ಮಿಲಿಟರಿ ಸೇನೆಗೆ ಭೂಮಿ ನೀಡಲು ಮುಂದಾದ ಬಿಬಿಎಂಪಿ

ಬೆಂಗಳೂರು, ಶುಕ್ರವಾರ, 10 ಆಗಸ್ಟ್ 2018 (14:59 IST)

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ  ತಮ್ಮನಾಯಕನಹಳ್ಳಿಯಲ್ಲಿರುವ ಭೂಮಿಯನ್ನು ಮಿಲಿಟರಿ ಸೇನೆಗೆ ನೀಡಲು ಬಿಬಿಎಂಪಿ ಮುಂದಾಗಿದೆ. ಬೆಳ್ಳಂಬೆಳ್ಳಗ್ಗೆ  ಬಿಬಿಎಂಪಿ ಮೇಯರ್ ಸಂಪತ್ ರಾಜ್, ಆಯುಕ್ತರ ಮಂಜುನಾಥ್ ಪ್ರಸಾದ್, ಹಾಗೂ ಜಿಲ್ಲಾದಿಕಾರಿ ವಿಜಯ ಶಂಕರ್ ಮತ್ತು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮಹೇಂದ್ರ ಜೈನ್ ಸ್ಥಳಕ್ಕೆ ಬೇಟಿ ನೀಡಿ ಈ ವಿಚಾರವಾಗಿ ಪರೀಶಿಲನೆ ನಡೆಸಿದ್ದಾರೆ.
 
ತಮ್ಮನಾಯಕನಹಳ್ಳಿ ಸರ್ವೆ ನಂ 23 ರಲ್ಲಿನ 206 ಎಕರೆ ಜಾಗವನ್ನ ಮಾಡಲು  ಅಧಿಕಾರಿಗಳು ಆಗಮಿಸಿದ್ದು, ಇದಕ್ಕೆ ಸ್ಥಳೀಯ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ರೈತರು ಇದೇ ಗೊಮಾಳ ಜಾಗದಲ್ಲಿ ಸುಮಾರು ಮೂವತ್ತು ವರ್ಷಗಳಿಂದ  ಕೃಷಿ ಚಟುವಟಿಕೆ ನಡೆಸುತ್ತಿದ್ದರು. ನಂತರ ಈ  ಜಾಗವನ್ನು ಬಿಬಿಎಂಪಿ ಕಸ ವಿಲೇವಾರಿಗೆಂದು ಗುರ್ತಿಸಿತ್ತು.‌ ಆದರೆ ಸ್ಥಳೀಯರು ಕೃಷಿ ಚಟುವಟಿಕೆ ನಡೆಸುತ್ತಿದ್ದು, ಜೊತೆಗೆ  ಈ ಜಾಗ ಬನ್ನೇರುಘಟ್ಟ ಅಭಯಾರಣ್ಯಕ್ಕೆ ಹೊಂದಿಕೊಂಡಿರುವುದರಿಂದ ಕಸ ಹಾಕುವ ಯೋಜನೆ ಕೈ ಬಿಟ್ಟು ಇದೀಗ ಸೇನೆಗೆ ಒಪ್ಪಿಸಲು ಬಿಬಿಎಂಪಿ ಮುಂದಾಗಿದೆ. ಆದ್ದರಿಂದಾಗಿ ಈ ಜಾಗವನ್ನು ಮಿಲಿಟರಿಗೆ ನೀಡಲು ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
 
 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಕ್ಷೇತ್ರ ಭಯೋತ್ಪಾದಕರ ಅಡಗುತಾಣ: ಆರೋಪ

ಸಿಎಂ ಕ್ಷೇತ್ರ ಭಯೋತ್ಪಾದಕರ ಅಡಗುತಾಣವಾಗ್ತಿದೆ. ಹೀಗಂತ ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ...

news

ಪತಿಯ ಗುಂಡೇಟಿಗೆ ಬಲಿಯಾದ ಪಾಕಿಸ್ತಾನದ ಖ್ಯಾತ ಗಾಯಕಿ ರೇಷ್ಮಾ

ಇಸ್ಲಾಮಾಬಾದ್ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಖ್ಯಾತ ನಟಿ ಹಾಗೂ ಗಾಯಕಿ ರೇಷ್ಮಾ ಅವರನ್ನು ...

news

ಹುಡುಗಿಗಾಗಿ ಕಿತ್ತಾಡಿದರು; ಮಸಣ ಸೇರಿದ ಯುವಕ

ಒಂದೇ ಹುಡುಗಿಯ ವಿಷಯವಾಗಿ ಮೂವರು ಯುಕವರು ಕಿತ್ತಾಡಿಕೊಂಡಿದ್ದಾರೆ. ಮೂವರ ಜಗಳದಲ್ಲಿ ಒಬ್ಬ ಕೊಲೆಯಾಗಿ ...

news

ಧರ್ಮಸ್ಥಳ ಗ್ರಾಮಾಭಿವೃದ್ದಿ ಬ್ಯಾಂಕ್‍ನಿಂದ ಹಲವು ಯೋಜನೆ ಜಾರಿ

ರೈತರು ಜೀವನದಲ್ಲಿ ಬದಲಾವಣೆ ತರಬೇಕಾದರೆ ಅವರು ಸ್ವಾವಲಂಬಿಗಳಾಬೇಕು. ಹೀಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ದಿ ...

Widgets Magazine