ಚಿಕನ್ ಪ್ರಿಯರಿಗೆ ಪೂರ್ಣ ನಿರಾಸೆಯಾಗುತ್ತಿದ್ದರೆ, ಸದ್ಯ ಮಟನ್ ಪ್ರಿಯರು ಕೈಗೆ ಎಟುಕದ ಬೆಲೆಯಿಂದಾಗಿ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಹಕ್ಕಿ ಜ್ವರದ ಕಾರಣದಿಂದಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿಕನ್ ಮಾರಾಟಕ್ಕೆ ಬ್ರೇಕ್ ಬಿದ್ದಿದೆ. ಚಿಕನ್ ಸಿಗದವರು ಸಹಜವಾಗಿಯೇ ಮಟನ್ ನತ್ತ ಕಣ್ಣು ಹಾಕುತ್ತಿದ್ದಾರೆ. ಹೀಗಾಗಿ ಮಟನ್ ರೇಟ್ ಹೆಚ್ಚಾಗಿದೆ. 500-550 ರೂ. ಇದ್ದ ಮಟನ್ ರೇಟ್ ಸದ್ಯ 600-650 ರೂ.ಗಳಿಗೆ ಮಾರಾಟವಾಗುತ್ತಿದೆ. ಮಟನ್ ಬೆಲೆ ಪ್ರತಿ ಕೆಜಿಗೆ 750-800 ರೂ.ಗಳವರೆಗೆ ಏರಿಕೆ