ಮತ್ತೆ ಬಂದ ಸೈಕೋ ಕಾಮಿ; ಮದ್ಯರಾತ್ರಿಯಲ್ಲಿ ಬೆಚ್ಚಿಬಿದ್ದ ಯುವತಿಯರು

ಮೈಸೂರು, ಮಂಗಳವಾರ, 24 ಜುಲೈ 2018 (16:06 IST)

ಮದ್ಯರಾತ್ರಿ ಯುವತಿಯವರ ಹಾಸ್ಟೆಲ್ ಗೆ ನುಗ್ಗಿದ ಸೈಕೋ ಕಾಮಿಯೊಬ್ಬ ವಿದ್ಯಾರ್ಥಿನಿಯೊಬ್ಬಳ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಕಳೆದ ನಾಲ್ಕು ದಿನಗಳ ಹಿಂದೆ ಇದೇ ರೀತಿ ವ್ಯಕ್ತಿಯೊಬ್ಬ ಮದ್ಯರಾತ್ರಿ ಯುವತಿಯರ ಹಾಸ್ಟೆಲ್ ಗೆ ನುಗ್ಗಿದ್ದ. ಪದೇ ಪದೇ ಘಟನೆ ಮರುಕಳಿಸುತ್ತಿರುವುದರಿಂದ ಬೆಚ್ಚಿಬಿದ್ದ ವಿದ್ಯಾರ್ಥಿನಿಯರು ರಾತ್ರಿವೇಳೆಯೇ ಪ್ರತಿಭಟನೆ ಹಾದಿ ತುಳಿದರು.

ವಿದ್ಯಾರ್ಥಿನಿಯೊಬ್ಬಳ ಮೇಲೆ ಹಲ್ಲೆ ಮಾಡಿ ಮಿನಿ ಉಮೇಶ್ ರೆಡ್ಡಿ ಎಸ್ಕೇಪ್ ಆದ ಘಟನೆ ಮೈಸೂರಿನ ಕೆ ಆರ್ ನರ್ಸಿಂಗ್ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ನಡೆದಿದೆ. ಆತಂಕಕ್ಕೀಡಾದ ಕೆ ಆರ್ ನರ್ಸಿಂಗ್ ಹಾಸ್ಟೆಲ್ ವಿದ್ಯಾರ್ಥಿನಿಯರು ಮದ್ಯರಾತ್ರಿ ರಂಪಾಟ ನಡೆಸಿದ್ದಾರೆ. ಹಾಸ್ಟೆಲ್ನಿಂದ ಹೊರ ಬಂದು ರಕ್ಷಣೆಗಾಗಿ ಸಿಡಿದೆದ್ದ ವಿದ್ಯಾರ್ಥಿಗಳು ರಸ್ತೆಯಲ್ಲಿ ಘೋಷಣೆ ಕೂಗಿದರು. ಪೊಲೀಸ್ರ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ಸ್ಪೋಟಗೊಂಡಿತು.

ನಾಲ್ಕು
ದಿನಗಳಿಂದ ನಿತ್ಯ ಇದೇ ತೀತಿ ಘಟನೆ ನಡಿತಿದ್ರು ಕ್ಯಾರೆ ಅಂತಿಲ್ಲಯಾರು ಅಂತ ವಿದ್ಯಾರ್ಥಿನಿಯರು ಕೂಗಾಟ ನಡೆಸಿದ್ರು. ಬೆಳಗ್ಗೆ ಶಾಸಕ ಎಲ್. ನಾಗೇಂದ್ರ ಭೇಟಿ ನೀಡಿ, ಪರಿಶೀಲಿಸಿ. ಭರವಸೆ ನೀಡಿದ್ದರು. ಆದರೆ ಅದರಿಂದ ಏನು ಪ್ರಯೋಜನವಿಲ್ಲ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.  ಸೂಕ್ತ ರಕ್ಷಣೆಗೆ ಆಗ್ರಹಿಸಿ ಪೊಲೀಸ್ ಇಲಾಖೆ ವಿರುದ್ಧ ಹಾಗೂ ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
 
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರತಿಷ್ಠಿತ ಕಂಪನಿಯ ಹೆಸರು ಹೇಳಿ ಲಕ್ಷಾಂತರ ರೂ. ವಂಚಿಸಿದ ಭೂಪ

ಪ್ರತಿಷ್ಠಿತ ಪತಂಜಲಿ ಕಂಪನಿಯ ಹೆಸರು ಹೇಳಿಕೊಂಡು ಟ್ರೇಡರ್ಸ್ ಮಾಲೀಕನೊಬ್ಬನಿಗೆ ಮೋಸ ಮಾಡಲಾಗಿದೆ. ಅಲ್ಲದೇ ...

news

ಗೌರಿ ಲಂಕೇಶ್ ಹತ್ಯೆಯಲ್ಲಿ ನನ್ನ ಮಗನ ಪಾತ್ರವಿಲ್ಲ ಎಂದ ಜಯಶ್ರೀ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ನನ್ನ ಮಗನ ಪಾತ್ರವಿಲ್ಲ. ನನ್ನ ಮಗ ಅಮಾಯಕ ಎಂದು ಪತ್ರಕರ್ತೆ ಗೌರಿ‌ ...

news

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ: ಅನೇಕ ಸಮರ್ಥರಿದ್ದಾರೆ ಎಂದ ಸಚಿವ

ಬಹಳಷ್ಟು ಸಮರ್ಥರು ಪಕ್ಷದಲ್ಲಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಮುಖ್ಯಮಂತ್ರಿ ಹೆಚ್.ಡಿ. ...

news

ಲಂಚ ಪಡೆಯುತ್ತಿದ್ದ ಅಧಿಕಾರಿ ಎಸಿಬಿ ಬಲೆಗೆ

ಲಂಚ ಪಡೆಯುವಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಜಮೀನು ಪೋಡಿ ಮಾಡಲು ರೈತನಿಂದ ಹಣ ಪಡೆಯುತ್ತಿದ್ದ ಭೂ ...

Widgets Magazine