ಪ್ರಧಾನಿಗೆ ಗಂಡಾಂತರವಂತೆ… ಹೆಚ್ಡಿಕೆ ಸಿಎಂ ಆಗ್ತಾರಂತೆ…

ಹಾಸನ, ಶುಕ್ರವಾರ, 13 ಅಕ್ಟೋಬರ್ 2017 (09:40 IST)

ಹಾಸನ: ಪ್ರಧಾನಿ ನರೇಂದ್ರ ಮೋದಿಯವರಿಗೆ ಗಂಡಾಂತರ ಕಾದಿದೆಯಂತೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತೆ ಈ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದು ಬ್ರಹ್ಮಾಂಡ ಗುರೂಜಿ ಖ್ಯಾತಿಯ ನರೇಂದ್ರ ಬಾಬು ಶರ್ಮಾ ಭವಿಷ್ಯ ನುಡಿದಿದ್ದಾರೆ.


ಹಾಸನಾಂಬೆ ದೇವಾಲಯದಲ್ಲಿ ಮಾತನಾಡಿದ ನರೇಂದ್ರ ಬಾಬು ಶರ್ಮಾ, ಪ್ರಧಾನಿ ಮೋದಿಯವರದ್ದು ವೃಶ್ಚಿಕ ರಾಶಿ. ಶನಿ ದೋಷವಿದೆ. ಶನಿ ಯಾರನ್ನೂ ಬಿಡಲ್ಲ. ಗುರು ತುಲಾ ರಾಶಿಗೆ ಪ್ರವೇಶಿಸಿದ್ದಾನೆ. ಹೀಗಾಗಿ ಉನ್ನತ ಸ್ಥಾನದಲ್ಲಿರುವ ಸೆಲೆಬ್ರಿಟಿ ಅಥವಾ ರಾಜಕಾರಣಿಗೆ ಗಂಡಾಂತರ ಕಾದಿದೆ ಎಂದು ಹೇಳಿದ್ದಾರೆ. ಇದಕ್ಕೆ ದೇವರ ಮೊರೆ ಹೋಗಿ ಪರಿಹಾರ ಕಂಡುಕೊಳ್ಳದಿದ್ದರೆ ಸಾವು ಸಂಭವಿಸಬಹುದು ಎಂದಿದ್ದಾರೆ.

ತಾಯಿ ಮತ್ತು ಪತ್ನಿಯಿಂದ ದೂರವಿರುವುದರಿಂದ ಶುಕ್ರ ದೋಷವೂ ಇದೆಯಂತೆ. ಗುಜರಾತ್‌ಮಹಿಳೆಯೊಬ್ಬಳು ಮೋಹಿಸಲಿದ್ದು, ಇದು ಮೋದಿಯವರಿಗೆ ಮುಳುವಾಗಲಿದೆ ಎಂದಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಹೆಚ್ ಡಿಕೆ ಕಿಂಗ್ ಮೇಕರ್ ಆಗಲಿದ್ದು, ಮತ್ತೊಮ್ಮೆ ಸಿಎಂ ಆಗೋ ಯೋಗವಿದೆ. ಹಾಲಿ ಸಿಎಂ ಸಿದ್ದರಾಮಯ್ಯ ಈವರೆಗೂ ಮಾಡಿರುವ ತಪ್ಪನ್ನು ಸರಿಪಡಿಸಿಕೊಳ್ಳಬೇಕು. ಇನ್ನು ಯಡಿಯೂರಪ್ಪ ಅವರದ್ದು ಹಿತ್ತಾಳೆ ಕಿವಿ. ಜೊತೆಯಲ್ಲಿ ವಿಷವಿಟ್ಟುಕೊಂಡು ಓಡಾಡುತ್ತಿದ್ದಾರೆ. ಪಕ್ಷದಲ್ಲಿ ಬಿಎಸ್ ವೈ ಸ್ಥಾನಪಲ್ಲಟ ಖಚಿತ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಹುಲ್‌ ಗಾಂಧಿಯಿಂದ ಬೇಗ್‌ವರೆಗೆ ಯಾರಿಗೂ ಮಾತನಾಡಲು ಬರೋಲ್ಲ: ಮುರಳೀಧರ್ ರಾವ್

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್‌ ಗಾಂಧಿಯಿಂದ ಸಚಿವ ರೋಷನ್‌ ಬೇಗ್‌ವರೆಗೆ ಯಾರಿಗೂ ಮಾತನಾಡಲು ...

news

ನಾಲಿಗೆ ವ್ಯಕ್ತಿಯ ಸಂಸ್ಕ್ರತಿ ಹೇಳುತ್ತದೆ, ಬೇಗ್ ದೇಶದ ಕ್ಷಮೆಯಾಚಿಸಲಿ: ಬಿಎಸ್‌ವೈ

ಬೆಂಗಳೂರು: ನಾಲಿಗೆ ವ್ಯಕ್ತಿಯ ಸಂಸ್ಕ್ರತಿ ಹೇಳುತ್ತದೆ, ಪ್ರಧಾನಿ ಮೋದಿಯವರನ್ನು ಅವಹೇಳವಾಗಿ ಟೀಕಿಸಿದ ಸಚಿವ ...

news

ಕಾಂಗ್ರೆಸ್ ಪಕ್ಷದಿಂದ ಶಾಸಕ ಎಸ್.ಪಾಟೀಲ್ ನಡಹಳ್ಳಿ ಉಚ್ಚಾಟನೆ

ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಶಾಸಕ ಎಸ್.ಪಾಟೀಲ್ ನಡಹಳ್ಳಿ ಉಚ್ಚಾಟಿಸಿ ಕೆಪಿಸಿಸಿ ಅಧ್ಯಕ್ಷ ...

news

ದಾಖಲೆ ಇದ್ರೆ ಕೋರ್ಟ್ ಗೆ ಹೋಗಿ ಅಕ್ರಮ ಸಾಬೀತು ಪಡಿಸಿ: ಅಮಿತ್ ಷಾ ಸವಾಲು

ನವದೆಹಲಿ: ಅಕ್ರಮವೆಸಗಿರುವ ಬಗ್ಗೆ ನಿಮ್ಮ ಬಳಿ ದಾಖಲೆಯಿದ್ದರೆ ಕೋರ್ಟ್ ಗೆ ಹೋಗಿ ಆರೋಪ ಸಾಬೀತುಪಡಿಸಿ ಎಂದು ...

Widgets Magazine
Widgets Magazine