ಲಂಡನ್ ಯುವಕನ ಕೈ ಹಿಡಿದ ಸಿಲಿಕಾನ್ ಸಿಟಿ ಹುಡುಗಿ

ಬೆಂಗಳೂರು, ಶನಿವಾರ, 14 ಅಕ್ಟೋಬರ್ 2017 (16:18 IST)

ಬೆಂಗಳೂರು: ಸಿಲಿಕಾನ್ ಸಿಟಿಯ ಕುವರಿ ಲಂಡನ್ ಯುವಕನ ಜತೆ ಸಪ್ತಪದಿ ತುಳಿದಿದ್ದಾಳೆ.


ಬೆಂಗಳೂರು ಮೂಲದ ಶೃತಿ ಕಂಪನಿ ಕೆಲಸದ ಮೇಲೆ ಕೆಲ ವರ್ಷಗಳಿಂದ ಲಂಡನ್‌‌ನಲ್ಲಿ ವಾಸವಾಗಿದ್ದರು. ಈ ವೇಳೆ ಲಂಡನ್‌ ಮೂಲದ ಪ್ಯಾಟ್ರಿಕ್ ಜತೆ ಶೃತಿಗೆ ಪ್ರೇಮಾಂಕುರವಾಗಿತ್ತು. ಕಳೆದ ಎರಡು ವರ್ಷದಿಂದ ಶೃತಿ ಹಾಗೂ ಪ್ಯಾಟ್ರಿಕ್ ಪ್ರೀತಿಸುತ್ತಿದ್ದರು.

ಇಬ್ಬರು ಪ್ರೀತಿಸುತ್ತಿರುವ ವಿಷಯವನ್ನು ಶೃತಿ ತಮ್ಮ ಪೋಷಕರಿಗೆ ತಿಳಿಸಿ ಮದುವೆಗೆ ಒಪ್ಪಿಸಿದ್ದಾರೆ. ಇತ್ತ ಪ್ಯಾಟ್ರಿಕ್ ಮನೆಯವರು ಒಪ್ಪಿದ್ದು, ಹಿಂದೂ ಸಂಪ್ರದಾಯದಂತೆ ಹಸೆಮಣೆ ಏರಿದ್ದಾರೆ. ಬಸವನಗುಡಿಯ ಗಂಜಾಂ ಕಲ್ಯಾಣಮಂಟಪದಲ್ಲಿ ಈ ಮದುವೆ ನಡೆಯಿತು.

ಇಬ್ಬರೂ ಸಹ ಸಾಂಪ್ರದಾಯಿಕೆ ಉಡುಗೆಯಲ್ಲಿ ಮಿಂಚುತ್ತಿದ್ದರು. ದೇಶ, ಜಾತಿ ಭಾಷೆಯ ಗಡಿ ದಾಟಿದ ಪ್ರೇಮ ಪ್ರಕರಣವೊಂದು ಮದುವೆಯಲ್ಲಿ ಸುಖಾಂತ್ಯ ಕಂಡಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಜ್ವಲ ರಾಜಕೀಯ ಭವಿಷ್ಯ ದೇವೇಗೌಡರಿಂದ ತೀರ್ಮಾನ: ರೇವಣ್ಣ

ಹಾಸನ: ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್‌ರನ್ನು ಕಣಕ್ಕಿಳಿಸಬೇಕೇ ಎನ್ನುವ ಬಗ್ಗೆ ಜೆಡಿಎಸ್ ವರಿಷ್ಠ ...

news

ದೀಪಾವಳಿ ಹಬ್ಬದ ಪ್ರಯುಕ್ತ KSRTCಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ

ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರ ಅನುಕೂಲಕ್ಕಾಗಿ ಅ.17 ರಿಂದ ...

news

ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ: ವೇಣುಗೋಪಾಲ್

ಬೆಂಗಳೂರು: ನನ್ನ ವಿರುದ್ಧ ಕೇಳಿಬಂದಿರುವ ಆರೋಪ ಸುಳ್ಳು. ಒಂದು ವೇಳೆ ನಾನು ತಪ್ಪು ಮಾಡಿದ್ದು ಸಾಬೀತಾದರೆ ...

news

ಬೆಂಗಳೂರಿನಲ್ಲಿ ಭಾರೀ ಮಳೆಗೆ ಕೊಚ್ಚಿ ಹೋದ ತಾಯಿ, ಮಗಳು

ಬೆಂಗಳೂರು:ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ತಾಯಿ, ಮಗಳು ಕೊಚ್ಚಿ ಹೋಗಿರುವ ಘಟನೆ ಲಗ್ಗೆರೆಯಲ್ಲಿ ...

Widgets Magazine
Widgets Magazine