ಪರಪ್ಪನ ಅಗ್ರಹಾರ ಕರ್ಮಕಾಂಡಕ್ಕೆ ಬಿಗ್ ಟ್ವಿಸ್ಟ್!

ಬೆಂಗಳೂರು, ಶುಕ್ರವಾರ, 28 ಜುಲೈ 2017 (10:49 IST)

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ನಡೆಯುತ್ತಿದೆ ಮತ್ತು ಶಶಿಕಲಾ ನಟರಾಜನ್ ರಿಂದ ಲಂಚ ಪಡೆದಿದ್ದಾರೆಂದು ಕಾರಾಗೃಹ ಇಲಾಖೆ ಡಿಜಿಪಿ ವಿರುದ್ಧ ಆರೋಪ ಮಾಡಿ ವರದಿ ನೀಡಿದ್ದ ಐಪಿಎಸ್ ಅಧಿಕಾರಿ ಡಿ.ರೂಪಾಗೆ ಸಂಕಷ್ಟ ಎದುರಾಗಿದೆ.


 
ಇನ್ನು ನಾಲ್ಕು ದಿನಗಳಲ್ಲಿ ನಿವೃತ್ತರಾಗಲಿರುವ ಡಿಜಿಪಿ ಸತ್ಯನಾರಾಯಣ ರಾವ್ ರೂಪಾ ಬೇಷರತ್ ಕ್ಷಮೆಗೆ ಆಗ್ರಹಿಸಿದ್ದು, ತಪ್ಪಿದಲ್ಲಿ 50 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ. ಇನ್ನೊಂದೆಡೆ ಶಶಿಕಲಾ ನಟರಾಜನ್ ಗೆ ನೀಡುತ್ತಿದ್ದ ವಿಐಪಿ ಸೌಲಭ್ಯ ನಿಯಮ ಬಾಹಿರವಾಗಿರಲಿಲ್ಲ ಎಂದು ಸತ್ಯನಾರಾಯಣ ರಾವ್ ಸ್ಪಷ್ಟಪಡಿಸಿದ್ದಾರೆ.
 
2017 ರ ಫೆಬ್ರವರಿಯಲ್ಲಿ 36 ನೇ ಹೆಚ್ಚುವರಿ ಸಿವಿಲ್ ಕೋರ್ಟ್ ಆದೇಶದಂತೆ ಶಶಿಕಲಾಗೆ ಎ ದರ್ಜೆಯ ಸೌಲಭ್ಯ ನೀಡಲಾಗಿದೆ. ಅದರಂತೆ ಅವರಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆಯೇ ಹೊರತು ನಿಯಮಬಾಹಿರವಾಗಿ ನಡೆದುಕೊಂಡಿಲ್ಲ ಎಂದು ಸತ್ಯನಾರಾಯಣ ರಾವ್ ಸ್ಪಷ್ಟಪಡಿಸಿದ್ದಾರೆ. ವಿಐಪಿ ಖೈದಿಯಾದ ಕಾರಣ, ಆಕೆಯ ಭದ್ರತೆಗೆ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ ಎಂದಿದ್ದಾರೆ.
 
ಇತ್ತ ಕಾರಾಗೃಹದ ಅಕ್ರಮಗಳ ಕುರಿತು ತನಿಖೆ ನಡೆಸಲು ಸರ್ಕಾರ ರಚಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದ ತಂಡ ಕೂಡಾ ರೂಪಾ ವರದಿಯಲ್ಲಿರುವ ಆರೋಪಗಳಿಗೆ ಹುರುಳಿಲ್ಲ ಎಂದಿತ್ತು. ಅಲ್ಲದೆ, ರೂಪಾ ವರದಿಯಲ್ಲಿ ಲೋಪ ದೋಷಗಳಿವೆ ಎಂದಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆಯಲ್ಲಿ ಡಿ.ರೂಪಾ ಸಂಷ್ಟಕ್ಕೀಡಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
 
ಇದನ್ನೂ ಓದಿ..  ಅಹಹಾ… ದೀಪಿಕಾ ಚುಂಬನ!.. ಬಾಯಿ ಚಪ್ಪರಿಸಿಕೊಂಡ ರಣವೀರ್ ಸಿಂಗ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

2002 ರಲ್ಲಿ ಭಾರತ ವಿರುದ್ಧ ಅಣ್ವಸ್ತ್ರ ಪ್ರಯೋಗಿಸಲು ಪ್ಲ್ಯಾನ್ ಮಾಡಿದ್ದ ಮುಷರಫ್!

ಲಾಹೋರ್: ಕಾರ್ಗಿಲ್ ಯುದ್ಧ ಹೇರಲು ಪ್ರಮುಖ ಕಾರಣರಾಗಿದ್ದ ಪಾಕಿಸ್ತಾನದ ಅಂದಿನ ಮಿಲಿಟರಿ ಮುಖ್ಯಸ್ಥ ಹಾಗೂ ...

news

ರಸ್ತೆಯಲ್ಲೇ ಪೊಲೀಸಪ್ಪನಿಗೆ ಮಹಿಳೆಯ ಕಿಸ್ಸಿಂಗ್..!

ಕೋಲ್ಕೊತ್ತಾ: ಒಳಗೆ ಸೇರಿದರೆ ಗುಂಡು ಎಂದು ಮಾಲಾಶ್ರೀ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದನ್ನು ನಾವು ...

news

ಜಗತ್ತಿನ ಅತೀ ಶ್ರೀಮಂತರ ಪಟ್ಟಿ ಬಿಡುಗಡೆ: ಬಿಲ್ ಗೇಟ್ಸ್ ಹಿಂದಿಕ್ಕಿದ ಅಮೆಜಾನ್ ಸಿಇಓ

ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ...

news

5 ಕೋಟಿ ಲಂಚ: ಶಾಸಕ ಖೂಬಾ ವಿರುದ್ಧ ಎಫ್‌ಐಆರ್ ದಾಖಲು

ಬಸವಕಲ್ಯಾಣ: ರಾಜ್ಯ ಸಭೆ ಚುನಾವಣೆಯ ವೇಳೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಜೆಡಿಎಸ್ ...

Widgets Magazine