ಬೆಣ್ಣೆತೋರಾ: ಕಾಲುವೆಗಳಿಗೆ ನೀರು ಬಿಡುಗಡೆ

ಕಲಬುರಗಿ, ಶುಕ್ರವಾರ, 14 ಸೆಪ್ಟಂಬರ್ 2018 (19:41 IST)

 ಬೆಣ್ಣೆತೋರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರ ಕೋರಿಕೆಯ ಮೇರೆಗೆ ಕಾಲುವೆಗಳಿಗೆ ನೀರು ಹರಿಬಿಡಲಾಗಿದೆ.

ಬೆಣ್ಣೆತೊರಾ ಯೋಜನೆಯ ಬಲದಂಡೆ ಕಾಲುವೆ ಅಡಿಯಲ್ಲಿ ಕಿ.ಮೀ. 50.00ರವರೆಗೆ ಹಾಗೂ ಎಡದಂಡೆ ಕಾಲುವೆ ಅಡಿಯಲ್ಲಿ ಕಿ.ಮೀ. 30.00 ವರೆಗೆ ಕಾಲುವೆಯಲ್ಲಿ ಸೆಪ್ಟೆಂಬರ್ 14 ರಿಂದ 30ರವರೆಗೆ  ನೀರು ಹರಿಬಿಡಲಾಗುವುದು. ಅಚ್ಟುಕಟ್ಟು ಪ್ರದೇಶದ ರೈತರು ಕಾಲುವೆ ನೀರಿನ ಸದುಪಯೋಗ ಪಡೆಯಬೇಕೆಂದು ಅಧಿಕಾರಿಗಳು ಕೋರಿದ್ದಾರೆ.

ಹೆಬ್ಬಾಳ ಬೆಣ್ಣೆತೋರಾ ಯೋಜನೆ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅವರು ಪ್ರಕಟಣೆ ನೀಡಿದ್ದು, ಕಾಲುವೆಗಳಿಗೆ ಬಿಡುವ ನೀರನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದಿದ್ದಾರೆ. ಕೃಷಿ ಚಟುವಟಿಕೆಗಳಿಗೆ ನೀರು ಅಗತ್ಯವಾಗಿರುವುದರಿಂದ ಬೆಣ್ಣೆತೊರಾ ಯೋಜನೆಯ ಬಲದಂಡೆ ಕಾಲುವೆಗೆ ನೀರು ಬಿಡುಗಡೆಮಾಡುವಂತೆ ಅಧಿಕಾರಿಗಳಿಗೆ ಕೋರಿದ್ದರು.

 
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಮ್ಮಿಶ್ರ ಸರಕಾರ ಪತನ ಯಾರಿಂದಲೂ ಸಾಧ್ಯವಿಲ್ಲ ಎಂದ ಹೆಚ್.ಡಿ.ಆರ್

ರಾಜ್ಯದ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಸರ್ಕಾರ ಅಸ್ಥಿರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ...

news

ಟಿವಿ ರಿಪೋರ್ಟರ್ ಎಂದು ಸುಳ್ಳು ಹೇಳಿದ ವ್ಯಕ್ತಿ ಪೊಲೀಸ್ ವಶಕ್ಕೆ

ಟಿವಿ ವರದಿಗಾರ ಎಂದು ಹೇಳಿಕೊಂಡು ಓಡಾಡುತ್ತಿದ್ದ ಯುವಕನನ್ನುಪೊಲೀಸರು ವಶಕ್ಕೆ ಪಡೆದಿದ್ದಾರೆ.

news

ಶಾಲಾ ವಿದ್ಯಾರ್ಥಿ ಮೇಲೆ ಕಂಡಕ್ಟರ್ ನಿಂದ ಹಲ್ಲೆ  

ಬಸ್ ನಲ್ಲಿ ಶಾಲೆಗೆ ತೆರಳುತಿದ್ದ ವಿದ್ಯಾರ್ಥಿಗಳ ಮೇಲೆ ಕಂಡಕ್ಟರ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ...

news

ಕುಡಿಯುವ ನೀರಿನ ಸಮಸ್ಯೆ: ಪಂಚಾಯಿತಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ಕುಡಿಯುವ ನೀರಿಗಾಗಿ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಖಾಲಿ ಕೊಡ ಹಿಡಿದು ಗ್ರಾಮ ...

Widgets Magazine