Widgets Magazine

ಬಿಜೆಪಿ ಕಾರ್ಯಕರ್ತನ ಮೇಲೆ ಪಕ್ಷದ ನಗರ ಘಟಕದ ಅಧ್ಯಕ್ಷನಿಂದ ಹಲ್ಲೆ

ಬಾಗಲಕೋಟೆ| pavithra| Last Modified ಮಂಗಳವಾರ, 21 ಮೇ 2019 (10:22 IST)
ಬಾಗಲಕೋಟೆ : ಬಿಜೆಪಿಯ ನಗರ ಘಟಕದ  ಅಧ್ಯಕ್ಷರು ಹಾಗೂ ಅವರ ಸಹಚರರು ಸೇರಿ ಬಿಜೆಪಿ ಕಾರ್ಯಕರ್ತರೊಬ್ಬರ ಮೇಲೆ ತಡರಾತ್ರಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಜಮಖಂಡಿ ನಗರದ ಕಲೂತಿ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ.ಉಮೇಶ್ ಅಲಮೇಲಕರ್ ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತ, ಶ್ರೀಧರ ಕೊಣ್ಣೂರ ಹಲ್ಲೆ ಮಾಡಿದ ಜಮಖಂಡಿ ಬಿಜೆಪಿಯ ನಗರ ಘಟಕದ ಅಧ್ಯಕ್ಷ. ಜಮಖಂಡಿ ಉಪಚುನಾವಣೆ ವೇಳೆ ಇವರಿಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು. ಇದೇ ಕೋಪಕ್ಕೆ ಸೋಮವಾರ ತಡರಾತ್ರಿ ಶ್ರೀಧರ ಕೊಣ್ಣೂರ ಹಾಗೂ ಅವರ ಸಹಚರರು ಸೇರಿ ಉಮೇಶ್ ಎಂಬುವವರನ್ನು ಕಬ್ಬಿಣದ ರಾಡ್ ಹಾಗೂ ಸೋಡಾ ಬಾಟಲ್‍ನಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

 

ಈ ಘಟನೆಯಲ್ಲಿ ಉಮೇಶ್ ಅವರ ತಲೆ ಹಾಗೂ ಎಡಗಣ್ಣಿಗೆ ಗಾಯವಾಗಿದ್ದು, ಗಾಯಾಳುವನ್ನು ಜಮಖಂಡಿ ಕೆ.ಎಲ್.ಇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಮಖಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


 
ಇದರಲ್ಲಿ ಇನ್ನಷ್ಟು ಓದಿ :