ಎಚ್‌ಡಿಕೆ ವಿರುದ್ಧ ಬಂಡಾಯ ಶಾಸಕ ಬಾಲಕೃಷ್ಣ ಹೊಸ ಬಾಂಬ್

ಮಾಗಡಿ, ಮಂಗಳವಾರ, 1 ಆಗಸ್ಟ್ 2017 (19:59 IST)

ಮಾಜಿ ಸಿಎಂ ಎಚ್‌ಡಿಕೆ ಇನ್ನೊಂದು ಮದ್ವೆ ಬಗ್ಗೆ ಯಾರೋ ಹೇಳಿದ್ದಾರೆ. ಯಾರು ಏನು ಹೇಳಿದ್ದಾರೆ ಎನ್ನುವುದು ನನಗೆ ಗೊತ್ತಿದೆ ಎಂದು ಮಾಗಡಿ ಕ್ಷೇತ್ರದ ಶಾಸಕ ಹೊಸ ಬಾಂಬ್ ಸಿಡಿಸಿದ್ದಾರೆ.
 
ಎಚ್‌‍ಡಿಕೆ ಇನ್ನೊಂದು ಮದುವೆಯಾಗಿ ಹೆಣ್ಣು ಮಗು ಹೆತ್ತಲ್ಲಿ ಅವರಿಗೆ ಪ್ರಧಾನಿಯಾಗುವ ಯೋಗವಿದೆ ಎಂದು ಜಾತಕದಲ್ಲಿ ಉಲ್ಲೇಖವಿರುವುದಾಗಿ ತಿಳಿಸಿದ್ದಾರೆಂದು ಹೇಳಿದ್ದಾರೆ.
 
ರಾಮನಗರ ಜಿಲ್ಲೆಯ ಮಾಗಡಿ ಕ್ಷೇತ್ರದ ತಿರುಮಲೆ ಗ್ರಾಮದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿಗೆ ಜಾತಕದಲ್ಲಿ ಸಿಎಂ ಆಗುವ ಯೋಗವಿತ್ತಂತೆ. ಆದ್ದರಿಂದ ಸಿಎಂ ಆಗಿ ಹೋಗಿದ್ದಾರೆ. ಕುಮಾರಸ್ವಾಮಿ ಕೋಟಾ ಮುಗಿದು ಹೋಗಿದೆ. ಇದೀಗ ಬೇರೆಯವರು ಸಿಎಂ ಆಗಲಿದ್ದಾರೆ ಎಂದು ಲೇವಡಿ ಮಾಡಿದರು.
 
ದೇವೇಗೌಡರು ನನ್ನ ಬಳಿ ಮತ್ತೊಮ್ಮೆ ಪ್ರಧಾನಿಯಾಗುವ ಯೋಗವಿದೆ ಎಂದು ಹೇಳಿದ್ದರು. ಡಿ.ಕೆ.ಶಿವಕುಮಾರ್‌ಗೂ ಕೂಡಾ ಸಿಎಂ ಆಗುವ ಯೋಗವಿದೆ ಎಂದು ತಿಳಿಸಿದ್ದರು ಎಂದು ವ್ಯಂಗ್ಯವಾಡಿದರು.
 
ಜಾತಕ ನಂಬಿ ಪಿಎಂ, ಸಿಎಂ ಆಗುತ್ತೇನೆ ಎಂದರೆ ನಂಬಲು ಸಾಧ್ಯವೇ? ಕುಮಾರಸ್ವಾಮಿ ಪ್ರಧಾನಿ ಆಗ್ತಾರೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ಹೇಳಿದ್ದಾರೆ ಎಂದು ಹೇಳುತ್ತಾ ಜೆಡಿಎಸ್ ಕಾರ್ಯಕರ್ತರನ್ನು ಭಾವನಾತ್ಮಕವಾಗಿ ಸೆಳೆಯಲು ಗೌಡರ ಕುಟುಂಬ ತಂತ್ರ ರೂಪಿಸಿದೆ ಎಂದು ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಎಚ್‌ಡಿಕೆ ಬಾಲಕೃಷ್ಣ ಮಾಗಡಿ ಕ್ಷೇತ್ರ ದೇವೇಗೌಡ ಜೆಡಿಎಸ್ Balkrishna Magadi Devegowdam Jds H.d.kumarswamy

ಸುದ್ದಿಗಳು

news

ಅಪ್ರಾಪ್ತ ಬಾಲಕಿಯ ಮೇಲೆ ರೇಪ್: ಆರೋಪಿಗೆ 7 ವರ್ಷ ಜೈಲು

ಕೋಲಾರ: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಆರೋಪಿಗೆ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ...

news

ರಾಜ್ಯವನ್ನು ಲೂಟಿ ಮಾಡಿರುವುದೇ ಕಾಂಗ್ರೆಸ್ ಪಕ್ಷದ ಸಾಧನೆ: ಕುಮಾರಸ್ವಾಮಿ

ಸಿಂಧನೂರು: ನಮ್ಮದು ನುಡಿದಂತೆ ನಡೆದ ಸರಕಾರ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ನುಡಿದಂತೆ ಏನು ...

news

ದಂಡುಪಾಳ್ಯ ಬೆತ್ತಲೆ ಬೆನ್ನಿನ ಪೂಜಾಗಾಂಧಿ ಫೋಟೋಗೆ ಮಾತೆ ಮಹಾದೇವಿ ಫೋಟೋ ಅಂಟಿಸಿ ಅವಹೇಳನ

ಹುಬ್ಬಳ್ಳಿ: ಲಿಂಗಾಯುತ ಪ್ರತ್ಯೇಕ ಧರ್ಮವನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ಪ್ರತಿಭಟನಾಕಾರರು ನಟಿ ...

news

ಪೋಷಕರೇ ಎಚ್ಚರ.. ನಿಮ್ಮ ಮಕ್ಕಳೂ ಈ ಸೂಸೈಡ್ ಗೇಮ್ ಆಡುತ್ತಿರಬಹುದು..!

14 ವರ್ಷದ ಬಾಲಕ 7ನೇ ಅಂತಸ್ತಿನ ಕಟ್ಟಡದಿಂದ ಜಿಗಿದು ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ. ...

Widgets Magazine