ಕನ್ನಡ ಭಾಷೆಯ ಮೇಲಿನ ಯಾವುದೇ ದಾಳಿ ಸಹಿಸೋಲ್ಲ: ಸಿಎಂ ಗುಡುಗು

ಬೆಂಗಳೂರು, ಸೋಮವಾರ, 31 ಜುಲೈ 2017 (15:59 IST)

ಕನ್ನಡ ಭಾಷೆಯ ಪರವಾಗಿ ತಮ್ಮ ನಿಲುವು ಸ್ಪಷ್ಟಪಡಿಸಿದ ಸಿಎಂ ಸಿದ್ದರಾಮಯ್ಯ, ಕನ್ನಡ ಭಾಷೆಯ ಮೇಲೆ ನಡೆಯುವ ಯಾವುದೇ ದಾಳಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. 
 
ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ವಾಸಿಸಲು ಬಯಸುವವರು ಕನ್ನಡ ಸಂಸ್ಕ್ರತಿಯನ್ನು ಕಲಿಯಬೇಕು. ಭಾಷೆಯ ಮೇಲೆ ದಾಳಿ ಮಾಡಲು ಯತ್ನಿಸಬಾರದು ಎಂದು 14 ನಿಮಿಷಗಳ ವಿಡಿಯೋವನ್ನು ಯು-ಟ್ಯೂಬ್‌ನಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
 
ಸಿದ್ದರಾಮಯ್ಯನನ್ನು "ಕನ್ನಡ ಜನರ ನಾಯಕ ಮತ್ತು ರಕ್ಷಕ" ಎಂದು ತೋರಿಸಲು ವೀಡಿಯೊದಲ್ಲಿ ಪ್ರಯತ್ನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ನೆರೆಯವರು ನಮ್ಮ ಸಹೋದರರು ಮತ್ತು ಸಹೋದರಿಯರು, ನಾವು ಅವರನ್ನು ಪ್ರೀತಿಸಬೇಕು. ಆದರೆ, ನಮ್ಮ ಭಾಷೆಯ, ಭೂಮಿ ಮತ್ತು ನೀರಿನ ಮೇಲೆ ಯಾವುದೇ ಆಕ್ರಮಣವನ್ನು ನಾವು ತಡೆದುಕೊಳ್ಳುವುದಿಲ್ಲ ಎಂಬ ಕಠೋರವಾದ ಸಂದೇಶವನ್ನು ಕಳುಹಿಸುವಲ್ಲಿ ನಾವು ಯಾವುದೇ ಮೀಸಲಾತಿ ಹೊಂದಿರಬಾರದು. ಏಕೆಂದರೆ ಇವುಗಳನ್ನೆಲ್ಲಾ ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
 
ಶಾಲೆಗಳಲ್ಲಿ ಕನ್ನಡ ಭಾಷೆ ಕಡ್ಡಾಯ, ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ, ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜಕ್ಕಾಗಿ ಸಮಿತಿ ರಚನೆ ಮೂಲಕ ತಮ್ಮ ಕನ್ನಡ ಪರ ಪ್ರೇಮವನ್ನು ಮೆರೆದಿದ್ದಾರೆ ಎನ್ನಲಾಗುತ್ತಿದೆ.
 
ಕರ್ನಾಟಕ ಸರಕಾರವು ಬೆಂಗಳೂರು ಮೆಟ್ರೋ ಅಧಿಕಾರಿಗಳಿಗೆ ಪತ್ರ ಬರೆದು ತ್ರೀಭಾಷಾ ಸೂತ್ರವನ್ನು ಕೈಬಿಡುವ ಬಗ್ಗೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿ ಎಂದು ಕೋರಿದ್ದಾರೆ. 
 
ಇಂದು ನಮ್ಮ ಕನ್ನಡಿಗರು ಭೂಮಿ, ನೀರು ಮತ್ತು ಭಾಷೆ ಬಗ್ಗೆ ಹೆಮ್ಮೆಯನ್ನು ಬೆಳೆಸಿಕೊಳ್ಳಬೇಕು. ನಮ್ಮ ರಾಜ್ಯವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಬೇಕು. ಇದು ನಮ್ಮ ಜವಾಬ್ದಾರಿಯಾಗಿರುತ್ತದೆ ಎಂದು ಕರ್ನಾಟಕ ನಮ್ಮ ಹೆಮ್ಮೆ ಎನ್ನುವ ಶೀರ್ಷಿಕೆಯಿರುವ ವಿಡಿಯೋದಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಕನ್ನಡ ಪ್ರೀತಿಯನ್ನು ಮೆರೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಸಿಎಂ ಸಿದ್ದರಾಮಯ್ಯ ಕನ್ನಡ ಭಾಷೆ ಕಾಂಗ್ರೆಸ್ ಸರಕಾರ ಕನ್ನಡ ಸಂಸ್ಕ್ರತಿ Karnataka Kannada Attack Congress Government Cm Siddaramaiah Kannada Culture

ಸುದ್ದಿಗಳು

news

ಗೋ ರಕ್ಷಕರ ಹೆಸರಲ್ಲಿ ಗೂಂಡಾಗಿರಿ: ಕೇಂದ್ರದ ಪರೋಕ್ಷ ಬೆಂಬಲ: ಖರ್ಗೆ ವಾಗ್ದಾಳಿ

ಗೋ ರಕ್ಷಕರ ಹೆಸರಲ್ಲಿ ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿ ದೇಶದಲ್ಲಿ ...

news

ತಾಳಿ ಕಿತ್ತು ವರನ ಕೈಗಿಟ್ಟು ಬಾಯ್`ಫ್ರೆಂಡ್ ಜೊತೆ ವಧು ಎಸ್ಕೇಪ್..!

ಮದುವೆಯಾದ ಕೆಲವೇ ನಿಮಿಷಗಳಲ್ಲಿ ವಧು ತಾಳಿ ಕಿತ್ತು ವರನ ಕೈಯಲ್ಲಿಟ್ಟು ಲವರ್ ಜೊತೆ ಹೋಗಿರುವ ಘಟನೆ ಕೇರಳದ ...

news

ಕಾಂಗ್ರೆಸ್ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯಬೇಡಿ: ಮಠಾಧೀಶರಿಗೆ ಶೆಟ್ಟರ ಸಲಹೆ

ಹುಬ್ಬಳ್ಳಿ: ಲಿಂಗಾಯುತ ಪ್ರತ್ಯೇಕ ಧರ್ಮ ಕುರಿತಂತೆ ಕಾಂಗ್ರೆಸ್ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯಬೇಡಿ ಎಂದು ...

news

ವೀರಶೈವ ಲಿಂಗಾಯುತ ಪ್ರತ್ಯೇಕ ಧರ್ಮ ಬೇಡ: ಸಚಿವ ಪಾಟೀಲ್

ಬೆಂಗಳೂರು: ವೀರಶೈವ ಲಿಂಗಾಯುತ ಪ್ರತ್ಯೇಕ ಧರ್ಮ ಬೇಡ ಎಂದು ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ.ಪಾಟೀಲ್ ...

Widgets Magazine