ದಲಿತ ಮುಖಂಡ, ಬಿಜೆಪಿ ಲೀಡರ್ ಪುತ್ರನಿಂದ ಪೊಲೀಸರ ಮೇಲೆ ಹಲ್ಲೆ..?

ಬೆಂಗಳೂರು, ಭಾನುವಾರ, 17 ಸೆಪ್ಟಂಬರ್ 2017 (17:09 IST)

Widgets Magazine

ಬೆಂಗಳೂರು: ದಲಿತ ಸಂಘಟನೆ ಮುಖಂಡ ಮತ್ತು ಬಿಜೆಪಿ ಎಸ್ಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ.ರಾಮು ಪುತ್ರನ ವಿರುದ್ಧ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿ.ನಾ.ರಾಮು ಪುತ್ರ ಕಾರ್ಲ್ ಮಾರ್ಕ್ಸ್ ಸೇರಿದಂತೆ ನಾಲ್ವರನ್ನ ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಘಟನೆ ಏನು…?

ನಿನ್ನೆ ರಾತ್ರಿ ಬಾರ್ ಸಿಬ್ಬಂದಿ ಜತೆ ಕಾರ್ಲ್ ಮಾರ್ಕ್ಸ್ ಜಗಳ ಆಡುತ್ತಿರುವಾಗ ಪೊಲೀಸರು ಬಿಡಿಸಲು ಬಂದಿದ್ದಾರೆ. ಈ ವೇಳೆ ಪೊಲೀಸರ ಬಳಿಯಿದ್ದ ಲಾಠಿ ಕಸಿದುಕೊಂಡ ಕಾರ್ಲ್ ಮಾರ್ಕ್ಸ್, ಪೇದೆಗಳಾದ ಉಮೇಶ್ ಮತ್ತು ರುದ್ರೇಶ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಕಾರ್ಲ್ ಮಾರ್ಕ್ಸ್, ನಾನು ಯಾರು ಗೊತ್ತಾ..? ಎಂದು ಧಮಕಿ ಹಾಕಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ರಾಮು ಪುತ್ರ ಕಾರ್ಲ್ ಮಾರ್ಕ್ಸ್ ಸೇರಿ ನಾಲ್ವರನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇನ್ನು ಗಾಯಗೊಂಡಿರುವ ಪೇದೆ ಉಮೇಶ್ ಗೆ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದು ಬಂದಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಿಜೆಪಿ 1 ತಿಂಗಳಲ್ಲಿ ಮಾಡುವ ವೆಚ್ಚಕ್ಕಿಂತ ಹೆಚ್ಚಿನ ಹಣದ ಮದ್ಯವನ್ನು ನಾವು ದಿನಾ ಸೇವಿಸುತ್ತೇವೆ: ರಾಜಭರ್

ಮಹುವಾ(ಉತ್ತರಪ್ರದೇಶ): ಉತ್ತರಪ್ರದೇಶದಲ್ಲಿ ಬಿಜೆಪಿ ಒಂದು ತಿಂಗಳಿಗೆ ಎಷ್ಟು ಹಣ ವೆಚ್ಚ ಮಾಡುತ್ತದೆಯೋ ...

news

ಫೇಸ್‌ಬುಕ್ ಚಾಟ್ ಮಾಡ್ಬೇಡಾ ಅಂದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಬಾಲಕಿ

ಕೋಲ್ಕತಾ: ಮಿತಿಮೀರಿ ಸಮಯವನ್ನು ಫೇಸ್‌ಬುಕ್‌ನಲ್ಲಿ ಕಳೆಯುತ್ತಿರುವುದಕ್ಕೆ ಸಹೋದರ ಬೈದಿರುವುದನ್ನು ಸಹಿಸದ ...

news

ಕುಮಾರಸ್ವಾಮಿಗೂ ಉ. ಕರ್ನಾಟಕದಲ್ಲಿ ಸ್ಪರ್ಧಿಸುವಂತೆ ಒತ್ತಡವಿದೆ: ದೇವೇಗೌಡ

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಗೂ ಉತ್ತರ ಕರ್ನಾಟಕದಿಂದ ಸ್ಪರ್ಧಿಸುವಂತೆ ...

news

ಸಚಿವರ ರಾಜೀನಾಮೆ ಕೇಳುವುದೇ ಬಿಜೆಪಿ ಕಾಯಕ: ಸಚಿವ ಅಂಜನೇಯ

ಬೆಂಗಳೂರು: ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಅನಗತ್ಯವಾಗಿ ಸಚಿವ ...

Widgets Magazine