ಬೆಳಗಾವಿ ನಗರದಲ್ಲಿ 3.11 ಕೋಟಿ ಹಳೇ ನೋಟುಗಳ ವಶ

ಬೆಳಗಾವಿ, ಸೋಮವಾರ, 10 ಜುಲೈ 2017 (20:22 IST)

ನಗರದಲ್ಲಿ ರೋಹನ್ ರೆಸಿಡೆನ್ಸಿ ಲಾಡ್ಜ್ ಮೇಲೆ ದಾಳಿ ನಡೆಸಿದ ಪೊಲೀಸರು 3.11 ಕೋಟಿ ಹಳೆ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.
 
500, 1000 ರೂ ಮುಖಬೆಲೆಯ ನೋಟುಗಳಿರುವ 3.11 ಕೋಟಿ ಹಣವನ್ನು ವಶಕ್ಕೆ ಪಡೆದುಕೊಂಡು ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
 
ಬೆಳಗಾವಿ ಸಿಸಿಬಿ ಪೊಲೀಸರು ಪುಣೆ, ಮುಂಬೈ, ಸಾಂಗ್ಲಿ ಮೂಲದ ಆರು ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಇದರಿಂದ ಹಳೆಯ ನೋಟು ಬದಲಾವಣೆ ಜಾಲವನ್ನು ಬೇಧಿಸಿದಂತಾಗಿದೆ. ಡಿಸಿಪಿ ಅಮರ್‌ನಾಥ್ ರೆಡ್ಡಿ ಸೀಮಾ ಲಾಟಕರ್ ಪೊಲೀಸ್ ತಂಡದ ನೇತೃತ್ವವಹಿಸಿದ್ದರು
 
ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಹಳೇ ನೋಟು ಪೊಲೀಸ್ ದಾಳಿ ಬಂಧನ Arrest Old Currency Old Notes Police Raid

ಸುದ್ದಿಗಳು

news

ಹುಣಸೂರಿನಲ್ಲಿ ಎಚ್. ವಿಶ್ವನಾಥ್ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ: ಜಿ.ಟಿ.ದೇವೇಗೌಡ

ಮೈಸೂರು: ಇತ್ತೀಚೆಗೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಎಚ್. ವಿಶ್ವನಾಥ್ ಹುಣಸೂರು ವಿಧಾನಸಭಾ ...

news

ಕುಮಾರಸ್ವಾಮಿ ಹೇಳಿಕೆಗೆ ಜಮೀರ್ ಅಹ್ಮದ್ ತಿರುಗೇಟು

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ...

news

ಉತ್ತರ ಪ್ರದೇಶದ ಲಷ್ಕರ್ ಇ ತೊಯ್ಬಾ ಅಡಗುದಾಣಗಳ ಮೇಲೆ ದಾಳಿ: ಇಬ್ಬರ ಬಂಧನ

ಜಮ್ಮು-ಕಾಶ್ಮೀರ ಪೊಲೀಸರು ಉತ್ತರಪ್ರದೇಶದಲ್ಲಿದ್ದ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಅಡಗು ತಾಣಗಳ ಮೇಲೆ ...

news

ಶೋಭಾ ಕರಂದ್ಲಾಜೆ, ಡಿವಿಎಸ್ ಬೇನಾಮಿ ಆಸ್ತಿ ತನಿಖೆಯಾಗಲಿ: ಸಚಿವ ರೈ

ಬೆಂಗಳೂರು: ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಮತ್ತು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಬೇನಾಮಿ ಆಸ್ತಿಯ ...

Widgets Magazine