ಪತ್ರಕರ್ತರ ಪ್ರಶ್ನೆಗೆ ಸಿಟ್ಟಾಗಿ ಕೈಮುಗಿದು ಹೊರ ನಡೆದ ಅನುಪಮಾ ಶೆಣೈ

ಬಳ್ಳಾರಿ, ಸೋಮವಾರ, 30 ಅಕ್ಟೋಬರ್ 2017 (14:58 IST)

Widgets Magazine

ಬಳ್ಳಾರಿ: ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಿಟ್ಟಾದ ಮಾಜಿ ಡಿವೈಎಸ್ಪಿ ಅನುಪಮಾ ಶೇಣೈ ಕೈ ಮುಗಿದು ಅರ್ಧಕ್ಕೆ ಸುದ್ದಿಗೋಷ್ಠಿ ಮೊಟಕುಗೊಳಿಸಿದ ಘಟನೆ ನಡೆದಿದೆ.


ಹೊಸ ರಾಜಕೀಯ ಪಕ್ಷ ಕಟ್ಟಿ ರಾಜಕೀಯ ನೆಲೆ ಕಂಡುಕೊಳ್ಳಲು ಹನಣಿಸುತ್ತಿರುವ ಅನುಪಮಾ, ಮುಂದಿನ ತಿಂಗಳಲ್ಲಿ ಉದ್ಘಾಟನೆಯಾಗಲಿರುವ ತಮ್ಮ ಹೊಸ ಪಕ್ಷದ ಬಗ್ಗೆ ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ಆಯೋಜಿಸಿದ್ದರು. ಈ ವೇಳೆ ಪತ್ರಕರ್ತರೊಬ್ಬರು ಕೂಡ್ಲಿಗಿಯಲ್ಲೇ ಹೊಸ ಪಕ್ಷ ಉದ್ಘಾಟನೆ ಯಾಕೆ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಕೇಳಿದ್ದಾರೆ. ಇಷ್ಟಕ್ಕೆ ಸಿಟ್ಟಾದ ಅನುಪಮಾ, ಮಾಧ್ಯಮದವರು ಬಳ್ಳಾರಿಯನ್ನು ‘ರಿಪಬ್ಲಿಕ್ ಆಫ್ ಬಳ್ಳಾರಿ’ ಎಂದು ಕೆಟ್ಟದಾಗಿ ಬಿಂಬಿಸಿದ್ದೀರಿ. ಆದ್ರೆ ವಾಸ್ತವವಾಗಿ ಬಳ್ಳಾರಿ ಹಾಗಿಲ್ಲ. ಇಲ್ಲಿನ ಜನರು ಮುಗ್ದರು ಎಂದು ವಿವರಿಸಿದ್ದಾರೆ.

ಇದಕ್ಕೆ ಉತ್ತರ ನೀಡಿದ ಪತ್ರಕರ್ತರು, ನಾವೂ ‘ರಿಪಬ್ಲಿಕ್ ಆಫ್ ಬಳ್ಳಾರಿ’ ಎಂದಿಲ್ಲ. ನ್ಯಾ. ಸಂತೋಷ ಹೆಗಡೆ ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಹೇಳಿದ್ದರು. ಈ ಹಿಂದೆ ನೀವೂ ಕೂಡಾ ಕೂಡ್ಲಿಗಿಯಲ್ಲಿ ‘ಲಿಕ್ಕರ್ ಲಾಬಿ’ ಎಂದು ಆರೋಪಿಸಿದ್ದು ಮರೆತು ಬಿಟ್ಟಿದ್ದೀರಾ ಎಂದು ಮರು ಪ್ರಶ್ನೆ ಕೇಳಿದ್ದಾರೆ.

ಇದರಿಂದ ಸಿಟ್ಟಾದ ಅನುಪಮಾ ಶೆಣೈ, ಅರ್ಧಕ್ಕೆ ಸುದ್ದಿಗೋಷ್ಠಿ ಮೊಟಕುಗೊಳಿಸಿ ಪತ್ರಕರ್ತರಿಗೆ ಕೈ ಮುಗಿದು ಸಿಟ್ಟಿನಿಂದಲೇ ಹೊರನಡೆದಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಾಯ್‌ಫ್ರೆಂಡ್‌ನನ್ನು ಪತ್ತೆ ಹಚ್ಚಲು ಗ್ಯಾಂಗ್‌ರೇಪ್ ಕೇಸ್ ದಾಖಲಿಸಿದ ಯುವತಿ

ಪುಣೆ: ಫೋನ್ ಕರೆಗಳನ್ನು ಸ್ವೀಕರಿಸದೇ ನಾಪತ್ತೆಯಾಗಿದ್ದ ಬಾಯ್‌ಫ್ರೆಂಡ್‌ ವಂಚನೆಯಿಂದ ಆಕ್ರೋಶಗೊಂಡ 24 ...

news

ಮಂಗಳೂರು ಎಳನೀರು ಸವಿಗೆ ಮನಸೋತ ಪ್ರಧಾನಿ ಮೋದಿ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಹನಿ ನೀರು ಸೇವಿಸದೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಮಂಜುನಾಥ ದೇವರ ...

news

ಮಲೆಯಾಳಂ ನಟಿಗೆ ವಿವಾಹವಾಗುವಂತೆ ಮ್ಯಾಸೇಜ್ ಕಳುಹಿಸುತ್ತಿದ್ದ ಆರೋಪಿ ಅರೆಸ್ಟ್

ಬೆಂಗಳೂರು: ಮಲೆಯಾಳಂ ಚಿತ್ರನಟಿಗೆ ವಿವಾಹವಾಗುವುದಾಗಿ ನಿರಂತರ ಮೊಬೈಲ್ ಸಂದೇಶಗಳನ್ನು ರವಾನಿಸಿ ಕಿರುಕುಳ ...

news

ಸಿಎಂ, ಜಾರ್ಜ್ ವಿರುದ್ಧ ಎಸಿಬಿಯಲ್ಲಿ ಮತ್ತೆ ದಾಖಲಾಯ್ತು ಕೇಸ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಜಾರ್ಜ್ ವಿರುದ್ಧ ಮತ್ತೆ ಎಸಿಬಿಯಲ್ಲಿ 2 ಪ್ರತ್ಯೇಕ ದೂರು

Widgets Magazine