ಹುಚ್ಚು ಮಂಗಗಳ ದಾಳಿ: ಜನ ತತ್ತರ

ಬಾಗಲಕೋಟೆ, ಶುಕ್ರವಾರ, 10 ಆಗಸ್ಟ್ 2018 (20:02 IST)

ಆ ಊರಲ್ಲಿ ಮಂಗಗಳ ಹಾವಳಿ ವಿಪರೀತವಾಗಿದೆ. ಹುಚ್ಚು ಮಂಗಗಳಂತೂ ಸಿಕ್ಕ ಸಿಕ್ಕವರಿಗೆ ಕಚ್ಚುತ್ತಿವೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಏರುತ್ತಿದೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿಯಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ. ಹುಚ್ಚು ಮಂಗಗಳು ಕಚ್ಚಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಆಗಾಗ್ಗೆ ಜನರ ಮೇಲೆ ಮಂಗಗಳು ದಾಳಿ ನಡೆಸುತ್ತಿವೆ. ಹೀಗಾಗಿ ಪಟ್ಟಣದಲ್ಲಿ ಭಯದ ವಾತಾವರಣ ನಿರ್ಮಾಣವಾದಂತೆ ಆಗುತ್ತಿದೆ. ಶಿವಾನಂದ, ರಮೇಶ್ ಎಂಬುವರು ಮಂಗಗಳ ದಾಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಮಂಗಗಳ ಹಾವಳಿಯಿಂದ ಮುಕ್ತಿಕೊಡಿಸಿ ಅಂತ ಜನರು ಅಧಿಕಾರಿಗಳನ್ನು ಕೋರಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಡ್ಯಾಂಗಳು ಭರ್ತಿ: ಹೆಚ್ಚಿದ ಪ್ರವಾಹ ಭೀತಿ

ರಾಜ್ಯದಲ್ಲಿ ಕಬಿನಿ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದು, ಪ್ರವಾಹ ಭೀತಿ ತಲೆದೋರಿದೆ.

news

ಕೇರಳಕ್ಕೆ 10 ಕೋಟಿ ನೆರವು: ಹೆಚ್ಡಿಕೆ

ರಾಜ್ಯ ಸರಕಾರವು ಪ್ರವಾಹ ಪೀಡಿತವಾಗಿರುವ ಕೇರಳಕ್ಕೆ 10 ಕೋಟಿ ನೆರವು ನೀಡಲು ಮುಂದಾಗಿದೆ.

news

ಅಕ್ಟೋಬರ್ ನಲ್ಲಿ ಪುಸ್ತಕೋತ್ಸವ ಸಂಭ್ರಮ

ಜನರಲ್ಲಿ ಓದುವ ಹವ್ಯಾಸ ಹೆಚ್ಚಿಸುವ ನಿಟ್ಟಿನಲ್ಲಿ ಈ ಬಾರಿ ರಾಜ್ಯದ ರಾಜಧಾನಿಯಲ್ಲಿ ವಿಭಿನ್ನವಾಗಿ ...

news

ಪುರುಷರು ಕೂಡ ಮಹಿಳೆಯರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಾರಂತೆ !

ಬೆಂಗಳೂರು: ಯುಟ್ಯೂಬ್ ಸ್ಟಾರ್ ಹಾಗೂ ಒಂದು ನಟಿ ಸೇರಿ ವಿಡಿಯೋವೊಂದನ್ನು ಮಾಡಿದ್ದು, ಆ ಮೂಲಕ ಪುರುಷರೂ ...

Widgets Magazine
Widgets Magazine