ನಗುವಿನ ಮಾಲೀಕ, ಕನ್ನಡಿಗರ ಮನೆ-ಮನಗಳ ಅಜಾತಶುತ್ರು ಅಪ್ಪು ನಮ್ಮನ್ನ ಅಗಲಿ ತಿಂಗಳುಗಳೇ ಕಳೆದಿದೆ. ಆದರೆ, ಅಪ್ಪು ಮಾತ್ರ ಅಭಿಮಾನಿಗಳ ಮನದಲ್ಲಿ ಚಿರಸ್ಥಾಯಿಯಾಗಿ ನೆಲೆ ನಿಂತಿದ್ದಾರೆ. ಇದಕ್ಕೆ ಚಿಕ್ಕಮಗಳೂರು ನಗರದಲ್ಲಿ ನಡೆದ ಮದುವೆಯೇ ಜೀವಂತ ಸಾಕ್ಷಿ. ಅಗಲಿದ ನಟನನ್ನ ಹುಟ್ಟುಹಬ್ಬದಂದೋ ಅಥವ ಪುಣ್ಯ ಸ್ಮರಣೆಯ ದಿನವೋ ನೆನೆಪು ಮಾಡಿಕೊಳ್ಳುವುದು ಸಾಮಾನ್ಯ. ಆದರೆ, ಚಿಕ್ಕಮಗಳೂರಿನ ಅಪ್ಪು ಅಭಿಮಾನಿಯೋರ್ವ ತನ್ನ ಮದುವೆಯ ದಿನ ಮಾಂಗಲ್ಯಧಾರಣೆಗೂ ಮುನ್ನ ಅಪ್ಪುವಿನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ನಮಸ್ಕರಿಸಿ ಬಳಿಕ