ರಮಾನಾಥ್ ರೈ ಗೆ ಗೃಹಖಾತೆ?

Bangalore, ಸೋಮವಾರ, 24 ಜುಲೈ 2017 (09:48 IST)

ಬೆಂಗಳೂರು: ಜಿ. ಪರಮೇಶ್ವರ್ ಅವರಿಂದ ತೆರವಾಗಿರುವ ಗೃಹ ಖಾತೆಗೆ ಇನ್ನೂ ಹೊಸ ಸಚಿವರ ನೇಮಕ ನಡೆದಿಲ್ಲ. ಆದರೆ ಮೂಲಗಳ ಪ್ರಕಾರ ಗೃಹ ಖಾತೆ ದ.ಕ. ಜಿಲ್ಲೆಯ ಶಾಸಕ ಹಾಗೂ ಪ್ರಸ್ತುತ  ಅರಣ್ಯ ಸಚಿವ ಬಿ.ರಮಾನಾಥ್ ರೈ ಕೈಸೇರಲಿದೆ.


 
ಭಾನುವಾರ ತುರ್ತಾಗಿ ಸಚಿವರು ಸಿಎಂ ಸಿದ್ದರಾಮಯ್ಯ ಅವರಿಂದ ಬುಲಾವ್ ಬಂದ ಹಿನ್ನಲೆಯಲ್ಲಿ ಬೆಂಗಳೂರಿಗೆ ಆಗಮಿಸಿ ಮಾತುಕತೆ ನಡೆಸಿದ್ದು ಈ ಎಲ್ಲಾ ಅನುಮಾನಗಳಿಗೆ ರೆಕ್ಕೆ ಪುಕ್ಕ ಹುಟ್ಟುವಂತೆ ಮಾಡಿದೆ. ಕಳೆದ ಎರಡು ತಿಂಗಳಿನಿಂದ ಗೃಹಖಾತೆ ಖಾಲಿಯಾಗಿಯೇ ಇದೆ.
 
ಸದ್ಯಕ್ಕೆ ಗೃಹಖಾತೆಯನ್ನೂ ಸಿಎಂ ಸಿದ್ದರಾಮಯ್ಯ ನಿಭಾಯಿಸುತ್ತಿದ್ದಾರೆ. ಆದರೆ ಚುನಾವಣೆ ಬರುತ್ತಿರುವ ಹಿನ್ನಲೆಯಲ್ಲಿ ಕಿರು ಅವಧಿಗೆ ಈ ಸಚಿವ ಸ್ಥಾನ ನಿಭಾಯಿಸಲು ಪ್ರಮುಖ ಸಚಿವರು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಪಕ್ಷ ಅಧಿಕೃತವಾಗಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
 
ಇದನ್ನೂ ಓದಿ..  ಉತ್ತರ ಪ್ರದೇಶದಲ್ಲಿ ಮಹಿಳೆಯರಿಗಾಗಿಯೇ ವಿಶೇಷ ಬಸ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಉತ್ತರ ಪ್ರದೇಶದಲ್ಲಿ ಮಹಿಳೆಯರಿಗಾಗಿಯೇ ವಿಶೇಷ ಬಸ್

ಲಕ್ನೋ: ಮಹಿಳೆಯರ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೇ ಮಾದರಿಯಲ್ಲಿ ಉತ್ತರ ...

news

ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್. ರಾವ್ ವಿಧಿವಶ

ಬಾಹ್ಯಾಕಾಶ ವಿಜ್ಞಾನಿ ಮತ್ತು ಇಸ್ರೋ ಮಾಜಿ ಅಧ್ಯಕ್ಷ ಯು.ಆರ್. ರಾವ್ ವಿಧಿವಶರಾಗಿದ್ದಾರೆ. ಇಂದಿರಾನಗರದ ...

news

ಹೆಂಡತಿಗಾಗಿ ಶೌಚಾಲಯ ಕಟ್ಟಲು ಸಾಧ್ಯವಿಲ್ಲ ಎಂದರೆ ಹೆಂಡತಿಯನ್ನೇ ಮಾರಿ ಬಿಡಿ ಎಂದ ಜಡ್ಜ್ ಸಾಹೇಬ್ರು

ಔರಂಗಾಬಾದ್:ಹೆಂಡತಿಗಾಗಿ ಶೌಚಾಲಯವನ್ನು ನಿರ್ಮಿಸಲು ಸಾಧ್ಯವಾಗದಿದ್ದರೆ ಹೆಂಡತಿಯನ್ನೇ ಮಾರಿ ಬಿಡಿ ಎಂದು ...

news

ಜೆಡಿಎಸ್`ನಲ್ಲಿ ಸೂಟ್ ಕೇಸ್ ಸಂಸ್ಕೃತಿ ಇರುವುದು ನಿಜ: ಜಮೀರ್ ಅಹಮ್ಮದ್

ಜೆಡಿಎಸ್`ನಲ್ಲಿ ಸೂಟ್ ಕೇಸ್ ಸಂಸ್ಕೃತಿ ಇರುವುದು ನಿಜ:ಎಂದು ತುಮಕೂರಿನಲ್ಲಿ ಮಾತನಾಡಿದ ಜಮೀರ್ ಅಹಮ್ಮದ್ ...

Widgets Magazine