ಅಯ್ಯೊ..ಏನ್ ಕಾಲ ಬಂತು ಒಂದು ಕಪ್ ಟೀಗೆ ಒಂದು ಸಿಗರೇಟ್ ಪ್ರೀ...

ಬೆಂಗಳೂರು, ಶನಿವಾರ, 22 ಜುಲೈ 2017 (12:10 IST)

ಬೆಂಗಳೂರು:ಎಂಥಾ ಅಪಾಯಕಾರಿ ಬೆಳವಣಿಗೆ.. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿಗರೇಟ್ ಕಂಪನಿಗಳು ತಮ್ಮ ಮಾರುಕಟ್ಟೆ ವಿಸ್ತರಣೆಗಾಗಿ ಅಪಾಯಕಾರಿ ಪ್ರಚಾರಗಳಲ್ಲಿ ತೊಡಗಿಕೊಂಡಿದ್ದಾರೆ. ಜನರನ್ನು ಅಕರ್ಷಿಸುವ ಸಲುವಾಗಿ ಟೀ ಸ್ಟಾಲ್ ಗಳಲ್ಲಿ ಟೀ ತೆಗೆದುಕೊಂಡರೆ ಸಿಗರೇಟ್ ನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
 
ಈ ಬೆಳವಣಿಗೆಯಿಂದಾಗಿ ಯುವಕರು, ಬಾಲಕರು ಮಾತ್ರವಲ್ಲ, ಸಿಗರೇಟ್ ಅಭ್ಯಾಸವಿಲ್ಲದವರೂ ಸಿಗರೇಟ್ ಚಟಕ್ಕೆ ತುತ್ತಾಗಲು ಕಾರಣವಾಗಿದೆ. ಬೆಂಗಲೂರು ದಕ್ಷಿಣ ಡಿಸಿಪಿ ವಿಭಾಗ ಮತ್ತು ಪಶ್ಚಿಮ ವಿಭಾಗದ ಶಾಲಾ ಕಾಲೇಜುಗಳ ಆವರಣದಲ್ಲಿ ಈ ರೀತಿ ಅನಾರೋಗ್ಯಕರ ಸಿಗರೇಟ್ ಜಾಹೀರಾತು ಮಾರಾಟ ಜಾಲ ಕಂಡು ಬಂದಿದ್ದು, ಪೊಲೀಸರು ಪ್ರಕರಣಗಳನ್ನು ಕೂಡ ದಾಖಲಿಸಿಕೊಂಡು ಕ್ರಮಕೈಗೊಂಡಿದ್ದಾರೆ.
 
ಫಿಲಿಪ್ ಮೋರಿಸ್ ಕಂಪನಿಯ ಮೆಲ್ಬೋರೋ ಬ್ರ್ಯಾಂಡ್ ನ ಸಿಗರೇಟ್ ಮಾರಾಟಗಾರರು, ಏಜೆನ್ಸಿಗಳು ಈ ರೀತಿ ಅಪಾಯಕಾರಿ ಪೈಪೋಟಿಗಳಿಗೆ ಇಳಿದಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಇನ್ನು ಈ ಕಂಪನಿ ತಮ್ಮ ಬ್ರ್ಯಾಂಡ್ ಪ್ರಮೋಷನ್ ಗೆ ಆಕರ್ಷಕ ಉಡುಗರೆಯನ್ನೂ ನೀಡಿ, ಬೈಕ್-ಕಾರ್ ಗಳನ್ನು ಕೊಡುಗೆ ನೀಡಿ ಯುವಕ-ಯುವತಿಯರನ್ನು ಆಕರ್ಷಿಸಲು ಶಾಲಾ-ಕಾಲೇಜು ಆವರಣಗಳಲ್ಲಿ ತಮ್ಮ ಬ್ರ್ಯಾಂಡ್ ನ್ ಸಿಗರೇಟ್ ಹಿಡಿದು ಓಡಾಡುವಂತೆ, ಸಿಗರೆಟ್ ಕೂಡ ವಿತರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನನ್ನ ರುಂಡ ಕತ್ತರಿಸಿಕೊಳ್ಳುತ್ತಾರಂತೆ ಜಮೀರ್ ಅಹಮ್ಮದ್!

ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕಾರಣಿಗಳ ‘ಕತ್ತರಿಸುವ’ ಹೇಳಿಕೆಗಳು ಮತ್ತೆ ಶುರುವಾಗಿದೆ. ...

news

ಮಧು ಬಂಗಾರಪ್ಪಗೆ ಯಡಿಯೂರಪ್ಪ ತಿರುಗೇಟು

ಶಿವಮೊಗ್ಗ: ತಮ್ಮ ಬಗ್ಗೆ ಟೀಕಾ ಪ್ರಹಾರ ನಡೆಸಿದ್ದ ಜೆಡಿಎಸ್ ನಾಯಕ ಮಧು ಬಂಗಾರಪ್ಪಗೆ ಬಿಜೆಪಿ ರಾಜ್ಯಾಧ್ಯಕ್ಷ ...

news

ರಾಹುಲ್ ಗೆ ಕೃತಜ್ನತೆ ಮೂಲಕ ತಿರುಗೇಟು ನೀಡಿದ ಸ್ಮೃತಿ ಇರಾನಿ

ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರದಲ್ಲಿದ್ದ ನಾಜಿಗಳಂತೆ ವಾಸ್ತವಗಳನ್ನು ತಿರುಚುವ ಪ್ರಯತ್ನ ...

news

ಮತ್ತೆ ನಾಡಧ್ವಜ ವಿವಾದ ಕೆಣಕಿದ ಸಚಿವ ಯುಟಿ ಖಾದರ್

ಬೆಂಗಳೂರು: ರಾಜ್ಯಕ್ಕೆ ಯಾಕೆ ಪ್ರತ್ಯೇಕ ನಾಡಧ್ವಜ ಇರಬಾರದು? ನಾಡಧ್ವಜ ತಂದರೆ ತಪ್ಪೇನು? ಹೀಗಂತ ಸಚಿವ ಯುಟಿ ...

Widgets Magazine