ರಾಜ್ಯದ ರೈತರಿಗೆ ನ್ಯಾಯ ಸಿಗುವ ವಿಶ್ವಾಸವಿದೆ: ಮೋಹನ್ ಕಾತರಕಿ

ನವದೆಹಲಿ/ಕಲಬುರ್ಗಿ, ಬುಧವಾರ, 20 ಸೆಪ್ಟಂಬರ್ 2017 (16:50 IST)

Widgets Magazine

ನವದೆಹಲಿ/ಕಲಬುರ್ಗಿ: ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ 28 ದಿನ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ಇವತ್ತು ವಾದ ಅಂತ್ಯಗೊಂಡಿದ್ದು, ತೀರ್ಪನ್ನು ಕಾಯ್ದಿರಿಸಲಾಗಿದೆ. ತೀರ್ಪು ನಮ್ಮ ಪರವಾಗಿದೆ ಎನ್ನುವ ನಿರೀಕ್ಷೆ ಇದೆ ಎಂದು ರಾಜ್ಯದ ಪರ ವಕೀಲ ಮೋಹನ್ ಕಾತರಕಿ ಹೇಳಿದ್ದಾರೆ.


ದೆಹಲಿಯಲ್ಲಿ ಮಾತನಾಡಿದ ಅವರು, ಮೊದಲ ಬಾರಿಗೆ ಕಾವೇರಿ ವಿಷಯದಲ್ಲಿ 28 ದಿನಗಳ ಸುದೀರ್ಘ ವಿಚಾರಣೆ ನಡೆದಿದೆ. ಈ ಮೊದಲು ಆಲಮಟ್ಟಿ ವಿಷಯದಲ್ಲಿ 22 ದಿನ ವಿಚಾರಣೆ ನಡೆದಿತ್ತು. ಇಂದು ಕೇಂದ್ರ ಸರ್ಕಾರ ತನ್ನ ಅಭಿಪ್ರಾಯ ತಿಳಿಸಿದ್ದು, ಸೆಕ್ಷನ್ 6ಎ ನಲ್ಲಿ ಮಂಡಳಿ ರಚನೆಯ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಒಪ್ಪಂದಗಳು, ನೀರು ಹಂಚಿಕೆ, ಬಳಕೆ ಬಗ್ಗೆ ವಾದ-ಪ್ರತಿವಾದ ನಡೆದಿದೆ. ರಾಜ್ಯದ ರೈತರಿಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಮೋಹನ್ ಕಾತರಕಿ ಹೇಳಿದ್ದಾರೆ.

ಕಾವೇರಿ ನೀರು ಹಂಚಿಕೆ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಸುಪ್ರೀಂಕೋರ್ಟ್ ತ್ರಿ ಸದಸ್ಯ ಪೀಠ ನೀಡಿರುವ ಅಭಿಪ್ರಾಯಕ್ಕೆ  ಸಂಬಂ‍ಧಪಟ್ಟಂತೆ ರಾಜ್ಯ ಜಲಸಂಪನ್ಮೂಲ ಸಚಿವ ಕಲಬುರ್ಗಿಯಲ್ಲಿ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಷಯದಲ್ಲಿ ಸುಪ್ರೀಂಕೋರ್ಟ್ ಗೆ ಅಧಿಕಾರ ಇಲ್ಲ. ಇದು ಸಂಸತ್ ನಲ್ಲಿ ಕೈಗೊಳ್ಳಬೇಕಾದ ನಿರ್ಧಾರ. ಈಗಾಗಲೇ ಕಾವೇರಿ ನೀರು ಹಂಚಿಕೆಗೆ ಒಂದು ಸಮಿತಿ ಇದೆ. ಈಗ ಮತ್ತೊಂದು ಮಂಡಳಿ ರಚನೆ ಅನಗತ್ಯ. ಸುಪ್ರೀಂಕೊರ್ಟ್ ಅಭಿಪ್ರಾಯದಂತೆ ಮತ್ತೊಂದು ಮಂಡಳಿ ರಚನೆ ಮಾಡಿದರೆ ರಾಜ್ಯಕ್ಕೆ ನೀರು ಹಂಚಿಕೆಯಲ್ಲಿ ಅನ್ಯಾಯವಾಗಲಿದೆ. ಮಂಡಳಿ ರಚನೆ ವಿಚಾರದಲ್ಲಿ ಕೇಂದ್ರಕ್ಕೆ ಅಧಿಕಾರ ಇರುವುದರಿಂದ ರಾಜ್ಯಕ್ಕೆ ಅನ್ಯಾಯವಾಗಲ್ಲವೆಂಬ ವಿಶ್ವಾಸ ವ್ಯಕ್ತಪಡಿಸಿದರು.

ಮಂಡಳಿಯ ರಚಣೆ ಬಗ್ಗೆ ನಿಲುವು ಬದಲಿಸಿದರೆ ಕಾನೂನು ತಜ್ಞರ ಜತೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಪಾಟೀಲ್ ಹೇಳಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ವಿವಾಹವಾದ ಕೆಲವೇ ಗಂಟೆಗಳಲ್ಲಿ ಆತ್ಮಹತ್ಯೆಗೆ ಶರಣಾದ ನವದಂಪತಿಗಳು

ಪ್ರಕಾಶಂ(ಆಂಧ್ರಪ್ರದೇಶ): ಮದುವೆಗಳು ಸಾಮಾನ್ಯವಾಗಿ ಜೊತೆಯಾಗಿ ಜೀವನ ನಡೆಸುವ ಭರವಸೆಯೊಂದಿಗೆ ...

news

ಮಾಜಿ ಸಿಎಂ ಕುಮಾರಸ್ವಾಮಿಗೆ ಹೃದಯ ಶಸ್ತ್ರಚಿಕಿತ್ಸೆ, ನಾಳೆ ಆಸ್ಪತ್ರೆಗೆ ದಾಖಲು

ಇಸ್ರೇಲ್ ಪ್ರವಾಸ ಮುಗಿಸಿಕೊಂಡು ಬಂದ ಮಾಜಿ ಸಿಎಂ ಕುಮಾರಸ್ವಾಮಿ ಆರೋಗ್ಯದಲ್ಲಿ ಏರುಪೇರಾಗಿದೆ. ಶನಿವಾರ ಮಾಜಿ ...

news

ಮೆಕ್ಸಿಕೊದಲ್ಲಿ ಭೀಕರ ಭೂಕಂಪ: 250 ಕ್ಕೂ ಹೆಚ್ಚು ಜನರ ಸಾವು

ಮೆಕ್ಸಿಕೊ: ರಿಕ್ಟರ್ ಪ್ರಮಾಣದಲ್ಲಿ 7.1 ರಷ್ಟು ತೀವ್ರತೆಯನ್ನು ಹೊಂದಿರುವ ಭೂಕಂಪ ಸಂಭವಿಸಿದ್ದು 248 ಜನರು ...

news

ಉದ್ಘಾಟನೆಗೆ 24 ಗಂಟೆಗಳಿರುವಂತೆಯೇ ಕುಸಿದ ಆಣೆಕಟ್ಟು: 389 ಕೋಟಿ ನೀರುಪಾಲು

ಭಾಗಲ್ಪುರ್: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಉದ್ಘಾಟನಾ ಸಮಾರಂಭಕ್ಕೆ 24 ಗಂಟೆಗಳ ಮುಂಚೆಯೇ ...

Widgets Magazine