ಬಿಬಿಎಂಪಿ ರಸ್ತೆಗಳನ್ನ ಅಭಿವೃದ್ಧಿ ಪಡಿಸುವಲ್ಲಿ ಮರಗಳನ್ನ ಕಡಿದು ಕಾಮಗಾರಿಯನ್ನ ಮುಂದುವರೆಸಿತ್ತು. ಇದ್ರಿಂದ ಸಾರ್ವಜನಿಕರು ಮತ್ತು ಪರಿಸರವಾದಿಗಳು ಬಿಬಿಎಂಪಿ ವಿರುದ್ಧ ಆಕ್ರೋಶವನ್ನ ವ್ಯಕ್ತಪಡಿಸಿದ್ರು, ಆದ್ರೆ ಇದೀಗ ಮರಗಳನ್ನು ಉಳಿಸಿಕೊಳ್ಳಲು ಬಿಬಿಎಂಪಿ ಹೊಸ ಪ್ಲಾನ್ ಸಿದ್ದ ಮಾಡಿದೆ.