ಬಿಜೆಪಿಯ 20 ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ: ಜಿ.ಪರಮೇಶ್ವರ್

ಹಾಸನ, ಮಂಗಳವಾರ, 7 ನವೆಂಬರ್ 2017 (18:29 IST)

ಶೀಘ್ರದಲ್ಲಿಯೇ ಬಿಜೆಪಿಯ 20 ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದ್ದಾರೆ.
ಬಿಜೆಪಿಯ 20 ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಒಲವು ತೋರಿದ್ದು ಯಾರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಬೇಕು ಎನ್ನುವ ಬಗ್ಗೆ ನಿರ್ಧಾರವಾಗಿಲ್ಲ. ಕಾಂಗ್ರೆಸ್‌ಗೆ ಬರುವ ಶಾಸಕರೆಲ್ಲಾ ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ. 
 
ನನ್ನ ಮಧ್ಯೆ ಭಿನ್ನಾಭಿಪ್ರಾಯವಿಲ್ಲ.ಸಹೋದರರಂತಿದ್ದೇವೆ. ನಾನು ಎಲ್ಲಿಯೂ ಸಿಎಂ ಆಕಾಂಕ್ಷಿ ಎಂದು ಹೇಳಿಲ್ಲ. ವಿಪಕ್ಷಗಳು ಅನಗತ್ಯ ಗೊಂದಲ ಮೂಡಿಸುತ್ತಿವೆ. ಬಿಜೆಪಿ ತಟ್ಟೇಲಿ ಹೆಗ್ಗಣ ಬಿದ್ದಿದ್ದು ನಮ್ಮತ್ತ ಕೈ ತೋರಿಸಬೇಡಿ. ಯಾವುದೇ ಯಾತ್ರೆಯಿಂದ ನಮಗೇನು ಆಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಪಕ್ಷದ ಹೈಕಮಾಂಡ್ ಆದೇಶದಂತೆ ಚುನಾವಣೆಯನ್ನು ಎದುರಿಸುತ್ತೇವೆ. ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ಪರವಾಗಿರುವುದು ಬಿಜೆಪಿ ಸೇರಿದಂತೆ ವಿಪಕ್ಷಗಳಿಗೆ ನಡುಕ ಉಂಟಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಧಾನಿ ಮೋದಿ ಭಾಷಣ ಕೇಳಿ ಮರುಳಾಗಬೇಡಿ: ಕುಮಾರಸ್ವಾಮಿ

ಮೈಸೂರು: ಪ್ರಧಾನಿ ಮೋದಿಯ ಹಿಂದಿ ಭಾಷಣ ಕೇಳಿ ಮರುಳಾಗಬೇಡಿ. ನನಗೆ ಕೆಲಸ ಮಾಡಲು ಅವಕಾಶ ಕೊಡಿ ಎಂದು ...

news

ನೋಟ್ ಬ್ಯಾನ್ ಒಂದು ಐತಿಹಾಸಿಕ ಕ್ರಮ: ಅರುಣ್ ಜೇಟ್ಲಿ

ನವದೆಹಲಿ: ನೋಟ್ ಬ್ಯಾನ್ ಒಂದು ಐತಿಹಾಸಿಕ ಕ್ರಮ. ಇದರಿಂದ ಉಗ್ರರಿಗೆ ಫಂಡಿಂಗ್ ಮಾಡುವುದಕ್ಕೆ ಲಗಾಮು ...

news

ಮತದಾರರನ್ನು ಸೆಳೆಯಲು ಬಿಜೆಪಿಯಿಂದ ಸೀರೆ, ಹಣ ಹಂಚಿಕೆ

ಹಾಸನ: ಹಾಸನದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮತದಾರರನ್ನು ಸೆಳೆಯಲು ಬಿಜೆಪಿ ಸೀರೆ ಹಣ ...

news

ಪರಿಶೀಲನೆ ನಂತರ ಫೋನ್ ಟ್ಯಾಪಿಂಗ್ ಎಲ್ಲವೂ ತಿಳಿಯಲಿದೆ: ಪರಮೇಶ್ವರ್

ಚಿಕ್ಕಮಗಳೂರು : ಫೋನ್ ಕದ್ದಾಲಿಕೆ ವಿಚಾರವನ್ನು ಸಚಿವ ಎಂ.ಬಿ.ಪಾಟೀಲ್ ಈ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದಾರೆ ...

Widgets Magazine
Widgets Magazine