magazine Widgets Magazine