ಬಿಜೆಪಿಯವರಿಗೆ ಕೋಮುವಾದದಲ್ಲಿ ಮಾತ್ರ ನಂಬಿಕೆ: ಸಿಎಂ ಆಕ್ರೋಶ

ಮೈಸೂರು, ಭಾನುವಾರ, 15 ಅಕ್ಟೋಬರ್ 2017 (13:00 IST)

ಬಿಜೆಪಿಯವರ ಪರಿವರ್ತನಾ ರ್ಯಾಲಿಗೆ ಯಾರು ಮರಳಾಗುವುದಿಲ್ಲ. ಬಿಜೆಪಿಯವರಿಗೆ ಕೋಮುವಾದದಲ್ಲಿ ಮಾತ್ರ ನಂಬಿಕೆಯಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಪರಿವರ್ತನೆ ಎಂದರೆ ಸಮಾಜ ಪರಿವರ್ತನೆಯಲ್ಲ. ಸಮಾಜ ಒಡೆಯುವುದೇ ಅವರ ಪರಿವರ್ತನೆ ಎಂದು ಕಿಡಿಕಾರಿದ್ದಾರೆ.
 
ಬಿಜೆಪಿಯವರು ಯಾವತ್ತಾದರೂ ರೈತರ, ಮಹಿಳೆಯರ ಪರ ಮಾತನಾಡಿದ್ದಾರಾ? ಕೇವಲ ಒಂದು ಸಮುದಾಯವನ್ನು ಎತ್ತಿಕಟ್ಟಿ ಮತ್ತೊಂದು ಸಮುದಾಯವನ್ನು ತುಳಿಯುವ ಕೆಲಸ ಮಾಡುತ್ತಿರುವುದು ನಾಚಿಕೆಗೇಡಿತನದ ಸಂಗತಿ ಎಂದು ಗುಡುಗಿದರು.
 
ಹಿಂದೆ ಇದ್ದ ಸರಕಾರಗಳು ಬರೀ ತಿಂದು ತೇಗಿ ಹೋಗಿವೆ. ಮಳೆ ವಿಚಾರದಲ್ಲಿ ನಮ್ಮ ಸರಕಾರ ಸಮರ್ಥವಾಗಿ ಕೆಲಸ ಮಾಡಿದೆ. ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಿದೆ. ಇಂಥ ಮಳೆಯನ್ನು ರಾಜಕಾಲುವೆಗಳು ತಡೆಯುವುದಿಲ್ಲ ಎಂದರು.
 
ಬಿಜೆಪಿ ರಸ್ತೆಗುಂಡಿಗೆ ಬಣ್ಣ ಬಳಿದು ನಾಟಕವಾಡುತ್ತಿದೆ. ಹಿಂದೆ ಇದ್ದ ಮುಖ್ಯಮಂತ್ರಿಗಳು ಏನು ಮಾಡಿದ್ದಾರೆ? ಇಂತಹ ಬಿಜೆಪಿ ನಾಯಕರಿಗೆ ನಾವು ಪಾಠ ಕಲಿಯಬೇಕಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೂರು ದಿನಗಳ ಹಿಂದೆ ಮಳೆಗೆ ಕೊಚ್ಚಿ ಹೋದವಳ ಶವ ಪತ್ತೆ?

ಬೆಂಗಳೂರು: ಬೆಂಗಳೂರಿನಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಮೂರು ದಿನಗಳಿಂದ ಎಡೆಬಿಡದೆ ಸುರಿಯತ್ತಿರುವ ...

news

ಆರ್ ಎಸ್ ಎಸ್ ಮಹಿಳೆಯರ ಚೆಡ್ಡಿ ವಿಷಯ ಕೆಣಕಿದ ರಾಹುಲ್ ಗಾಂಧಿಗೆ ಸುಷ್ಮಾ ಸ್ವರಾಜ್ ತಿರುಗೇಟು

ನವದೆಹಲಿ: ಆರ್ ಎಸ್ಎಸ್ ಮಹಿಳೆಯರು ಚೆಡ್ಡಿ ಅಥವಾ ಮಿನಿ ಸ್ಕರ್ಟ್ ನಂತಹ ಆಧುನಿಕ ಉಡುಗೊಯಲ್ಲಿ ಇರುವುದನ್ನು ...

news

ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡ ನೇಣಿಗೆ ಶರಣು

ಮುಂಬೈ: ಕಾಂಗ್ರೆಸ್ನ ಹಿರಿಯ ಮುಖಂಡ ನೇಣಿಗೆ ಶರಣಾಗಿರುವ ಘಟನೆ ಮುಲುಂದ್ ನಲ್ಲಿ ನಡೆದಿದೆ. ಮಹದೇವ್ ...

news

ನಾಪತ್ತೆಯಾಗಿದ್ದ ವ್ಯಕ್ತಿ ಮೃತದೇಹ ಸ್ನೇಹಿತನ ಮನೆಯ ಫ್ರಿಡ್ಜ್ ನಲ್ಲಿ ಪತ್ತೆ….!

ನವದೆಹಲಿ: ನಾಪತ್ತೆಯಾಗಿದ್ದ ವ್ಯಕ್ತಿ ಮೃತದೇಹ ಫ್ರಿಡ್ಜ್ ನಲ್ಲಿ ಪತ್ತೆಯಾಗಿರುವ ಘಟನೆ ದೆಹಲಿಯ ...

Widgets Magazine
Widgets Magazine